5G Network : ವಿಶೇಷತೆಗಳಿಂದ ಕೂಡಿದ 5ಜಿ ನೆಟ್ ವರ್ಕ್

5G Network : ಮನುಷ್ಯ ಇಂದು ಏನನ್ನು ಬೇಕಾದರೂ ಬಿಟ್ಟು ಬದುಕಬಲ್ಲ  ಎಷ್ಟರಮಟ್ಟಿಗೆ ಎಂದರೆ ಮನೆ, ಮಠ, ಊರ, ತಿಂಡಿ ಎಲ್ಲವನ್ನೂ, ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಹೊಸ ಪ್ರಪಂಚವನ್ನೇ ಸೃಷ್ಟಿಸಿಕೊಂಡು ಅಲ್ಲೆ ಜೀವನ ಮಾಡುತ್ತಿರುವ ಅದೆಷ್ಟೋ ವ್ಯಕ್ತಿಗಳನ್ನು ನಾವು ಕಾಣಬಹುದು. ತಂತ್ರಜ್ಞಾನವು ದಿನಕ್ಕೊಂದು ಹೊಸ ರೂಪದಲ್ಲಿ  ಬೆಳವಣಿಗೆ ಹೊಂದುತಿದ್ದು,  ಜಗತ್ತು ಈ ತಂತ್ರಜ್ಞಾನದ ಓಟಕ್ಕೆ ಸಿಕ್ಕಿ ವೇಗವಾಗಿ ಓಡುತ್ತಿದೆ. ಇದಕ್ಕೆ ಸರಿಯಾಗಿ 5ಜಿ ನೆಟ್ವರ್ಕ್ ಅಥವಾ ಅಪ್ ಗ್ರೇಡ್  2019 ರಲ್ಲಿ US, ಜಗತ್ತಿಗೆ ಪರಿಚಯಿಸಿತು.

ಇದೇನಪ್ಪಾ 5ಜಿ ನೆಟ್ ವರ್ಕ್? ಹೇಗೆ ಇದು ಜನರಿಗೆ ಉಪಯೋಗ ಆಗುತ್ತೆ ಅನ್ನೊ ಪ್ರಶ್ನೆ ಮೊದಮೊದಲಿಗೆ ಎಲ್ಲರಿಗೂ ಇದ್ದಿದ್ದೆ, ಆದರೆ ಈಗ 5ಜಿ ನೆಟ್ ವರ್ಕ್ ಬಳಸದೆ ಮೊಬೈಲ್ ಬಳಕೆ ಮಾಡುವ ವ್ಯಕ್ತಿಯನ್ನು ಹುಡುಕೋದೇ ಕಷ್ಟವಾಗಿದೆ, ಇದೊಂತರ ಟೈಮ್ ಸೇವರ್ ಅಂದರೆ ತಪ್ಪೇನಲ್ಲ. ಕಡಿಮೆ ವಿದ್ಯುತ್ ಬಳಸಿಕೊಂಡು ಅತಿ ವೇಗವಾಗಿ ಬ್ಯಾಟರಿ ಫುಲ್ ಆಗುತ್ತದೆ. ಜೊತೆಗೆ ದೊಡ್ಡಮಟ್ಟದ ಡಾಟಾಗಳನ್ನು ಅತ್ಯಂತ ವೇಗವಾಗಿ ಕಳಿಸುವ ಸಾಮರ್ಥ್ಯ ಈ 5ಜಿ ನೆಟ್ ವರ್ಕ್ ಗೆ ಇದೆ. 4ಜಿ ಇಂಟರ್ ನೆಟ್ ವೇಗ ಮಟ್ಟ 1000MBps, ಇದ್ದರೆ 5ಜಿ ಇಂಟರ್ ನೆಟ್  ವೇಗ ಮಟ್ಟ 10009MBps.

