Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ

ಈಕೆ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಫೇಮಸ್ ಆಗಿದ್ದು ಮಾತ್ರ ಮೈಜುಮ್ಮೆನಿಸುವಂತೆ ಮಾಡೋ ಡ್ಯಾನ್ಸ್ ಹಾಗೂ ಎಂತಹವರನ್ನು ಸೆಳೆಯುವ ಮಾದಕ ಸೌಂದರ್ಯದಿಂದ. ಬಿಟೌನ್ ನಲ್ಲಿ ಐಟಂ ಡ್ಯಾನ್ಸ್ ನಿಂದಲೇ ಕೋಟಿಗಟ್ಟಲೇ ದುಡಿದ ತಾರೆ ಈ ನೋರಾ ಪತೇಹಿ ( Nora Fatehi ). ಮೂಲತಃ ಕೆನಡಾದ ನೋರಾ ಪತೇಹಿ ಇದುವರೆಗೂ ಡ್ಯಾನ್ಸ್ ಮಾಡಿರೋ ಹಾಡುಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಪ್ರತಿಯೊಂದು ಹಾಡು ಮಿಲಿಯನ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಬಾಲಿವುಡ್ ಮಾತ್ರವಲ್ಲ ಸೌತ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿರುವ ನೋರಾ ಪತೇಹಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬೇಡಿಕೆ ಇದೆ. ಅವರ ಒಂದೊಂದು ಪೋಟೋಶೂಟ್ ಗಳು ಕೂಡ ಲಕ್ಷಾಂತರ ಲೈಕ್ಸ್ ಪಡೆಯುತ್ತೆ. ಮಾದಕ ನೋಟ,ಬೋಲ್ಡ್ ನಡೆ, ಕಣ್ಮನಸೆಳೆಯುವ ಸೌಂದರ್ಯದಿಂದಲೇ ಬಾಲಿವುಡ್ ನ ಹಾಟ್ ಫೆವರಿಟ್ ಎನ್ನಿಸಿರುವ ನೋರಾ ಪತೇಹಿ ಹಿಟ್ ಹಾಡುಗಳ ಲಿಸ್ಟ್ ದೊಡ್ಡದಿದೆ.

ಬಾಹುಬಲಿ ಸಿನಿಮಾದ ಮನೋಹರಿ ಹಾಡಿನ ಮೂಲಕ ನೋರಾ ಐಟಂ ಸಾಂಗ್ ಗೆ ಎಂಟ್ರಿ ಕೊಟ್ಟರು. ಈ ಹಾಡು ನೋರಾ ಇನ್ನಿಲ್ಲದ ಜನಪ್ರಿಯತೆ ತಂದು ಕೊಟ್ಟಿತು. ಮನೋಹರಿ ಹಾಡು ನೂರಾರು ಮಿಲಿಯನ್ ವೀವ್ಸ್ ಪಡೆಯುತ್ತಿದ್ದಂತೆ ನೋರಾ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ದಿಲ್‌ ಬರ್ ದಿಲ್ ಬರ್ ಹಾಡಿಗೆ ನೋರಾ ಮನಸೆಳೆಯುವಂತೆ ನೃತ್ಯ ಮಾಡಿದ್ದರು. ಈ ಹಾಡು ಬರೋಬ್ಬರಿ 67.8 ಕೋಟಿ ವೀವ್ಸ್ ಪಡೆದುಕೊಂಡಿದೆ.

ನೋರಾ ಡ್ಯಾನ್ಸ್ ಮಾಡಿದ ಓ ಸಾಕಿ ಓಸಾಕಿ ಹಾಡು ಕೂಡ ಸಖತ್ ವೈರಲ್ ಆಗಿದ್ದು ಬರೋಬ್ಬರಿ 33 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಸ್ಟ್ರೀಟ್ ಡ್ಯಾನ್ಸರ್ ತ್ರಿಡಿ ಸಿನಿಮಾದಲ್ಲೂ ಗರ್ಮಿ ಹಾಡಿನ ಮೂಲಕ ಮೋರಾ ಮೋಡಿ ಮಾಡಿದ್ದಾರೆ. ಸ್ತ್ರೀ ಚಿತ್ರದ ಕಮಾರಿಯಾ ಹಾಡು ಕೂಡ ನೋರಾ ಗೆ ಪಬ್ಲಿಸಿಟಿ ತಂದು ಕೊಟ್ಟಿದ್ದು ತಮಿಳು,ತೆಲುಗು ಚಿತ್ರರಂಗದಲ್ಲೂ ನೋರಾ ಕಾಲ್ ಸೀಟ್ ಗಾಗಿ ನಿರ್ಮಾಪಕರು ಕಾಯ್ತಿದ್ದಾರೆ.

ಸದ್ಯ ಬಾಲಿವುಡ್ ನಂ ೧ ಐಟಂ ಸಾಂಗ್ ಡ್ಯಾನ್ಸರ್ ಎನ್ನಿಸಿರು ನೋರಾ ಹೊಸ ಹಾಡು ಬಿಡುಗಡೆಯ ಸಂಭ್ರಮದಲ್ಲಿದ್ದು, ಡ್ಯಾನ್ಸ್ ಮೇರಿ ರಾಣಿಯಲ್ಲಿ ಸಖತ್ ಹಾಟ್ ಅವತಾರದಲ್ಲಿ ಕುಣಿದು ಅಭಿಮಾನಿಗಳ ಮನಗೆಲ್ಲಲು ಸಿದ್ಧವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನೋರಾ ಪತೇಹಿ, ತಮ್ಮ ಹಾಟ್ ಅವತಾರದ ಹಾಡು ನೋಡಿ ಪ್ರತಿಕ್ರಿಯಿಸುವಂತೆ ಅಭಿಮಾನಿಗಳಿಗೆ ಕೋರಿದ್ದಾರೆ.

ಇದನ್ನೂ ಓದಿ : ಬಾತ್ ರೂಂನಲ್ಲಿ ಸೆಲ್ಪಿ ವಿಡಿಯೋ : ನಟಿಯ ಹುಚ್ಚಾಟಕ್ಕೆ ಅಭಿಮಾನಿಗಳು ಶಾಕ್

ಇದನ್ನೂ ಓದಿ : ಮಲೆಯಾಳಂಗೆ ಹಾರಿದ ತುಪ್ಪದ ಬೆಡಗಿ : ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರಾಗಿಣಿ

( Bollywood No.1 of Item Dancer Nora Fatehi)

Comments are closed.