Jio Prepaid Plans : ಜಿಯೋ ಬಳಕೆದಾರರೆ ಗಮನಿಸಿ; 500 ರೂ. ಗಿಂತಲೂ ಕಡಿಮೆ ದರದಲ್ಲಿದೆ 13 ಪ್ಲಾನ್‌ಗಳು

ಟೆಲಿಕಾಂ ಜಗತ್ತಿನ ಹೆಸರಾಂತ ಕಂಪನಿ ರಿಲಯನ್ಸ್ ತನ್ನ ಜಿಯೋ ಗ್ರಾಹಕರಿಗೆ ವಿಭಿನ್ನ ರಿಚಾರ್ಜ್‌ ಪ್ಲಾನ್‌ಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋದ ಅನಿಯಮಿತ ಕರೆ ಮತ್ತು ಡೇಟಾ ಯೋಜನೆಗಳು (Jio Prepaid Plans) 500 ರೂ. ಗಿಂತ ಕಡಿಮೆ ವೆಚ್ಚದಲ್ಲಿದೆ. ಕಂಪನಿಯು ಈ ರೇಂಜ್‌ನಲ್ಲಿ 13 ವಿಭಿನ್ನ ಯೋಜನೆಗಳನ್ನು ನೀಡುತ್ತಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಂದು ಯೋಜನೆಯು ತನ್ನದೇ ಆದ ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಎಲ್ಲದರ ಜೊತೆಗೆ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

500 ರೂ. ಗಳ ಒಳಗೆ ಜಿಯೋ ನೀಡುತ್ತಿರುವ 13 ಪ್ರೀಪೇಡ್‌ ಯೋಜನೆಗಳು:

1) ರಿಲಯನ್ಸ್ ಜಿಯೋದ 119 ರೂ. ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು 1.5 ಜಿಬಿ ದೈನಂದಿನ ಡೇಟಾ, 100 ಎಸ್‌ಎಂಎಸ್ ಮತ್ತು ಅನಿಯಮಿತ ಕರೆಗಳನ್ನು ಮತ್ತು 14 ದಿನಗಳವರೆಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದೆ.

2) ಜಿಯೋ ನೀಡುತ್ತಿರುವ 149 ರೂ.ಗಳ ಯೋಜನೆಯಲ್ಲಿ ಕಂಪನಿಯು 1GB ದೈನಂದಿನ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 sms ಮತ್ತು 20 ದಿನಗಳ ಮಾನ್ಯತೆಯೊಂದಿಗೆ Jio ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ನೀಡಿದೆ.

3) ರಿಲಯನ್ಸ್ ಜಿಯೋದ 179 ರೂ. ಯೋಜನೆಯಲ್ಲಿ, ಕಂಪನಿಯು ದಿನವೊಂದಕ್ಕೆ 1GB ಡೇಟಾವನ್ನು ಮತ್ತು 100 SMS ಮತ್ತು 24 ದಿನಗಳವರೆಗೆ ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತದೆ.

4) 199 ರೂ.ಗಳ ಯೋಜನೆಯಲ್ಲಿ, ಗ್ರಾಹಕರು ದಿನಕ್ಕೆ 1.5GB ಡೇಟಾವನ್ನು ಮತ್ತು 100 sms ಮತ್ತು 23 ದಿನಗಳವರೆಗೆ ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

5) ಜಿಯೋ ನೀಡುತ್ತಿರುವ 200 ರೂ.ಗಳ ಮೇಲಿನ ರಿಚಾರ್ಜ್‌ ಪಾನ್‌ಗಳಲ್ಲಿ ಮೊದಲನೆಯದು 209 ರೂ. ಗಳ ಪ್ರಿಪೇಯ್ಡ್ ಯೋಜನೆ. ಇದರಲ್ಲಿ ಕಂಪನಿಯು ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಮತ್ತು 100SMS ನೀಡುತ್ತದೆ. ಇದರೊಂದಿಗೆ ಈ ಯೋಜನೆಯಲ್ಲಿ ಅನಿಯಮಿತ ಕರೆ ಕೂಡ ಲಭ್ಯವಿದೆ. ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

6) ನಂತರದ ಯೋಜನೆಯು 239 ರೂ. ಗಳದ್ದಾಗಿದೆ. ಈ ಯೋಜನೆಯಲ್ಲಿ ಕಂಪನಿಯು 1.5GB ಡೇಟಾ ಮತ್ತು 100 sms ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಗ್ರಾಹಕರಿಗೆ 28 ​​ದಿನಗಳವರೆಗೆ ನೀಡುತ್ತದೆ.

