ಗೂಗಲ್ ಫಿಕ್ಸೆಲ್ (Googe Pixel) ಈಗಾಗಲೇ ಹಲವು ಮಾದರಿಯ ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಇದೀಗ ದೀಪಾವಳಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (FlipKart Big Billion Days sale) ಆರಂಭಿಸಿದ್ದು, ಗೂಗಲ್ ಫಿಕ್ಸೆಲ್ 7 (Googe Pixel 7 ) ಅತ್ಯಂತ ಕಡಿಮೆ ಬೆಲೆ ಮಾರಾಟವಾಗುತ್ತಿದೆ.
ಗೂಗಲ್ ಪಿಕ್ಸೆಲ್ 8 (Google Pixel) ಹಾಗೂ 8ಪ್ರೋ (Google Pixel Pro) ಮಾದರಿಯ ಮೊಬೈಲ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹಿನ್ನೆಲೆಯಲ್ಲಿಗೂಗಲ್ ಫಿಕ್ಸೆಲ್ 7 (Googe Pixel 7) ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲ ಬಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.
ಗೂಗಲ್ ಫಿಕ್ಸೆಲ್ 7 (Googe Pixel 7) ಬೆಲೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 36,499 ರೂ.ಗೆ ಇಳಿಯಲಿದೆ. ಅಲ್ಲದೇ ಇನ್ನೂ ಕಡಿಮೆ ಬೆಲೆಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಫ್ಲಿಪ್‌ಕಾರ್ಟ್ (flipkart) ಹಾಗೂ ಅಮೇಜಾನ್ (Amazon)ಈ ಬಾರಿಯ ದೀಪಾವಳಿಯಲ್ಲಿ (Diwali 2023) ಎಲ್ಲಾ ವಸ್ತುಗಳ ಬೆಲೆಯಲ್ಲಿ ಬಾರೀ ರಿಯಾಯಿತಿ ಘೋಷಣೆ ಮಾಡಿವೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಗೂಗಲ್ ಪಿಕ್ಸೆಲ್ 7 ಬಾರಿ ರಿಯಾಯಿತಿ ದರದಲ್ಲಿ ಮಾರಾಟವಾಗುವುದು ಖಚಿತ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್, ಐಫೋನ್ 14 (Iphone 14) , ಪಿಕ್ಸೆಲ್ 7 ಖರೀದಿಸುವ ಗ್ರಾಹಕರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.
ಗೂಗಲ್ ಪಿಕ್ಸೆಲ್ 8 ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದ್ದಂತೆಯೇ ಗೂಗಲ್ ಫಿಕ್ಸೆಲ್‌ನ ಹಳೆಯ ಮಾದರಿಯ ಮೊಬೈಲ್‌ಗಳಿಗೆ ಬೇಡಿಕೆ ಕಡಿಮೆಯಾಗಲಿದೆ. ಇದೇ ಕಾರಣಕ್ಕೆ ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಗ್ರಾಹಕರಿಗೆ ಬಾರೀ ಆಫರ್‌ಗಳನ್ನು ಕಂಪೆನಿಗಳು ನೀಡುತ್ತಿವೆ.
ಇದನ್ನೂ ಓದಿ : OnePlus ಸ್ಮಾರ್ಟ್‌ಪೋನ್ ಮೇಲೆ ಬಾರೀ ಡಿಸ್ಕೌಂಟ್ : ದೀಪಾವಳಿ ಡಿಸ್ಕೌಂಟ್‌ನಲ್ಲಿ ಯಾವ ಪೋನ್‌ಗೆ ಎಷ್ಟು ಬೆಲೆ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಪಿಕ್ಸೆಲ್ 7 ಭಾರಿ ರಿಯಾಯಿತಿ ದೊರೆಯಲಿದೆ. ಕಳೆದ ವರ್ಷ ಗೂಗಲ್ ಫಿಕ್ಸೆಲ್ ಮೊಬೈಲ್ ಗಳನ್ನು ಫ್ಲಿಪ್‌ಕಾರ್ಟ್ ರಿಯಾಯಿತಿ ದರದಲ್ಲಿ ಮಾರಾಟ ಮಾಡಿತ್ತು. ಅದ್ರಲ್ಲೂ ಉತ್ತಮ ಕ್ಯಾಮೆರಾಗಳನ್ನು ಒಳಗೊಂಡಿರುವ ಸ್ಮಾರ್ಟ್‌ಪೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡುವ ಸಾಧ್ಯತೆಯಿದೆ.

ಗೂಗಲ್ ಫಿಕ್ಸೆಲ್ 7 (Google Pixel 7 ) ಹೊರತುಪಡಿಸಿ, ರೆಡ್ ಮಿ ನೋಟ್ 12 5ಜಿ ( Redmi Note 12 5G), ಐಪೋನ್ 12 (iPhone 12), ಐಪೋನ್ 14 (iPhone 14), ವಿವೋ ಟಿ2 ಪ್ರೋ ( Vivo T2 Pro), ನಥಿಂಗ್ ಫೋನ್ (2)ಗಳು ಕೂಡ ಈ ಬಾರಿ ದೀಪಾವಳಿಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಬಾರೀ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ರೂ 36,499 ಕ್ಕೆ ಲಭ್ಯವಿರುತ್ತದೆ. ಗೂಗಲ್ ಫಿಕ್ಸೆಲ್ ಬೆಲೆ ಸದ್ಯ 59,999ರೂ. ಇದೆ. ಆದರೆ 5G ಫೋನ್‌ನ ಪ್ರಸ್ತುತ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ರೂ 41,999 ಆಗಿದೆ. ಗ್ರಾಹಕರು ಈ ಬಾರಿಯ ಮಾರಾಟದಲ್ಲಿ 5,500 ರೂಪಾಯಿ ವರೆಗೆ ರಿಯಾಯಿತಿ ಪಡೆಯಲಿದ್ದಾರೆ.

