Iphone Scam : ಐಫೋನ್ ಖರೀದಿ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಅದರಲ್ಲೂ ಐಫೋನ್ 15 ಪ್ರೋ ಖರೀದಿ ಮಾಡಬೇಕು ಅಂದರೆ ದುಡ್ಡು ಕೂಡ ಅಷ್ಟೇ ಬೇಕು. ನೀವು ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಐಫೋನ್ 15 ಪ್ರೋ ಖರೀದಿ ಮಾಡಿದ್ರಿ ಅಂದುಕೊಳ್ಳೋಣ. ಆದರೆ ನಿಮ್ಮ 1 ಲಕ್ಷ ರೂಪಾಯಿ ಮೌಲ್ಯದ ಹಣದ ಬದಲಾಗಿ ಆನ್ಲೈನ್ ಮಾರುಕಟ್ಟೆ ವೇದಿಕೆಯು ನಿಮಗೆ ಆಂಡ್ರಾಯ್ಡ್ ಫೋನ್ ಕಳುಹಿಸಿಕೊಟ್ಟರೆ ನಿಮ್ಮ ಸ್ಥಿತಿ ಹೇಗಾಗಬೇಡ..?

ಥೇಟ್ ಐಫೋನ್ನ್ನೇ ಹೋಲುವ ಅಂಡ್ರಾಯ್ಡ್ ಫೋನ್ಗಳು ಇದೀಗ ಮಾರುಕಟ್ಟೆಗೆ ಬಂದಿದ್ದು ಹೊಸದೊಂದು ಭಯ ಆರಂಭಗೊಂಡಿದೆ. ಅದರಲ್ಲೂ ಆ್ಯಪಲ್ನ ಅಧಿಕೃತ ವೆಬ್ಸೈಟ್ನಿಂದ ಐಫೋನ್ 15 ಪ್ರೋ ಸ್ಮಾರ್ಟ್ಫೋನ್ ಆರ್ಡರ್ ಮಾಡಿದ್ದರೂ ಸಹ ವ್ಯಕ್ತಿಯೊಬ್ಬರು ನಕಲಿ ಐಫೋನ್ 15 ಪ್ರೋ ಸ್ಮಾರ್ಟ್ ಫೋನ್ ಸ್ವೀಕರಿಸಿದ್ದು ಆಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಮೊಬೈಲ್ ಖರೀದಿ ಮಾಡೋಕೂ ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ : ಅಬ್ಬಬ್ಬಾ ಲಾಟರಿ…! ಕೇವಲ 2599 ರೂ.ಗೆ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ತಂದಿದೆ ರಿಲಯನ್ಸ್ ಕಂಪನಿ..!
ಈ ಅಸಲಿ ಮೊಬೈಲ್ ಬದಲು ಬಂದ ನಕಲಿ ಮೊಬೈಲ್ ಘಟನೆಗಳನ್ನು ಆಪಲ್ ಕಂಪನಿಯು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಇಂಗ್ಲೆಂಡ್ನ ಸರ್ರೆಯಲ್ಲಿ ವಾಸಿಸುತ್ತಿರುವ ಎಡ್ಮರ್ಡ್ ಎಂಬ ವ್ಯಕ್ತಿಯು ತಮ್ಮ ರೆಡ್ಡಿಟ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಎಡ್ಮರ್ಡ್ ಐಫೋನ್ 15 ಪ್ರೋವನ್ನು ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಕೈಗೆ ಹೊಚ್ಚ ಹೊಸ ಐಫೋನ್ 15 ಪ್ರೋ ಮೊಬೈಲ್ ಸಿಗುತ್ತದೆ ಎಂದೇ ಭಾವಿಸಿದ್ದರು. ಆದರೆ ಅವರು ಆರ್ಡರ್ನಲ್ಲಿ ಸ್ವೀಕರಿಸಿದ ಐಫೋನ್ನ ಅಸಲಿಯ್ಲ ಬದಲಿಗೆ ಅದೊಂದು ನಕಲಿ ಫೋನ್ ಎಂಬುದು ಅವರಿಗೆ ತಿಳಿದು ಬಂದಿದೆ.
