ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

ಐಫೋನ್​ 13 (iphone 13)  ಕೂಡ ಅದೇ ರೀತಿ ಮಾರಾಟವಾಗ್ತಿದೆ. ಪ್ರತಿಷ್ಠಿತ ಆನ್​ಲೈನ್​ ಮಾರುಕಟ್ಟೆ ವೇದಿಕೆಗಳ ಪೈಕಿ ಒಂದಾದ ಅಮೆಜಾನ್​ ದೀಪಾವಳಿ ಸೇಲ್‌  (Amazon Diwali sale) ಹಬ್ಬದ ಪ್ರಯುಕ್ತ ಆಫರ್​ ಬಿಟ್ಟಿದೆ. ಹೀಗಾಗಿ ಐಫೋನ್​ 13 ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಐಫೋನ್​ಗಳನ್ನು ಖರೀದಿ ಮಾಡೋದು ಒಂದು ರೀತಿಯಲ್ಲಿ ಟ್ರೆಂಡ್​ ಎಂಬಂತೆ ಆಗಿಬಿಟ್ಟಿದೆ. ಆಫರ್​ಗಳು ಬಂದಾಗೆಲ್ಲ ಐಫೋನ್​ಗಳು ಹಾಟ್​ಕೇಕ್​ನಂತೆ ಸೇಲ್​ ಆಗಿ ಬಿಡುತ್ತವೆ. ಇದೀಗ ಐಫೋನ್​ 13 (iphone 13)  ಕೂಡ ಅದೇ ರೀತಿ ಮಾರಾಟವಾಗ್ತಿದೆ. ಪ್ರತಿಷ್ಠಿತ ಆನ್​ಲೈನ್​ ಮಾರುಕಟ್ಟೆ ವೇದಿಕೆಗಳ ಪೈಕಿ ಒಂದಾದ ಅಮೆಜಾನ್​ ದೀಪಾವಳಿ ಸೇಲ್‌  (Amazon Diwali sale) ಹಬ್ಬದ ಪ್ರಯುಕ್ತ ಆಫರ್​ ಬಿಟ್ಟಿದೆ. ಹೀಗಾಗಿ ಐಫೋನ್​ 13 ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

iphone 13 avilable at flat r 9402 discount offer Amazon Diwali sale ends tomorrow
Image Credit to Original Source

ಈ ಸೇಲ್​ ಇಂದೇ ಕೊನೆಗೊಳ್ಳಲಿದ್ದು ಅತೀ ಕಡಿಮೆ ದರದಲ್ಲಿ ಆ್ಯಪಲ್​ ಫೋನ್​ ಮಾಲೀಕರಾಗುವ ಸದಾವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಹಾಗಾದರೆ ಎಷ್ಟು ರೂಪಾಯಿಗೆ ಐಫೋನ್​ 13 ಲಭ್ಯವಿದೆ..? ಐಫೋನ್​ 13ನ ವೈಶಿಷ್ಟ್ಯವೇನು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಐಫೋನ್​ 13 ಮೊಬೈಲ್​ ಪ್ರಸ್ತುತ ಭಾರೀ ರಿಯಾಯಿತಿ ದರದೊಂದಿಗೆ ಲಭ್ಯವಿದೆ.

iphone 13 avilable at flat r 9402 discount offer Amazon Diwali sale ends tomorrow
Image Credit to Original Source

ಅಮೆಜಾನ್ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​​​ ಇಂದಿಗೆ ಕೊನೆಯಾಗುತ್ತಿದ್ದು ಐಫೋನ್​ 13 ಮೊಬೈಲ್​ನ್ನು ಕೇವಲ 50,498 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಐಫೋನ್​ 15 ಸಿರೀಸ್​ ಬಿಡುಗಡೆಯಾದ ಬಳಿಕ ಆಪಲ್​ ಸ್ಟೋರ್​ಗಳಲ್ಲಿ ಐಫೋನ್​ 13 ಫೋನ್​​ 59990 ರೂಪಾಯಿಗೆ ಲಭ್ಯವಿದೆ. ಆದರೆ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​​ನಲ್ಲಿ ನಿಮಗೆ ಐಫೋನ್​ 13 ಸ್ಮಾರ್ಟ್​ಫೋನ್​ ನಿಮಗೆ 9402 ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ.

ಇದನ್ನೂ ಓದಿ : ಹೊಸ ಮೊಬೈಲ್​ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್​ ಪರಿಶೀಲಿಸೋದನ್ನ ಮರೀಬೇಡಿ

