Infinix Smartphone Offers: ಇನ್ಫಿನಿಕ್ಸ್ ನೋಟ್ ಸಿರೀಸ್ ಫೋನ್ ಲಾಂಚ್: ಪಾಕೆಟ್ ಹಾಗೂ ಗೇಮಿಂಗ್ ಫ್ರೆಂಡ್ಲಿ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಇನ್ಫಿನಿಕ್ಸ್ (Infinix) ಭಾರತದಲ್ಲಿ ನೋಟ್ (Note 11) ಸರಣಿಯ ಭಾಗವಾಗಿ ಇತ್ತೀಚಿಗೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ( nfinix Smartphone Offers) ಬಿಡುಗಡೆ ಮಾಡಿದೆ. ಈ ಫೋನ್‌ಗಳು ಭಾರತದಲ್ಲಿ 15 ಸಾವಿರದ ಆಸುಪಾಸಿನ ಬೆಲೆಯಲ್ಲಿ ಲಭ್ಯವಿವೆ ಎಂಬುದು ವಿಶೇಷವಾಗಿದೆ. ಇವು ಸುಧಾರಿತ ಉತ್ತಮ ಕಾಲಿಂಗ್ ಸಿಸ್ಟಮ್, ಗೇಮಿಂಗ್ ಅನುಭವವನ್ನು ಸುಧಾರಿಸಲು ಸೂಕ್ಷ್ಮ ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ಗಳು AMOLED ಡಿಸ್‌ಪ್ಲೇ ಮತ್ತು ಪ್ಯಾಕ್ ಸ್ಟಿರಿಯೊ ಸ್ಪೀಕರ್ ಹೊಂದಿದ್ದು ಬಳಕೆದಾರರಿಗೆ ಸಖತ್ ಅನುಭವ ಒದಗಿಸಲಿವೆ.

ಸ್ಪೆಸಿಫಿಕೇಶನ್
ಇನ್ಫಿನಿಕ್ಸ್ ನೋಟ್11 6.7 ಇಂಚಿನ ಫುಲ್ ಎಚ್‌ಡಿ ಅಮೋಲ್ಡ ಡಿಸ್ಪ್ಲೇ ಹಾಗೂ 750 ಯೂನಿಟ್ ಪೀಕ್ ಬ್ರೈಟ್ನೆಸ್ ಹೊಂದಿದೆ. ಇದು ಗೋರಿಲ್ಲ ಗ್ಲಾಸ್ 3 ಪ್ರೊಟೆಕ್ಷನ್ ನೀಡಲಿದೆ. ಈ ಫೋನ್ ಮೀಡಿಯಾ ಟೆಕ್ ಹೀಲಿಯೋ ಜಿ 88 ಚಿಪ್ ಸೆಟ್ ಹೊಂದಿದೆ. ಇದು 50 ಎಂಪಿ ಪ್ರೈಮರಿ ಕ್ಯಾಮೆರಾ ಹಾಗೂ 2 ಎಂಪಿ ಡೆಪ್ತ್ ಸೆನ್ಸರ್ ಹಾಗೂ ಎಐ ಲೆನ್ಸ್ ಒಳಗೊಂಡಿದೆ.
ಇದರಲ್ಲಿ ಕ್ವಾಡ್ ಎಲ್‌ಇಡಿ ಫ್ಲ್ಯಾಶ್ ಕೂಡ ಇರಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಟ್ರಿಪಲ್ ಕ್ಯಾಮೆರ ಫೋನ್ ಇದಾಗಿದ್ದು ಫೋಟೋ ಹಾಗೂ ಗೇಮಿಂಗ್‌ಗೆ ಉತ್ತಮ ಆಯ್ಕೆಯಾಗಿದೆ.

ಇನ್ನೊಂದೆಡೆ, ಇನ್ಫಿನಿಕ್ಸ್ ನೋಟ್11ಎಸ್ 6.9 ಇಂಚಿನ ಪಂಚ್ ಹೋಲ್ ಫುಲ್ ಎಚ್‌ಡಿಡಿಸ್ಪ್ಲೇ ಹಾಗೂ 120 ಹರ್ಟ್ಸ್ ಸ್ಕ್ರೀನ್ ರಿಫ್ರೆಶ್ ರೇಟ್ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೀಲಿಯೋ ಜಿ 96 ಚಿಪ್ ಸೆಟ್ ಹೊಂದಿದೆ. ಇದು ಟ್ರಿಪಲ್ ರೇರ್ ಕ್ಯಾಮೆರಾ ಆಗಿದ್ದು 50 ಎಂಪಿ ಪ್ರೈಮರಿ, 2 ಎಂ ಪಿ ಮ್ಯಾಕ್ರೋ ಹಾಗೂ2 ಎಂ ಪಿ ಡೆಪ್ತ್ ಲೆನ್ಸ್ ಹೊಂದಿದೆ.
ಈ ಎರಡೂ ಫೋನುಗಳ ಸಾಮಾನ್ಯ ಸಂಗತಿ ಎಂದರೆ ಎರಡೂ ಸಹ 16 ಎಂಪಿ ಸೆಲ್ಫಿ ಕ್ಯಾಮೆರ ಹಾಗೂ ಎಲ್‌ಈಡಿ ಫ್ಲ್ಯಾಶ್ ಹೊಂದಿವೆ. ಜೊತೆಗೇ ಡಿಟಿಎಸ್ ಸರೌಂಡ್ ಸೌಂಡ್ ಹಾಗೂ ಸ್ಟಿರಿಯೋ ಸ್ಪೀಕರ್ ಹೊಂದಿವೆ.

ಇಷ್ಟೇ ಅಲ್ಲದೆ, ಗೇಮ್ ಬೂಸ್ಟ್ ಟೆಕ್ನಾಲಜಿ ಇದ್ದು ಗೇಮಿಂಗ್ ವೇಳೆ ಫೋನ್ ಹೀಟ್ ಆಗುವುದನ್ನು ತಡೆಯುತ್ತದೆ. ಇವೆರಡೂ ಆಂಡ್ರಾಯ್ಡ್11 ವರ್ಷನ್ ಹಾಗೂ 5000 ಎಂಎಎಚ್ ಬ್ಯಾಟರಿ ಹೊಂದಿವೆ. ಇದು 33 ವಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಬೆಲೆ ಎಷ್ಟು
ಇನ್ಫಿನಿಕ್ಸ್ ನೋಟ್11ಎಸ್ 12,999 ( 6ಜಿ ಬಿ/ 64 ಜಿ ಬಿ) ಹಾಗೂ 14999 (8 ಜಿ ಬಿ/ 128 ಜಿ ಬಿ) ಬೆಲೆ ಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ಫಿನಿಕ್ಸ್ ನೋಟ್11 11999 (4/ 64ಜಿಬಿ) ಗೆ ಲಭ್ಯವಿವೆ. ಹಸಿರು, ಸ್ನೋ ಹಾಗೂ ಕಪ್ಪು ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

Infinix Smartphone Offers Infinix Note 11 Note 11s launched in India here is the Price and specifications

Comments are closed.