Facebook Loan: 2ರಿಂದ 50 ಲಕ್ಷದವರೆಗೆ ಸಾಲ ಕೊಡುತ್ತೆ ಫೇಸ್‌ಬುಕ್; ಯಾರಿಗೆ ಸಿಗುತ್ತೆ? ಪಡೆಯುವುದು ಹೇಗೆ?

ಈಗಿನ ಕಾಲದಲ್ಲಿ ಜನರು ಕೈಯಲ್ಲಿ ಹಣ ಇಟ್ಟುಕೊಳ್ಳು ವುದು ಬಹಳ ಕಡಿಮೆ, ಒಂದೋ ಖರ್ಚು ಮಾಡಿಬಿಡುತ್ತಾರೆ ಇಲ್ಲವೆ ಷೇರುಪೇಟೆ-ಚಿನ್ನ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಅರ್ಜೆಂಟಾಗಿ ಹಣ ಬೇಕು ಅಂದರೆ ಸಾಲ ತೆಗೆದುಕೊಳ್ಲಲು ಮುಂದಾಗುವುದೇ ಹೆಚ್ಚು. ಆದರೆ ಸಾಲ ಕೊಡುವವರು ಯಾರು?  ಬ್ಯಾಂಕ್‌ನವರಿಗೆ ದಾಖಲೆಗಳನ್ನು ಕೊಟ್ಟು ಪೂರೈಸಲೇ ಸಾಧ್ಯವಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಇದೀಗ ಫೇಸ್‌ಬುಕ್ ಸಹ ತನ್ನ ಬಳಕೆದಾರರಿಗೆ ಸಾಲ ಒದಗಿಸುತ್ತಿದೆ ಎಂಬ ವಿಷಯ ನಿಮಗೆ ಗೊತ್ತಿರಲಾರದು. ಈ ಸ್ಟೋರಿಯಲ್ಲಿ ನಿಮಗೆ ಫೇಸ್‌ಬುಕ್‌ನಿಂದ ಸಾಲ (Facebook Loan) ಪಡೆಯುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ.

ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ ಸಣ್ಣ ಉದ್ಯಮಗಳಿಗೆ ಸಾಲ ನೀಡುವ ಯೋಜನೆಯನ್ನು ಪರಿಚಯಿಸಿದೆ. ಫೇಸ್‌ಬುಕ್ ಬ್ಯುಸಿನೆಸ್ ಎಂಬ ಹೆಸರನ್ನು ನೀವು ಈಗಾಗಲೆ ಕೇಳಿರಬಹುದು. ಫೇಸ್‌ಬುಕ್ ಮೂಲಕ ತನ್ನ ಸಣ್ಣ ಉದ್ಯಮ- ಮನೆಯಿಂದಲೇ ನಡೆಸುವ ಕ್ರಾಫ್ಟ್‌ನಂತಹ ವಹಿವಾಟುಗಳನ್ನು ಹಲವರು ನಡೆಸುತ್ತಾರೆ. ತಮ್ಮ ಗ್ರಾಹಕರನ್ನು ತಲುಪುತ್ತಾರೆ. ವಿಸ್ತರಿಸಿಕೊಳ್ಳುತ್ತಾರೆ. ಮತ್ತು ಜನಪ್ರಿಯತೆಯನ್ನು ಸಹ ಗಳಿಸುತ್ತಾರೆ. ಇಂತಹ ಸಣ್ಣ ಉದ್ದಿಮೆದಾರರಿಗಾಗಿ ಮೆಟಾ ಒಡೆತನದ ಫೇಸ್‌ಬುಕ್ ಸಾಲ ನೀಡುವ ನೆರವನ್ನು ಸಹ ನೀಡುತ್ತಿದೆ.

ನೀವು ಸಹ ಫೇಸ್​ಬುಕ್ ಸಾಲವನ್ನು ಪಡೆಯಬೇಕಾದರೆ​ ಅಪ್ಲಿಕೇಶನ್‌ನ ಸಣ್ಣ ಉದ್ಯಮ ಯೋಜನೆ ವಿಭಾಗವನ್ನು ಗಮನಿಸಿ. ನೀವು ಈ ಯೋಜನೆಯಡಿ ನಿಮ್ಮ ಉದ್ಯಮದ ಜಾಹೀರಾತುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರಬೇಕು. ಫೇಸ್‌ಬುಕ್ ಜೊತೆ ಜಾಹೀರಾತು ಸಹಯೋಗ ಹೊಂದಿರಬೇಕು. ಈ ಸಾಲಕ್ಕೆ ಯಾವುದೇ ರೀತಿಯ ವಸ್ತು ಅಥವಾ ಆಸ್ತಿಯನ್ನು ಅಡಮಾನವಾಗಿ ಇಡಬೇಕಿಲ್ಲ ಎಂಬುದು ವಿಶೇಷ.

ಸಾಲದ ಮೊತ್ತವೆಷ್ಟು?
ಫೇಸ್‌ಬುಕ್ ನಿಮ್ಮ ಸಣ್ಣ ಉದ್ಯಮದ ಗಾತ್ರ ಮತ್ತು ಎಲ್ಲ ಲಕ್ಷಣಗಲನ್ನು ಗಮನಿಸಿ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ. ಅಂದಹಾಗೆ ಕನಿಷ್ಠ 2 ಲಕ್ಷದಿಂದ 50 ಲಕ್ಷಗಳವರೆಗೂ ಫೇಸ್‌ಬುಕ್ ಸಾಲ ಒದಗಿಸುತ್ತದೆ. ಆದರೆ ಬಡ್ಡಿದರ ಮಾತ್ರ ಕೊಂಚ ಅಧಿಕವಾಗಿದ್ದು ಶೇಕಡಾ 17 ಶೇಕಡಾ 20ರವರೆಗೆ ಸಾಲದ ಮೇಲೆ ಬಡ್ಡಿ ವಿಧಿಸಬಹುದು. ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ ನೀವು ಮಹಿಳಾ ಸಣ್ಣ ಉದ್ಯಮಿಯಾಗಿದ್ದಲ್ಲಿ ನಿಮಗೆ ಬಡ್ಡಿದರದಲ್ಲಿ ಕೊಂಚ ಕಡಿಮೆಯಾಗುವ ಸಾಧ್ಯತೆಯೂ ಇದೆ. ಶೇಕಡಾ 0.02ರಷ್ಟು ರಿಯಾಯಿತಿಯನ್ನು ಸಹ ಮಹೀಲಾ ಉದ್ಯಮಿಗಳಿಗೆ ಫೇಸ್‌ಬುಕ್ ಒದಗಿಸುತ್ತದೆ. ಫೇಸ್‌ಬುಕ್‌ನ ಈ ಸಾಲದ ನೆರವನ್ನು ಅಗತ್ಯವಿದ್ದಲ್ಲಿ ಮಾತ್ರ ಬಳಸಿಕೊಂಡು ಸಣ್ಣ ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಬಹುದಾಗಿದೆ.  

ಇದನ್ನೂ ಓದಿ: Mark Zuckerberg loss: ಫೇಸ್‌ಬುಕ್ ಷೇರು ಪತನ; ಕೆಲವೇ ನಿಮಿಷದಲ್ಲಿ ಝುಕರ್‌ಬರ್ಗ್‌ಗೆ 2.31 ಲಕ್ಷ ಕೋಟಿ ಲಾಸ್

(Facebook Loan for small business how to get loan)

Comments are closed.