ಇದನ್ನೂ ಓದಿ :ಐಫೋನ್ 13ಗೆ 10,000 ರೂ. ಡಿಸ್ಕೌಂಟ್ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್ ಮಿಸ್ ಮಾಡ್ಲೇಬೇಡಿ
ಇದು ನೋಡೋಕೆ ಥೇಟ್ ಐಫೋನ್ನಂತೆಯೇ ಇದ್ದು ಆದರೆ ಸಂಪೂರ್ಣ ಆಂಡ್ರಾಯ್ಡ್ ಸಾಫ್ಟ್ವೇರ್ ಹೊಂದಿದೆ ಎನ್ನಲಾಗಿದೆ. ಆನ್ಲೈನ್ನಲ್ಲಿ ನಡೆದ ಇಂತಹ ಮೋಸದ ಜಾಲವನ್ನು ಕಂಡು ಎಡ್ಮರ್ಡ್ ಹೌಹಾರಿ ಹೋಗಿದ್ದಾರೆ. ಇನ್ನು ಎಡ್ಮರ್ಡ್ ತಾವು ಆ್ಯಪಲ್ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿಯೇ ಐಫೋನ್ 15 ಪ್ರೋ ಆರ್ಡರ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೇ ಆ್ಯಪಲ್ ಕಂಪನಿಯಿಂದ ಬುಕ್ಕಿಂಗ್ ಆಗಿರುವ ದೃಢೀಕರಣದ ಬಗ್ಗೆ ಎಡ್ಮರ್ಡ್ ಇಮೇಲ್ ಕೂಡ ಸ್ವೀಕರಿಸಿದ್ದೇನೆ ಎಂದು ಸಹ ಎಡ್ಮರ್ಡ್ ಹೇಳಿಕೊಂಡಿದ್ದಾರೆ. ಹೀಗೆ ನೋಡುವಾಗ 256 ಜಿಬಿ ಮೆಮೊರಿ ಹೊಂದಿರುವ ಈ ಮೊಬೈಲ್ ಥೇಟ್ ಐಫೋನ್ 15 ಪ್ರೋವನ್ನೇ ಹೋಲುವಂತಿತ್ತು. ಆದರೆ ಐಫೋನ್ 15 ಪ್ರೋ ಮೊಬೈಲ್ ಬಳಕೆ ಮಾಡುವಾಗ ಇದು ಐಓಎಸ್ ಆಪರೇಟಿಂಗ್ ಸಿಸ್ಟಂ ಹೊಂದಿಲ್ಲ ಎಂಬುದು ಎಡ್ಮರ್ಡ್ ಗಮನಕ್ಕೆ ಬಂದಿದೆ.
ಇದನ್ನೂ ಓದಿ : ಈ ಮೊಬೈಲ್ ಖರೀದಿ ಮಾಡಿದ್ರೆ ಸಾಕು : ಯಾವುದೇ ಭಾಷೆಯ ಕರೆಯನ್ನೂ ನಿಮ್ಮ ಭಾಷೆಗೆ ಅನುವಾದಿಸಿ ಕೊಡುತ್ತೆ..!
ಕೂಡಲೇ ಅವರು ಹತ್ತಿರದ ಅಂಗಡಿಗೆ ತೆಗೆದುಕೊಂಡು ಹೋಗಿ ಮೊಬೈಲ್ ಪರೀಕ್ಷೆ ಮಾಡಿಸಿದಾಗ ಇದು Apple ನ iOS ಇಂಟರ್ಫೇಸ್ ನ್ನು ಹೋಲುವ ಆಂಡ್ರಾಯ್ಡ್ ಫೋನ್ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಅಧಿಕೃತ ವೆಬ್ಸೈಟ್ನಲ್ಲಿ ಆಪಲ್ ಫೋನ್ ಖರೀದಿ ಮಾಡೋಕೂ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
Iphone Scam Man ordered an Iphone 15 from an official Apple store but received an Android phone instead