ಇದು ಮಾತ್ರವಲ್ಲದೇ ಆಯ್ದ ಬ್ಯಾಂಕ್​ ಕಾರ್ಡ್​ಗಳ ಮೇಲೆ ಹೆಚ್ಚುವರಿ 2000 ರೂಪಾಯಿಗಳ ರಿಯಾಯಿತಿ ಕೂಡ ಸಿಗಲಿದೆ. ಇದರ ಜೊತೆಯಲ್ಲಿ ನೀವು ಫೋನ್​ ವಿನಿಮಯ ಮಾಡುವ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೂ ಕೂಡ ನಿಮಗೆ ಇನ್ನೂ ಹೆಚ್ಚಿನ ರಿಯಾಯಿತಿ ಸಿಗಲಿದೆ. ಹಳೆಯ ಫೋನ್​ ವಿನಿಮುಯ ಹಾಗೂ ಅಲ್ಲಿ ಸೂಚಿಸಲಾದ ಬ್ಯಾಂಕ್​ ಕಾರ್ಡ್ ನಿಮ್ಮ ಬಳಿ ಇದ್ದರೆ ನೀವು ಐಫೋನ್​ನ್ನು ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ

iphone 13 avilable at flat r 9402 discount offer Amazon Diwali sale ends tomorrow
Image Credit to Original Source

ಏನಿಲ್ಲವೆಂದರೂ ನಿಮಗೆ 14 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ದರದಲ್ಲಿ ಐಫೋನ್​ 13 ಸ್ಮಾರ್ಟ್​ ಫೋನ್​ ಸಿಗಲಿದೆ. ಐಫೋನ್​ 13 ಐಫೋನ್​ 14 ಸ್ಮಾರ್ಟ್​ಫೋನ್​ನಂತೆಯೇ ಇದೆ. ಭಾರತದಲ್ಲಿ ಪಸ್ತುತ ಇದು 57,999 ರೂಪಾಯಿಗೆ ಮಾರಾಟವಾಗುತ್ತಿದೆ. ಐಫೋನ್​​ 13ನ ಕ್ಯಾಮರಾ, ಡಿಸ್​​ಪ್ಲೇ, ಬ್ಯಾಟರಿ ಹಾಗೂ ಚಿಪ್​ಸೆಟ್​​ ಐಫೋನ್​ 14ಗೆ ಸಾಕಷ್ಟು ಸಾಮ್ಯತೆಗಳನ್ನು ಹೊಂದಿದೆ.

ಇದನ್ನೂ ಓದಿ : ಸಿಮ್​ ಇಲ್ಲದೆಯೂ ಇನ್ಮೇಲೆ ವಾಟ್ಸಾಪ್​ ಲಾಗಿನ್​ ಆಗಬಹುದು : ಅದ್ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ

ಎರಡೂ ಫೋನ್​ಗಳ ವಿನ್ಯಾಸ ಕೂಡ ಒಂದೇ ರೀತಿ ಇದೆ. ಐಫೋನ್​ 11 ಬಿಡುಗಡೆ ಬಳಿಕ ಆಪಲ್​ ಕಂಪನಿಯು ಹೆಚ್ಚು ಕಮ್ಮಿ ಒಂದೇ ಮಾದರಿ ವಿನ್ಯಾಸ ಸ್ಮಾರ್ಟ್​ ಫೋನ್​ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಐಫೋನ್​ 13 ಸ್ಮಾರ್ಟ್​ಫೋನ್​ ಬ್ಯಾಟರಿಯು ಒಳ್ಳೆಯ ಕಾರ್ಯಕ್ಷಮತೆಯನ್ನು ಹೊಂದಿದೆ. ಒಂದು ದಿನಗಳ ಕಾಲ ಬ್ಯಾಟರಿ ಕಾರ್ಯಕ್ಷಮತೆ ಹೊಂದಿದೆ

iphone 13 avilable at flat r 9402 discount offer Amazon Diwali sale ends tomorrow
Image Credit to Original Source

ಅಂದಹಾಗೆ ನಿಮಗೆ ಸ್ಮಾರ್ಟ್​ಫೋನ್​ನೊಂದಿಗೆ ಯಾವುದೇ ಚಾರ್ಜರ್​ ಸಿಗುವುದಿಲ್ಲ. ಮೊಬೈಲ್​ ಸ್ಕ್ರೀನ್​ ಕೂಡ ಉತ್ತಮ ಕ್ಲಾರಿಟಿ ಹೊಂದಿದೆ.ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​ ಇಂದಿಗೆ ಕೊನೆಯಾಗುತ್ತಿದೆ. ಹೀಗಾಗಿ ಇಂದೇ ನೀವು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು . ಒಂದು ವೇಳೆ ನೀವು ಕೂಡ ಐಫೋನ್​ ಲವರ್ಸ್​​ ಆಗಿದ್ದರೆ ಖಂಡಿತವಾಗಿಯೂ ಈ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಅತೀ ಕಡಿಮೆ ದರದಲ್ಲಿ ಐಫೋನ್​ 13 ಮಾಲೀಕರಾಗಿ.

ಇದನ್ನೂ ಓದಿ : ₹ 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 50MP ಕ್ಯಾಮೆರಾ 6000mAh ಬ್ಯಾಟರಿ ಸ್ಮಾರ್ಟ್‌ಪೋನ್‌ : ಅಮೆಜಾನ್ ಸೇಲ್ ನಲ್ಲಿ ಭರ್ಜರಿ ಆಫರ್‌

iphone 13 avilable at flat r 9402 discount offer Amazon Diwali sale ends tomorrow

Comments are closed.