ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್​ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ

ಕೇರಳದ ಚಿನ್ನಾಭರಣ ಕಳ್ಳ ಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್​ ತಮ್ಮ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ಉನ್ನತಾಧಿಕಾರಿ ಎಂ. ಶಿವಶಂಕರ್​​ರನ್ನು (Kerala gold smuggling case) ತರಾಟೆಗೆ ತೆಗೆದುಕೊಂಡಿದ್ದಾರೆ.ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಹಿರಿಯ ಐಎಎಸ್​ ಅಧಿಕಾರಿ ಎಂ. ಶಿವಶಂಕರ್​​​ ತಮ್ಮ ಅಶ್ವತ್ಥಾಮ ಓರು ಆನಾ ಎಂಬ ಪುಸ್ತಕದಲ್ಲಿ ಸ್ವಪ್ನಾ ತನಗೆ ಐಫೋನ್​ ಉಡುಗೊರೆಯಾಗಿ ನೀಡಿ ಬಲೆಗೆ ಬೀಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ಈ ಪ್ರಕರಣದಲ್ಲಿ ಶಿವಶಂಕರ್​ ವಿರುದ್ಧ ಪ್ರಮುಖ ಸಾಕ್ಷ್ಯವಾಗಿ ಬಳಕೆಯಾಗಿತ್ತು.

ನಮ್ಮಿಬ್ಬರ ನಡುವೆ ಯಾವುದೇ ನಿಕಟ ಸಂಬಂಧ ಇರಲಿಲ್ಲ ಎಂದು ಶಿವಶಂಕರ್​ ಹೇಳಿದ್ದಾರೆ. ಆದರೆ ಸ್ವಪ್ನಾ ಶಿವಶಂಕರ್​​ ತಮಗೆ ಆತ್ಮೀಯರಾಗಿದ್ದರು ಎಂದು ಹೇಳಿಕೊಂಡಿದ್ದಾರೆ. ಸ್ವಯಂ ನಿವೃತ್ತಿ ಪಡೆದ ನಂತರ ದುಬೈನಲ್ಲಿ ನೆಲೆಸಲು ಯೋಜಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಮಾಜಿ ಸ್ಪೀಕರ್ ಶ್ರೀರಾಮಕೃಷ್ಣನ್ ಅವರ ಕುಟುಂಬದ ಸ್ನೇಹಿತ ಎಂದು ಸ್ವಪ್ನಾ ಹೇಳಿದ್ದಾರೆ. ಅವರು ಅಧಿಕೃತ ಸಾಮರ್ಥ್ಯದ ಹೊರಗೆ ಭೇಟಿಯಾಗಿದ್ದಾರೆ. ಈ ಹಿಂದೆ, ರಾಜಕಾರಣಿ ಸ್ವಪ್ನಾ ಅವರನ್ನು ರಾಜತಾಂತ್ರಿಕ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು ಮತ್ತು ಅವರ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಹೇಳಿದ್ದರು.ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಎನ್‌ಐಎ ಭಾಗಿಯಾಗಿ ಸ್ವಪ್ನಾ ಮಾತನಾಡದಂತೆ ನೋಡಿಕೊಳ್ಳಲು ಶಿವಶಂಕರ್ ಯೋಜನೆ ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : ಲೈಂಗಿಕ ಕಾರ್ಯಕರ್ತೆಯಾದ ಶ್ರುತಿ ಹರಿಹರನ್ : ಏನಿದು ಕಹಾನಿ ಇಲ್ಲಿದೆ ಡಿಟೇಲ್ಸ್

ಇದನ್ನೂ ಓದಿ : ಶಾಲೆಯಲ್ಲಿ ಹಿಜಾಬ್‌ ಕೇಳುವವರು, ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿ : ಸಚಿವ ಸುನೀಲ್‌ ಕುಮಾರ್‌

Kerala gold smuggling case accused Swapna Suresh slams bureaucrat M Sivasankar for his claims

Comments are closed.