Stealth Drone Ghatak :  ಘಾಟಕ್ ಭಾರತದ ಬಹು ನಿರೀಕ್ಷಿತ ಸ್ಟೆಲ್ತ್ ಡ್ರೋನ್

Stealth Drone Ghatak : ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನದಿಂದ ನಾವು ಈಗಾಗಲೇ ಹಲವಾರು ಸಾಧನೆಯನ್ನು ಮಾಡಿದ್ದೇವೆ. ಈ ತಂತ್ರಜ್ಞಾನದ ಸಾಧನೆಯ ಹಾದಿಗೆ ಇದೀಗ ಭಾರತ ಇನ್ನೊಂದು ಅಂಶವನ್ನು ಸೇರ್ಪಡಿಸಲು ಬಯಸಿದೆ. ತನ್ನಂತೆ ತಂತ್ರಜ್ಞಾನದಲ್ಲಿ ಮುಂದಿರುವ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಈ ಅಭಿವೃದ್ಧಿ ಎನ್ನುವುದು ವಿಮಾನದ ಹಾರಾಟವನ್ನು ಬಿಟ್ಟಿಲ್ಲ. ಸಾಮಾನ್ಯವಾಗಿ ವಿಮಾನದಲ್ಲಿ ಹೋಗಬೇಕು. ಆಕಾಶದಲ್ಲಿ ಹಾರುತ್ತಾ ಹಾರುತ್ತಾ ಕೆಳಗಡೆ ಇಣುಕಿ ನೋಡಿ ಖುಷಿ ಪಡಬೇಕು ಎಂಬುದು ನಾವು ಚಿಕ್ಕವರಿದ್ದಾಗಿಂದ ಕಂಡ ಕನಸು. ಅದರ ಜೊತೆ ಅಲ್ಲಿ ಇರುವ ಏರ್ ಹೊಸ್ಟರ್ ಗಳ ಹಾಗೆ ನಾವು ಆಗಬೇಕು. ನಾವು ಒಂದು ದಿನ ವಿಮಾನ ಹಾರಿಸಬೇಕು ಎಂದೆಲ್ಲ ಕನಸನ್ನು ಕಂಡಿರುತ್ತೇವೆ. ಆದರೆ ಈಗ ಈ ಕನಸಿಗೆಲ್ಲ ಬ್ರೇಕ್ ಹಾಕುವ ಸಮಯ ಬಂದಿದೆ.

ಹೌದು. ಹಾರುವ ರೆಕ್ಕೆಯಂತೆ ಕಾಣುವ ಈ ಮಾನವ ರಹಿತ ಡ್ರೋನ್ ಮುಂದೊಮ್ಮೆ ವಾಯುಸೇನೆಗೆ ಸೇರ್ಪಡೆಗೊಂಡ ಮೇಲೆ ಇದು ಶತ್ರುಗಳ ಮೇಲೆ ಘಾತಕ ಪ್ರಹಾರ ನಡೆಸಲಿದೆ. ಸದ್ಯಕ್ಕೆ ಈ 1050 ಕೇಜಿ ತೂಕದ ಈ ಹಾರುವ ರೆಕ್ಕೆ ಒಂದು ತಾಂತ್ರಿಕ ಸಾಮರ್ಥ್ಯದ ಪ್ರದರ್ಶನಕ್ಕೆ ತಯಾರಿಸಿರುವುದು ಅಷ್ಟೇ. ತನ್ನಷ್ಟಕ್ಕೆ ತಾನೇ ಟೇಕಾಫ್ ಮಾಡಿಕೊಂಡು ಸುಮಾರು ಹದಿನೆಂಟು ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿ, ಸುಮಾರು 200 ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ ಹಾರಾಟ ನಡೆಸಿ ವಾಪಾಸ್ ಬಂದು ರನ್ ವೇ ಮೇಲೆ ತಾನಾಗಿಯೇ ಭೂಸ್ಪರ್ಶ ಮಾಡುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಈ ಪ್ರಯೋಗ ನಡೆದಿದ್ದು ಚಿತ್ರದುರ್ಗದ ಬಳಿಯ ಚಳ್ಳಕೆರೆಯ ಏರೋನಾಟಿಕಲ್ ಟೆಸ್ಟಿಂಗ್ ರೇಂಜ್ (ATR) ನಲ್ಲಿ.

ಈ ಯಶಸ್ವಿ ಪ್ರಯೋಗದಲ್ಲಿ ಭಾಗಿಯಾಗಿರುವವರು ಬೆಂಗಳೂರಿನ ADA, ADE, GTRE, IISc ಮತ್ತು ಕಾನ್ಪುರದ IIT. ಇವರ ಸತತ ಪ್ರಯತ್ನದಿಂದ ಭಾರತ ಇನ್ನೂ ಒಂದು ಹೆಜ್ಜೆಹಾಕಲು ಸಾಧ್ಯವಾಗಿದೆ. ಇದೊಂದು ದೂರಗಾಮಿ ಯೋಜನೆ. ಮುಂದೆ ಈ ಹಾರುವ ರೆಕ್ಕೆ ಹದಿನೈದು ಪಟ್ಟು ತನ್ನ ಗಾತ್ರವನ್ನು ಹಿಗ್ಗಿಸಿಕೊಂಡು, 30 ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿ, ರಡಾರುಗಳಿಗೆ ಕಾಣಿಸದ ಹಾಗೆ ಶತ್ರುಗಳ ಚಲನವಲನಗಳನ್ನು ಗಮನಿಸಿ, ಅವಶ್ಯಕತೆ ಇದ್ದರೆ ಕ್ಷಿಪಣಿಗಳಿಂದ ಅವರ ಸ್ಥಾವರಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಲಿದೆ. ಶತ್ರು ರಾಷ್ಟ್ರಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇದು ಸಹಕಾರಿಯಾಗಿರುವುದಲ್ಲದೆ. ನಮ್ಮ ದೇಶವನ್ನು ಮುನ್ನೆಡೆಸಲು ಇದು ಸಹಾಯಕವಾಗಿದೆ.

ಇದನ್ನೂ  ಓದಿ: Veronica Horror Movie : ವೆರೋನಿಕಾ ಎಂಬ ಹಾರರ್ ಸಿನಿಮಾ

ಇದನ್ನೂ  ಓದಿ: Bjp Resort Meeting : ಸಮೀಕ್ಷಾ ವರದಿಗೆ ಬೆಚ್ಚಿದ ಬಿಜೆಪಿ: ಎರಡು ದಿನಗಳ ಕಾಲ ರೆಸಾರ್ಟ್ ನಲ್ಲಿ ಎಲೆಕ್ಷನ್ ಮೀಟಿಂಗ್

(GHATAK: India’s Most Awaited Stealth Drone)

Comments are closed.