Punith Rajkumar : ಅಪ್ಪು ಜೀವನ ಸಾಧನೆ ಶಾಲಾ ಪಠ್ಯಕ್ಕೆ ಸೇರಿಸಿ : ಸಿಎಂ ಬೊಮ್ಮಾಯಿಗೆ ಅಭಿಮಾನಿಗಳ ಮನವಿ

(Punith Rajkumar ) ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ . ಕಂಠೀರವ ಸ್ಟುಡಿಯೋ ಬಳಿ ಇಂದು ಅಪ್ಪು ಅವರ ಪುಣ್ಯಸ್ಮರಣೆಯಿದ್ದು, ಜನಸಾಗರ ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ಅಪ್ಪು(Punith Rajkumar ) ಅವರ ಅಭಿಮಾನಿಯೊಬ್ಬರು ಅವರ ಜೀವನ ಮತ್ತು ಸಾಧನೆಯ ಕಥೆಯನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸುವಂತೆ ಅಭಿಮಾನಿಗಳ ಸಹಿಗಳನ್ನು ಸಂಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಅಪ್ಪುವನ್ನು ಕಳೆದುಕೊಂಡ ಅಭಿಮಾನಿಯೊಬ್ಬರು ಪುನೀತ್‌ ರಾಜ್ ಕುಮಾರ್‌(Punith Rajkumar ) ಅವರ ಜೀವನ ಮತ್ತು ಸಾಧನೆಯ ಕುರಿತಾದ ಕಥೆಯನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ನೀಡಿದ್ದಾರೆ. ಈಗಾಗಲೇ ಆರನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಡಾ.ರಾಜ್‌ ಕುಮಾರ್‌ ಅವರ ಜೀವನ ಸಾಧನೆಯ ಕುರಿತು ಪಠ್ಯವನ್ನು ಸೇರಿಸಲಾಗಿದೆ . ಅಂತೆಯೇ ಅಪ್ರತಿಮ ಬಾಲ ಕಲಾವಿದರಾದ ಡಾ.ಪುನೀತ್‌ ರಾಜ್‌ ಕುಮಾರ್‌ ಅವರ ಸಾಧನೆ ಮತ್ತು ಜೀವನ ಕಥೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಬೇಕೆಂದು ಅಪ್ಪು ಅಭಿಮಾನಿಯೊಬ್ಬರು ಮನವಿ ಮಾಡಿದ್ದಾರೆ .

ಇದನ್ನೂ ಓದಿ : puneeth rajkumar :ಅಪ್ಪು ಇಲ್ಲದ ಒಂದು ವರ್ಷ : ವಿಧಿ ಒಂದು ಪವಾಡ ಮಾಡಬಾರದೇ ಅಂತಿದ್ದಾರೆ ಕರುನಾಡಿನ ಜನ

ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿನ ಅಪ್ಪು ಅವರ ಅಭಿಮಾನಿ ದೇವರಾಜ್‌ ಅರಸು ಎಂಬುವವರು ನೂರಾರು ಜನರಿಂದ ಈ ಕುರಿತು ಸಹಿಯನ್ನು ಸಂಗ್ರಹ ಮಾಡಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿಗೆ ಕನ್ನಡ ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ಕಥೆಯನ್ನು ಸೇರಿಸುವಂತೆ ಪತ್ರವನ್ನು ಕೂಡ ಬರೆದಿದ್ದಾರೆ . ನಟ ಪುನೀತ್‌ ರಾಜ್‌ ಕುಮಾರ್‌ ಅವರ ಜೀವನ ಶೈಲಿ, ಸರಳತೆ, ಸ್ನೇಹ, ಸಾಮಾಜಿಕ ಸೇವೆಗಳು ಪ್ರತಿಯೊಬ್ಬ ಮಕ್ಕಳಿಗು ಸ್ಪೂರ್ತಿಯಾಗಬೇಕು ಎಂದು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿಯನ್ನಿಟ್ಟಿದ್ದಾರೆ .

ಇದನ್ನೂ ಓದಿ : Karnataka Rajyotsava 2022 : ಕನ್ನಡ ರಾಜ್ಯೋತ್ಸವದ ಇತಿಹಾಸ, ಮಹತ್ವ, ಆಚರಣೆ : ಸಂಪೂರ್ಣ ಮಾಹಿತಿ

ಮದಗಜ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡವು ವಿಜಯ ಯಾತ್ರೆಯನ್ನು ನಡೆಸಿ ಮಂಡ್ಯಕ್ಕೆ ಬೇಟಿ ನೀಡಿದ ಸಮಯದಲ್ಲಿ ನಟ ಶ್ರೀ ಮುರುಳಿ ಅವರು ಅಪ್ಪು ಅವರ ಜೀವನ ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸುವ ವಿಚಾರವಾಗಿ ಒತ್ತಾಯಿಸಿದ್ದಾರೆ . ಅಪ್ಪು ಅವರು ಸಾಧನೆ ಮಾಡಿದ್ದಾರೆ , ಅದನ್ನು ನಾವು ಗೌರವಿಸಬೇಕು, ಅಭಿಮಾನಿಗಳ ಮನವಿ ಸರಿಯಾಗಿದೆ . ಇದರ ಬಗ್ಗೆ ಗಮನ ಹರಿಸಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ನಟ ಶ್ರೀ ಮುರುಳಿ ಅವರು ಕೂಡ ಹೇಳಿದ್ದಾರೆ.

(Punith Rajkumar) It has been a year since Power Star Puneeth Rajkumar left us all. Appu’s funeral is being held near Kantheerava studio today and people are pouring in. After this, a fan of Appu (Punith Rajkumar) requested the state Chief Minister Basavaraja Bommai to collect the signatures of fans to include the story of his life and achievements in Kannada textbooks.

Comments are closed.