KL Rahul : ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಆಡಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

ಪರ್ತ್: (KL Rahul ) ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ಸೂಪರ್-12 ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್(KL Rahul ) ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮೂಡಿರುವ ಹೊತ್ತಲ್ಲೇ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ (Team India Batting coach Vikram Rathore) ಈ ಬಗ್ಗೆ ಬಿಗ್ ಅಪ್’ಡೇಟ್ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ ಟೂರ್ನಿಯ ಮೊದಲ ಎರಡೂ ಪಂದ್ಯಗಳಲ್ಲಿ ರಾಹುಲ್(KL Rahul ) ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಕೇವಲ 4 ರನ್ ಗಳಿಸಿ ಔಟಾಗಿದ್ದ ರಾಹುಲ್(KL Rahul ) , ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ 9 ರನ್ನಿಗೆ ವಿಕೆಟ್ ಒಪ್ಪಿಸಿದ್ದರು.

ಸತತ ಎರಡು ವೈಫಲ್ಯಗಳನ್ನುಎದುರಿಸಿರುವ ಕಾರಣ ಉಪನಾಯಕ ರಾಹುಲ್ ಅವರನ್ನು ಆಡುವ ಬಳಗದಿಂದ ಕೈಬಿಡಬೇಕೆಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ರಾಹುಲ್ ಅವರ ಬದಲು ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಆಡಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಹಾಗಾದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಪರ್ತ್’ನ ವಾಕಾ (Western Australia Cricket Association) ಮೈದಾನದಲ್ಲಿ ನಡೆಯಲಿರುವ ಗ್ರೂಪ್-2ರ ಪಂದ್ಯದಲ್ಲಿ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲ್ವಾ? ಈ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್’ನ ಲೆಕ್ಕಾಚಾರವೇನು? ಈ ಕುರಿತಾಗಿ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ : puneeth rajkumar :ಅಪ್ಪು ಇಲ್ಲದ ಒಂದು ವರ್ಷ : ವಿಧಿ ಒಂದು ಪವಾಡ ಮಾಡಬಾರದೇ ಅಂತಿದ್ದಾರೆ ಕರುನಾಡಿನ ಜನ

“ಕೆ.ಎಲ್ ರಾಹುಲ್ ಅವರ ಜಾಗದಲ್ಲಿ ರಿಷಭ್ ಪಂತ್ ಅವರನ್ನು ಆಡಿಸುವ ಯಾವ ಯೋಚನೆಯೂ ಟೀಮ್ ಮ್ಯಾನೇಜ್ಮೆಂಟ್ ಮುಂದಿಲ್ಲ. ಒಬ್ಬ ಗುಣಮಟ್ಟದ ಆಟಗಾರನ ಸಾಮರ್ಥ್ಯವನ್ನು ಕೇವಲ ಎರಡು ಪಂದ್ಯಗಳಲ್ಲಿ ಅಳೆಯಲಾಗದು. ಅಭ್ಯಾಸ ಪಂದ್ಯಗಳಲ್ಲಿ ರಾಹುಲ್ ಉತ್ತಮವಾಗಿ ಆಡಿದ್ದಾರೆ. ನಾವು ರಾಹುಲ್ ಅವರ ಬೆನ್ನಿಗೆ ನಿಲ್ಲುತ್ತೇವೆ, ಮುಂದಿನ ಪಂದ್ಯಗಳಲ್ಲೂ ರಾಹುಲ್ ಅವರೇ ನಮ್ಮ ಇನ್ನಿಂಗ್ಸ್ ಆರಂಭಿಸಲಿದ್ದಾರೆ”.

  • ವಿಕ್ರಮ್ ರಾಥೋಡ್, ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

ಇದನ್ನೂ ಓದಿ : Siddaramaiah’s contest from Kolar :ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ದೃಢ : ಮುಂದಿನ ತಿಂಗಳಿನಿಂದಲೇ ಪ್ರಚಾರ ಕಾರ್ಯ

ರಾಹುಲ್ ಅವರನ್ನು ಆಡುವ ಬಳಗದಿಂದ ಕೈ ಬಿಟ್ಟು ರಿಷಭ್ ಪಂತ್ ಅವರನ್ನು ಆಡಿಸುವ ಯಾವುದೇ ಯೋಜನೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್’ಗಿಲ್ಲ. ರಾಹುಲ್ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರೂ, ಅವರ ಸಾಮರ್ಥ್ಯದ ಅರಿವು ತಂಡಕ್ಕಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ರಾಹುಲ್ ಅವರನ್ನೇ ನಾಯಕ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಮುಂದುವರಿಸಲು ಭಾರತ ತಂಡ ನಿರ್ಧರಿಸಿದೆ.

ಇದನ್ನೂ ಓದಿ : Matte Mayamruga Serial:’ಮತ್ತೆ ಮಾಯಾಮೃಗ’ : ಅಕ್ಟೋಬರ್‌ 31 ರಿಂದ ಸಿರಿ ಕನ್ನಡ ಆರಂಭ

KL Rahul : ದಕ್ಷಿಣ ಆಫ್ರಿಕಾ ವಿರುದ್ಧದದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7.ರವಿಚಂದ್ರನ್ ಅಶ್ವಿನ್, 8.ಅಕ್ಷರ್ ಪಟೇಲ್, 9.ಮೊಹಮ್ಮದ್ ಶಮಿ, 10.ಭುವನೇಶ್ವರ್ ಕುಮಾರ್, 11.ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ಸಂಜೆ 4.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ವಾಕಾ ಕ್ರಿಕೆಟ್ ಮೈದಾನ, ಪರ್ತ್
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

(KL Rahul) Will India’s vice-captain KL Rahul (KL Rahul) lose his place in the T20 World Cup (T20 World Cup 2022) Super-12 match to be held against South Africa on Sunday? When such a question was raised, Team India’s batting coach Vikram Rathore gave a big update on this.

Comments are closed.