Social Media : ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ ಸ್ಥಾಪನೆಗೆ ಮುಂದಾದ ಸರ್ಕಾರ

ಟ್ವಿಟರ್‌, ಫೇಸ್‌ಬುಕ್‌, ಮುಂತಾದ ಸಾಮಾಜಿಕ ಮಾಧ್ಯಮ (Social Media) ಗಳಲ್ಲಾಗುವ ಕಂಟೆಂಟ್‌ ಮಾಡರೇಶನ್‌ನಂತಹ ತೊಂದರೆಗಳನ್ನು ಪರಿಹರಿಸುವ ಸಲುವಾಗಿ ಐಟಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಶುಕ್ರವಾರ, ಮಾಹಿತಿ ತಂತ್ರಜ್ಞಾನ ನಿಯಮಗಳು, 2021 (Intermediary Guidelines and Digital Media Ethics Code) ಅನ್ನು ತಿದ್ದುಪಡಿ ಮಾಡಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಇದರಲ್ಲಿ ಸರ್ಕಾರ ನೇಮಿಸಿದ ಸಮಿತಿಯು ಟ್ವಿಟರ್, ಫೇಸ್‌ಬುಕ್‌, ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಗುವ ಕಂಟೆಂಟ್ ಮಾಡರೇಶನ್ ಅಥವಾ ಟೇಕ್‌ಡೌನ್‌ಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಾಗುವ ತೊಂದರೆಗಳನ್ನು ಪರಿಹರಿಸುವ ಸಲುವಾಗಿ ಹೊಸ ಐಟಿ ನಿಯಮಗಳಿಗೆ ಮಾಡಿದ ಬದಲಾವಣೆಯು ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗಳ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದೆ. ಇದು ಮೆಟಾದ ಒಡೆತನದಲ್ಲಿರುವ ಫೇಸ್ಬುಕ್, ಟ್ವಿಟರ್‌ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಬಳಕೆದಾರರು ಹೊಂದಿರಬಹುದಾದ ಸಮಸ್ಯೆಗಳನ್ನು ಪರಿಹರಿಸುತ್ತದೆ.

30 ದಿನಗಳಲ್ಲಿ ಕುಂದುಕೊರತೆ ಪರಿಹಾರ:
‘ಕೇಂದ್ರ ಸರ್ಕಾರವು, ಅಧಿಸೂಚನೆಯ ಮೂಲಕ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು, 2022 ರ ಪ್ರಕಾರ ಪ್ರಾರಂಭದ ದಿನಾಂಕದಿಂದ ಮೂರು ತಿಂಗಳೊಳಗೆ ಒಂದು ಅಥವಾ ಹೆಚ್ಚಿನ ಕುಂದುಕೊರತೆ ಮೇಲ್ಮನವಿ ಸಮಿತಿಗಳನ್ನು ಸ್ಥಾಪಿಸುತ್ತದೆ’ ಎಂದು ಅಧಿಸೂಚನೆ ತಿಳಿಸಿದೆ.

ಪ್ರತಿ ಕುಂದುಕೊರತೆ ಮೇಲ್ಮನವಿ ಸಮಿತಿಯು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಮತ್ತು ಇಬ್ಬರು ಪೂರ್ಣ ಸಮಯದ ಸದಸ್ಯರನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಬ್ಬರು ಪದನಿಮಿತ್ತ ಸದಸ್ಯ ಮತ್ತು ಇಬ್ಬರು ಸ್ವತಂತ್ರ ಸದಸ್ಯರಾಗಿರಬೇಕು ಎಂದು ತಿಳಿಸಿದೆ. ಕುಂದುಕೊರತೆ ಅಧಿಕಾರಿಯ ನಿರ್ಧಾರದಿಂದ ಬಾಧಿತರಾದ ಯಾವುದೇ ವ್ಯಕ್ತಿಯು ಕುಂದುಕೊರತೆ ಅಧಿಕಾರಿಯಿಂದ ಸಂವಹನವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಕುಂದುಕೊರತೆ ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸ ಬಹುದಾಗಿದೆ ಎಂದು ಅದು ಹೇಳಿದೆ. ಕುಂದುಕೊರತೆ ಮೇಲ್ಮನವಿ ಸಮಿತಿಯು ದೂರುದಾರರು ನೀಡಿದ ಮೇಲ್ಮನವಿಯನ್ನು ತ್ವರಿತವಾಗಿ ಬಗೆಹರಿಸುತ್ತದೆ. ಮತ್ತು ಮೇಲ್ಮನವಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಮನವಿಯನ್ನು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಿದ್ದುಪಡಿ ಮಾಡಲಾದ ನಿಯಮಗಳ ಅಡಿಯಲ್ಲಿ, ಕಂಪನಿಗಳು 24 ಗಂಟೆಗಳ ಒಳಗೆ ಬಳಕೆದಾರರಿಂದ ದೂರುಗಳನ್ನು ಅಂಗೀಕರಿಸಬೇಕು ಮತ್ತು ಮಾಹಿತಿ ತೆಗೆದುಹಾಕಬೇಕು ಎಂದು ವಿನಂತಿ ಮಾಡಿದ ಸಂದರ್ಭದಲ್ಲಿ 15 ದಿನಗಳು ಅಥವಾ 72 ಗಂಟೆಗಳ ಒಳಗೆ ಅವುಗಳನ್ನು ಪರಿಹರಿಸಬೇಕಾಗಿದೆ.

ಇದನ್ನೂ ಓದಿ :Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಇದನ್ನೂ ಓದಿ : NHM Karnataka Recruitment 2022 : ನರ್ಸಿಂಗ್ ಕೋರ್ಸ್‌ ಮಾಡಿದವರಿಗೆ ಸುವರ್ಣಾವಕಾಶ; 1048 ಹುದ್ದೆಗಳಿಗೆ ಅರ್ಜಿ ಆಹ್ವಾನ

(Government will be ready to establish Grievance Appellate Committees for social media users)

Comments are closed.