Rohit Sharma Ruled Out : ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌ : ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರ ಬಿದ್ದ ರೋಹಿತ್‌ ಶರ್ಮಾ

ಮುಂಬೈ : ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ಇದೀಗ ಟೆಸ್ಟ್‌ ತಂಡದ ಉಪನಾಯಕ ರೋಹಿತ್ ಶರ್ಮಾ (Rohit Sharma Ruled Out) ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯಿಂದ ( South Africa Test Series )ಹೊರಗುಳಿಯಲಿದ್ದಾರೆ. ರೋಹಿತ್‌ ಶರ್ಮಾ ಅವರ ಬದಲು ಭಾರತ ಎ ತಂಡದ ನಾಯಕನಾಗಿರುವ ಪ್ರಿಯಾಂಕ್‌ ಪಾಂಚಾಲ್‌ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಆದರೆ ಟೀಂ ಇಂಡಿಯಾದ ಉಪ ನಾಯಕ ಯಾರು ಅನ್ನೋದು ಇನ್ನೂ ಖಚಿತವಾಗಿಲ್ಲ.

ಡಿಸೆಂಬರ್‌ 26 ರಂದು ಆರಂಭವಾಗಲಿರುವ ಮೂರು ಪಂದ್ಯ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬೆಳೆಸಲಿದೆ. ಭಾರತ ಏಕದಿನ ಹಾಗೂ ಟಿ20 ಸರಣಿಗೆ ರೋಹಿತ್‌ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ ಟೆಸ್ಟ್‌ ಸರಣಿಗೆ ರೋಹಿತ್‌ ಶರ್ಮಾ ಉಪನಾಯಕರಾಗಿದ್ದರು. ದಕ್ಷಿಣ ಆಫ್ರಿಕಾದ ಪ್ರವಾಸದ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ಒಂದು ವಾರದಿಂದ ಅಭ್ಯಾಸ ನಡೆಸುತ್ತಿದ್ದ ವೇಳೆಯಲ್ಲಿ ರೋಹಿತ್‌ ಶರ್ಮಾ ಅವರ ಕೈಗೆ ಗಾಯವಾಗಿತ್ತು. ಇದೇ ಕಾರಣದಿಂದಾಗಿ ರೋಹಿತ್‌ ಶರ್ಮಾ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ.

ರೋಹಿತ್‌ ಶರ್ಮಾ ನ್ಯೂಜಿಲೆಂಡ್‌ ವಿರುದ್ದದ ಟಿ೨೦ ಸರಣಿಗೆ ನಾಯಕನಾಗಿ ಆಯ್ಕೆಯಾಗುತ್ತಲೇ ಮೊದಲ ಸರಣಿಯನ್ನೇ ಗೆದ್ದು ಬೀಗಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ನಾಯಕನನ್ನಾಗಿಯೂ ಆಯ್ಕೆ ಮಾಡಲಾಗಿತ್ತು. ಅದ್ಬುತ ಫಾರ್ಮ್‌ನಲ್ಲಿದ್ದ ರೋಹಿತ್‌ ಶರ್ಮಾ ಅವರಿಗೆ ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಿಂದ ವಿಶ್ರಾಂತಿಯನ್ನು ನೀಡಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಿದ್ದರೂ ಕೂಡ ರೋಹಿತ್‌ ಶರ್ಮಾ ಅವರಿಗೆ ಗಾಯದ ಸಮಸ್ಯೆ ಎದುರಾಗಿದೆ.

ಭಾರತ ದಕ್ಷಿಣ ಆಫ್ರಿಕಾ ವಿರುದ್ದ ಡಿಸೆಂಬರ್‌ 26ರಿಂದ 30 ರ ವರೆಗೆ ಸೆಂಚುರಿಯನ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಜನವರಿ 3 ರಿಂದ 7 ಹಾಗೂ ಮೂರನೇ ಟೆಸ್ಟ್‌ ಪಂದ್ಯ ಜನವರಿ 11 ರಿಂದ 15ರ ವರೆಗೆ ನಡೆಯಲಿದೆ. ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್‌ ಹಾಗೂ ಮಯಾಂಕ್‌ ಅಗರ್‌ವಾಲ್‌ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ರೋಹಿತ್‌ ಶರ್ಮಾ ಅವರ ಗಾಯದಿಂದ ಎಷ್ಟು ಸಮಯ ಟೀಂ ಇಂಡಿಯಾದಿಂದ ದೂರ ಉಳಿಯಲಿದ್ದಾರೆ ಅನ್ನೋದನ್ನು ಬಿಸಿಸಿಐ ಖಚಿತ ಪಡಿಸಿಲ್ಲ.

ಇನ್ನು ರೋಹಿತ್‌ ಶರ್ಮಾ ಬದಲು ಆರಂಭಿಕರಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಪಂಚಾಲ್‌ ಭಾರತ ಎ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದು, ಮೂರು ಇನ್ನಿಂಗ್ಸ್‌ಗಳಲ್ಲಿ 40 ಸರಾಸರಿಯಲ್ಲಿ 96 ರನ್ ಗಳಿಸಿ 120 ರನ್ ಗಳಿಸಿದರು. ಅವರು 100 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 45.52 ಸರಾಸರಿಯಲ್ಲಿ 7011 ರನ್ ಗಳಿಸಿದ್ದಾರೆ. ಅಲ್ಲದೇ 24 ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : IPL 2022 TEAM CAPTAIN : ಕರ್ನಾಟಕದ ಈ ಮೂವರು ಐಪಿಎಲ್‌ ತಂಡಗಳ ನಾಯಕರಾಗೋದು ಖಚಿತ

ಇದನ್ನೂ ಓದಿ : Ravindra Jadeja Retire : ರವೀಂದ್ರ ಜಡೇಜಾ ಕ್ರಿಕೆಟ್‌ಗೆ ಗುಡ್‌ ಬೈ : ನಿವೃತ್ತಿ ಹಿಂದಿದೆ ನೋವಿನ ಕಾರಣ

(Rohit Sharma ruled out of South Africa Test Series)

Comments are closed.