Golden Temple: ಗೋಲ್ಡನ್​​ ಟೆಂಪಲ್​ನಲ್ಲಿ ಕೊಲೆ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ..!

ಸಿಖ್​ ಜನಾಂಗದ ಪವಿತ್ರ ಕ್ಷೇತ್ರವಾದ ಅಮೃತಸರದ ಹರ್ಮಂದಿರ್​ ಸಾಹಿಬ್​ ಗುರುದ್ವಾರದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್​​ನ ಕಾಂಗ್ರೆಸ್​ ಸರ್ಕಾರವು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಗುರುದ್ವಾರವನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಕಾರಣಕ್ಕೆ ಗುರುದ್ವಾರದಲ್ಲಿ (Golden Temple) ಆವರಣದಲ್ಲಿ ಯುವಕನನ್ನು ಭಕ್ತರು ಬರ್ಬರವಾಗಿ ಕೊಲೆಗೈದಿದ್ದರು.

ಪಂಜಾಬ್​ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸುಖಜೀಂದರ್​ ಸಿಂಗ್​ ರಾಂಧವಾ ಡಿಸೆಂಬರ್​ 19ರಂದು ಕೊಲೆಯಾದ ಯುವಕನ ಬಗ್ಗೆ ಯಾವುದೇ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತನಿಖೆಯ ಮೂಲಕ ತಿಳಿಯಬೇಕಿದೆ ಎಂದು ಹೇಳಿದರು.

ಅಮೃತಸರದಲ್ಲಿ ಭಾನುವಾರ ಈ ವಿಚಾರವಾಗಿ ಮಾತನಾಡಿದ ಅವರು ಉಪಕಮಿಷನರ್​, ಪೊಲೀಸ್​ ಕಮಿಷನರ್​ ಹಾಗೂ ಎಸ್​ಎಸ್​ಪಿ ಸೇರಿದಂತೆ ಐಜಿಪಿ ಜೊತೆಯಲ್ಲಿ ಅಮೃತಸರದ ಗ್ರಾಮಾಂತರ ಹಾಗೂ ಭದ್ರತಾ ಸಿಬ್ಬಂದಿಯ ಜೊತೆ ಈ ವಿಚಾರವಾಗಿ ಸಭೆ ನಡೆಸಿದ್ದೇನೆ. ಜೊತೆಯಲ್ಲಿ ಶ್ರೀ ಗುರುದ್ವಾರ ಪ್ರಬಂಧಕ್​​ ಸಮಿತಿಯ ಬಳಿಯೂ ಮಾತನಾಡಿದ್ದೇನೆ. ಈ ಪ್ರಕರಣದ ಸಂಬಂಧ ತನಿಖೆಗೆ ಎಸ್​ಐಟಿ ರಚನೆಯಾಗಿದೆ. ವಿಶೇಷ ತನಿಖಾ ತಂಡ ಸಿದ್ಧಪಡಿಸಿದ ತನಿಖೆಯ ವರದಿಯನ್ನು ಎರಡು ದಿನಗಳ ಒಳಗಾಗಿ ಸಲ್ಲಿಸುವಂತೆ ಪೊಲೀಸ್​ ಉಪಕಮಿಷನರ್​​ ಪರ್ಮಿಂದರ್​ ಸಿಂಗ್​ ಭಂಡಾಲ್​ಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಈ ವಿಚಾರವಾಗಿ ಮಾಧ್ಯಮಗಳ ಜೊತೆಯೂ ಮಾತನಾಡಿದ ಸುಖಜೀಂಧರ್​ ಸಿಂಗ್​ ರಾಂಧವಾ, ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಮೃತ ಯುವಕ ಬೆಳಗ್ಗೆ 11:30 ಸುಮಾರಿಗೆ ಗುರುದ್ವಾರ ಪ್ರವೇಶಿಸಿದ್ದಾನೆ. ಹಾಗೂ ಅಕಲ್​ ತಖ್ತ್​ನಲ್ಲಿ ಕೆಲ ಕಾಲ ಇದ್ದನು. ಈತನ ಅಖಲ್​ ತಖ್ತ್​ ಎದುರು ಕೆಲ ಕಾಲ ಮಲಗಿದ್ದ ಎಂದು ಹೇಳಿದರು.

ಇದನ್ನು ಓದಿ: Omicron Udupi : ಉಡುಪಿಗೂ ಕಾಲಿಟ್ಟ ಒಮಿಕ್ರಾನ್‌ ಸೋಂಕು : ಮತ್ತೆ 5 ಹೊಸ ಪ್ರಕರಣ ಪತ್ತೆ

ಇದನ್ನೂ ಓದಿ : Shocking Video :ಮೊಬೈಲ್​ ಆಸೆಗಾಗಿ ಮಹಿಳೆ ಮೇಲೆ ದೌರ್ಜನ್ಯ..! ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿದ ಪಾಪಿಗಳು..!

ಇದನ್ನೂ ಓದಿ : Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್‌ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ಇದನ್ನೂ ಓದಿ : SSC CGL exam : ಉದ್ಯೋಗಾಕಾಂಕ್ಷಿಗಳ ಗಮನಕ್ಕೆ : ಎಸ್​ಎಸ್​ಸಿ ಸಿಜಿಎಲ್​ ಪರೀಕ್ಷೆಗೆ ದಿನಾಂಕ ನಿಗದಿ

Punjab: State govt forms SIT to investigate alleged sacrilege at Golden Temple

Comments are closed.