ಇನ್ನು ಫ್ಲಿಪ್‌ಕಾರ್ಟ್ ಇದರ ಮೇಲೆ ಫ್ಲಾಟ್ ಡಿಸ್ಕೌಂಟ್ ನೀಡುತ್ತದೆಯೇ ಅಥವಾ ಒಪ್ಪಂದವು ಬ್ಯಾಂಕ್ ಕಾರ್ಡ್ ಕೊಡುಗೆಯನ್ನು ಒಳಗೊಂಡಿರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಗೂಗಲ್ ಫಿಕ್ಸೆಲ್ ಬೆಲೆ 40,000 ರೂ.ಗಿಂತ ಕಡಿಮೆ ಇರಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8
Redmi Note 12 5G, ನಥಿಂಗ್ ಫೋನ್ (2) ಬೆಲೆ ಎಷ್ಟು ಇರಲಿದೆ ಅನ್ನೋದು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಡೀಲ್‌ನಲ್ಲಿ ಬಹಿರಂಗವಾಗಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ Redmi Note 12 5Gರೂ 32,999 ಕ್ಕೆ ಲಭ್ಯವಿರಲಿದೆ. ಇನ್ನು Redmi Note 12 5G ಸಹ ಬಾರೀ ರಿಯಾಯಿತಿ ಘೋಷಣೆ ಮಾಡಿದ್ದು, 14,000ರೂ.ಗಿಂತಲೂ ಕಡಿಮೆ ಬೆಲೆ ಮಾರಾಟವಾಗಲಿದೆ.

ಇನ್ನು ಓಪ್ಪೋ ರೆನೋ (Oppo Reno 10 Pro) ಮತ್ತು ರಿಯಲ್ ಮೀ (Realme 10 Pro+) ಬೆಲೆಯು ಕ್ರಮವಾಗಿ ರೂ 35,999 ಮತ್ತು ರೂ 20,999 ಕ್ಕೆ ಇಳಿಯುತ್ತದೆ. ಅಷ್ಟೇ ಅಲ್ಲದೇ ಐಫೋನ್ 12 ಬೆಲೆ ಕೂಡ 32,999 ರೂ.ಗಳಿಗೆ ಇಳಿಕೆ ಕಾಣಲಿದೆ. ಜೊತೆಗೆ Motorola G54 ಬೆಲೆ 14,999 ರೂ.ಗೆ ಇಳಿಯುತ್ತದೆ.
ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್ ಖರೀದಿಸಿ : ಐಪೋನ್ 15 ಲಾಂಚ್ ಬೆನ್ನಲ್ಲೇ ಐಪೋನ್ 11ರ ಮೇಲೆ ಬಾರೀ ಡಿಸ್ಕೌಂಟ್
ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy Z Fold 5), ಮೋಟೋ ಜಿ( Moto G84), ಮೋಟೋರೊಲಾ (Motorola Razr Ultra), ಸ್ಯಾಮ್ಸ್‌ಸಂಗ್ ಗ್ಯಾಲಕ್ಸಿ (Samsung Galaxy S23) ಮತ್ತು ಹೆಚ್ಚಿನವುಗಳಲ್ಲಿ ಕೆಲವು ರಿಯಾಯಿತಿಗಳು ಸಹ ಇರುತ್ತವೆ. ಆದರೆ ಬೆಲೆ ಎಷ್ಟಿರಲಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಜೊತೆಗೆ ಈ ಬಾರಿ ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ಗೆ ಕೂಡ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ.

ಐಪೋನ್ ಕಂಪೆನಿ ಬೆಲೆಯನ್ನು ಘೋಷಣೆ ಮಾಡಿಲ್ಲ ಆದರೂ ಕೂಡ ಐಫೋನ್ 14 ಮತ್ತು ಐಫೋನ್ 14 ಪ್ಲಸ್ 50,000 ಮತ್ತು 60,000 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ಆಪಲ್ ಹೊಸ ಐಪೋನ್ 15 ( iPhone 15) ಬಿಡುಗಡೆಯ ನಂತರದಲ್ಲಿ ಐಪೋನ್ 14 (iPhone 14) ನ ಮೂಲ ಬೆಲೆ ಈಗ 69,900 ರೂ.ಇದ್ದು, ಇನ್ನಷ್ಟು ಇಳಿಕೆ ಕಾಣಲಿದೆ ಎನ್ನಲಾಗುತ್ತಿದೆ.
Google Pixel 7 price Drop 36499 Flipkart Big Billion Days Sale I Phone 14 Vivo Oppo Price Down