7) ಕಂಪನಿಯು 5G ಸಂಪರ್ಕಕ್ಕಾಗಿ ಪರಿಚಯಿಸಿದ ಜಿಯೋ ವೆಲ್‌ಕಮ್‌ ಕೊಡುಗೆಯ ಅಡಿಯಲ್ಲಿ 249 ರೂ.ಗಳ ಯೋಜನೆ ಬರುತ್ತದೆ. ಇದರಲ್ಲಿ, ಬಳಕೆದಾರರು 30 ದಿನಗಳವರೆಗೆ ಪ್ರತಿದಿನ 2GB ಡೇಟಾ, 100 sms ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.

8) 259 ರೂ.ಗಳ ಯೋಜನೆಯಲ್ಲಿ, ಕಂಪನಿಯು ಒಂದು ಕ್ಯಾಲೆಂಡರ್ ತಿಂಗಳಿಗೆ 1.5GB ದೈನಂದಿನ ಡೇಟಾ, 100 sms ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು 5G ಇಂಟರ್ನೆಟ್ ಅನ್ನು ಆನಂದಿಸಬಹುದು. ಇದಕ್ಕೆ ವೆಲ್‌ಕಮ್ ಆಫರ್‌ನ ಪ್ರಯೋಜನವನ್ನು ಪಡೆದಿರಬೇಕು.

9) ಜಿಯೋದ 296 ರೂ. ಯೋಜನೆಯಲ್ಲಿ, ಕಂಪನಿಯು ಗ್ರಾಹಕರಿಗೆ 25GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 sms ಅನ್ನು 30 ದಿನಗಳವರೆಗೆ ನೀಡುತ್ತದೆ.

10) 200 ರೂಪಾಯಿಗಳ ರೇಂಜಿನ ಯೋಜನೆಯಲ್ಲಿ ಬರುವ ಕೊನೆಯ ಪ್ಲಾನ್‌ 299 ರೂ. ಆಗಿದೆ. ಈ ಪ್ರಿಪೇಯ್ಡ್ ಯೋಜನೆಯು ಕಂಪನಿಯ ಅತ್ಯುತ್ತಮ ಮಾರಾಟದ ಯೋಜನೆಯಾಗಿದೆ. ಇದರಲ್ಲಿ, ಕಂಪನಿಯು 2GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 100 SMS ಅನ್ನು 28 ದಿನಗಳವರೆಗೆ ಪ್ರತಿದಿನ ನೀಡುತ್ತದೆ.

11) ಹೆಚ್ಚಿನ ದೈನಂದಿನ ಡೇಟಾ ಅಗತ್ಯವಿರುವವರಿಗಾಗಿ ಪರಿಚಯಿಸಿದ ಪ್ಲಾನ್‌ 349 ರೂ. ಗಳದ್ದಾಗಿದೆ. ಈ ಯೋಜನೆಯಲ್ಲಿ, ಗ್ರಾಹಕರು 2.5GB ದೈನಂದಿನ ಡೇಟಾ, ದೈನಂದಿನ 100 SMS ಮತ್ತು 30 ದಿನಗಳವರೆಗೆ ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

12) 419 ರೂ. ಯೋಜನೆಯಲ್ಲಿ ಗ್ರಾಹಕರು 3GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 100 SMS ಅನ್ನು 28 ದಿನಗಳವರೆಗೆ ಪ್ರತಿದಿನ ಪಡೆಯುತ್ತಾರೆ. ಹೆಚ್ಚಿನ ಡೇಟಾ ಅಗತ್ಯವಿರುವವರಿಗೆ ಈ ಯೋಜನೆ ಒಳ್ಳೆಯದು.

13) 500 ರೂ.ಗಳ ಒಳಗಿನ ಯೋಜನೆಯಲ್ಲಿ ಕಂಪನಿಯು ನೀಡುತ್ತಿರುವ ಕೊನೆಯ ಪ್ಲಾನ್‌ 479 ರೂ. ಗಳದ್ದಾಗಿದೆ. ಈ ಯೋಜನೆಯಲ್ಲಿ1.5GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿದೆ. ಈ ಯೋಜನೆಯು 56 ದಿನಗಳ ಮಾನ್ಯತೆ ನೀಡಲಿದೆ.

ಇದನ್ನೂ ಓದಿ : Nokia C12 : ಲೋ ಬಜೆಟ್‌ ಫೋನ್‌ ಲಾಂಚ್‌ ಮಾಡಿದ ನೋಕಿಯಾ; ಬೆಲೆ ಎಷ್ಟು ಗೊತ್ತಾ…

ಇದನ್ನೂ ಓದಿ : Hero Upcoming Electric Scooter : ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್ ಬಿಡುಗಡೆಗೆ ತಯಾರಾದ ಹೀರೋ; ಓಲಾಕ್ಕೆ ನೀಡಲಿದೆಯೇ ಸ್ಪರ್ಧೆ…

(Do you know the Jio Prepaid Plans under rs 500 with unlimited calling, data benefits, and many more)

Comments are closed.