Google Play Store: ಪ್ಲೇ ಸ್ಟೋರ್‌ನಿಂದ 13 ಡೇಂಜರಸ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌

ಗೂಗಲ್ (Google) ಇತ್ತೀಚೆಗೆ ಪ್ಲೇ ಸ್ಟೋರ್‌ನಿಂದ (Play Store) 13 ಅಪ್ಲಿಕೇಶನ್‌ಗಳನ್ನು (Application) ತೆಗೆದುಹಾಕಿದೆ. ಆ ಅಪ್ಲಿಕೇಶನ್‌ಗಳನ್ನು 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದರು. ಇಷ್ಟೊಂದು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್‌ ತೆಗೆದುಹಾಕಲು ಕಾರಣ ಅದು ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿತ್ತು ಎಂಬುದು. ಭದ್ರತಾ ಸಂಶೋಧಕರು ಅದನ್ನು ಪತ್ತೆಹಚ್ಚಿದ ನಂತರ ಆ ಅಪ್ಲಿಕೇಶನ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ (Google Play Store removed apps) ತೆಗೆದುಹಾಕಲಾಯಿತು.

ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾದ ಆಂಡ್ರಾಯ್ಡ್‌ ಸಾಧನಗಳು ಬ್ಯಾಟರಿಗಳನ್ನು ವೇಗವಾಗಿ ಖಾಲಿ ಮಾಡುತ್ತಿತ್ತು. ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಮೊಬೈಲ್ ಡೇಟಾವನ್ನು ಬಳಸಿಕೊಳ್ಳುತ್ತಿತ್ತು. McAfee ಮೊಬೈಲ್ ಸಂಶೋಧನಾ ತಂಡದ ಸಂಶೋಧಕರು ಈ ದುರುದ್ದೇಶಪೂರಿತ ಕೋಡ್ ಹೊಂದಿರುವ 13 ಅಪ್ಲಿಕೇಶನ್‌ಗಳನ್ನು ಗುರುತಿಸಿದ್ದರು. ಅಪ್ಲಿಕೇಶನ್‌ಗಳು ಫ್ಲ್ಯಾಶ್‌ಲೈಟ್ (ಟಾರ್ಚ್), ಕ್ಯೂಆರ್ ರೀಡರ್‌ಗಳು, ಕ್ಯಾಮೆರಾ, ಯುನಿಟ್ ಪರಿವರ್ತಕಗಳು ಮತ್ತು ಟಾಸ್ಕ್ ಮ್ಯಾನೇಜರ್‌ ಮುಂತಾದವುಗಳನ್ನು ಒಳಗೊಂಡಿವೆ. ಈ ಅಪ್ಲಿಕೇಶನ್‌ಗಳನ್ನು ತೆರೆದಾಗ ಹೆಚ್ಚುವರಿ ಕೋಡ್ ಅನ್ನು ರಹಸ್ಯವಾಗಿ ಡೌನ್‌ಲೋಡ್ ಮಾಡುತ್ತಿತ್ತು. ಅದು ಹಿನ್ನೆಲೆಯಲ್ಲಿ ವಂಚನೆ ಮಾಡುತ್ತಿತ್ತು. ಗೂಗಲ್ ಈ ಎಲ್ಲಾ 13 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಆದರೆ ಈಗಾಗಲೇ ಆ ಅಪ್ಲಿಕೇಶನ್‌ಗಳನ್ನು ಬಳಸುವ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಅವುಗಳನ್ನು ತಕ್ಷಣ ಡಿಲೀಟ್‌ ಮಾಡುವುದು ಉತ್ತಮ. ಏಕೆಂದರೆ ಗೂಗಲ್ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿದ್ದರೂ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಂದ ಅವುಗಳನ್ನು ತೆಗೆದುಹಾಕುವುದಿಲ್ಲ.

ದುರುದ್ದೇಶಪೂರಿತ 13 ಅಪ್ಲಿಕೇಶನ್‌ನಗಳು ಯಾವವೆಂದರೆ :

  • ಹೈ ಸ್ಪೀಡ್‌ ಕ್ಯಾಮೆರಾ
  • ಸ್ಮಾರ್ಟ್‌ಟಾಸ್ಕ್‌
  • ಫ್ಲಾಶ್‌ಲೈಟ್‌+
  • ಮೆಮೊ ಕ್ಯಾಲೆಂಡರ್‌
  • ಇಂಗ್ಲೀಷ್‌–ಕೋರಿಯನ್‌ ಡಿಕ್ಷನರಿ
  • ಬುಸಾನ್‌ಬಸ್‌
  • ಕ್ವಿಕ್‌ ನೋಟ್ಸ್‌
  • ಸ್ಮಾರ್ಟ್‌ ಕರೆನ್ಸಿ ಕನ್ವರ್ಟರ್‌
  • ಜೊಯ್‌ಕೋಡ್‌
  • EZDica
  • ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ ಡೌನ್‌ಲೋಡರ್‌
  • EZ ನೋಟ್ಸ್‌
  • ಈಮೇಜ್‌ ವೋಲ್ಟ್‌–ಹೈಡ್‌ ಇಮೇಜ್‌

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಇದನ್ನೂ ಓದಿ : Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

(Google Play Store removed apps : Google Play Store has removed these 13 dangerous apps from play store)

Comments are closed.