2019 ರಲ್ಲಿ US ಹಾಗೂ ಜಪಾನ್ ಮತ್ತು ಕೆಲವೇ ಕೆಲವು ದೇಶಗಳಲ್ಲಿ 5ಜಿ ನೆಟ್ ವರ್ಕ್ ಚಾಲ್ತಿಯಲ್ಲಿತ್ತು. ವರ್ಷ ಕಳೆದಂತೆ 2020ರಲ್ಲಿ ಚೀನಾ ಮತ್ತು ಪಾಶ್ಚಿಮಾತ್ಯ ನಗರಗಳಲ್ಲಿ ಹಾಗೂ ಭಾರತದಲ್ಲಿಯೂ 5ಜಿ ಸೇವೆ ಸಂಪೂರ್ಣವಾಗಿ ಆರಂಭವಾಯಿತು. ಈ 5ಜಿ ವಿಶೇಷತೆ ಏನೆಂದರೆ ಸ್ಮಾರ್ಟ್ ಹೋಂ, ಸ್ಮಾರ್ಟ್ ಸಿಟಿ, ಹೆಲ್ತ್ ಮಾನಿಟರಿಂಗ್ ಲೋಟ್ ಡಿವೈಸ್ ಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಿಲಿಯನ್ ಗಟ್ಟಲೆ ಡಿವೈಸ್ ಗಳು ಡಾಟಾಗಳನ್ನು ಸಂಗ್ರಹ ಮಾಡುತ್ತದೆ ಮತ್ತು ಹೆಚ್ಚಿನ ಸಂವಹನವನ್ನು ನಡೆಸುತ್ತದೆ. 5ಜಿ ಸ್ಮಾರ್ಟ್ ಫೋನ್ ಇದು, ಟಿವಿ,ಫ್ರಿಡ್ಜ್, ವಾಷಿಂಗ್ ಮಿಷಿನ್ ಗಳಿಂದ ಹಿಡಿದು ಭದ್ರತಾ ವ್ಯವಸ್ಥೆಯ ವರೆಗೂ  ಉಪಯುಕ್ತವಾಗುತ್ತದೆ. ಹಾಗೆಯೇ ವಾರಿಜಾನ್ 5ಜಿ ಹೋಮ್ ನೆಟ್ ವರ್ಕ್, 5ಜಿ ಬ್ರಾಂಡ್ ಇಂಟರ್ ನೆಟ್ ಸೇವೆಯನ್ನು ಕೂಡ ನೀಡಿದೆ. 5ಜಿಯು  ಫೈಜಿ ಹೋಂ ಕಸ್ಟಮರ್ ಗೆ ಯೂಟ್ಯೂಬ್ ಟಿವಿ ಉಚಿತವಾಗಿ ನೀಡುತ್ತದೆ.

ಹೀಗೆ ಹತ್ತು ಹಲವಾರು ಉಪಯುಕ್ತವಾದ ವಿಷಯಗಳು ಈ 5ಜಿ ನೆಟ್ ವರ್ಕ್ ನಲ್ಲಿ ಅಡಗಿದೆ. 5ಜಿ ಯನ್ನು ದೇಶದೆಲ್ಲೆಡೆ ಜನರು ಉಪಯೋಗಿಸುವುದರಿಂದ ದೇಶವು ತಂತ್ರಜ್ಞಾನದಲ್ಲಿ ಮುಂದುವರಿಯುತ್ತದೆ ಹಾಗೂ ಮತ್ತಷ್ಟು ಅಭಿವೃದ್ಧಿಯಾಗುತ್ತದೆ.

ಇದನ್ನೂ ಓದಿ: Donkey Milk: ಕ್ಷೀರ ಕ್ರಾಂತಿಯತ್ತ ಕತ್ತೆ ಹಾಲು!!

ಇದನ್ನೂ ಓದಿ: Red orange Alert : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ: ರೆಡ್,ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

Evolution of 5G Network and its Benefits                                              

Comments are closed.