ಈ ಮೊಬೈಲ್​ ಖರೀದಿ ಮಾಡಿದ್ರೆ ಸಾಕು : ಯಾವುದೇ ಭಾಷೆಯ ಕರೆಯನ್ನೂ ನಿಮ್ಮ ಭಾಷೆಗೆ ಅನುವಾದಿಸಿ ಕೊಡುತ್ತೆ..!

ಇದೀಗ ಸ್ಯಾಮ್​ಸಂಗ್​ Galaxy AI ಯನ್ನು ಪರಿಚಯಿಸಿದ್ದು ಈ ಹೊಸ ವೈಶಿಷ್ಟ್ಯವು ಸ್ಯಾಮ್​ಸಂಗ್​ ಫೋನ್​ ಬಳಕೆದಾರರಿಗೆ ಇನ್ನೂ ಉತ್ತಮ ಅನುಭವವನ್ನು ನೀಡುತ್ತಿದೆ. ಉತ್ತಮ ಸ್ಮಾರ್ಟ್​ಫೋನ್​ ಅನುಭವಕ್ಕಾಗಿ AI ಆಧಾರಿತ ಈ ವೈಶಿಷ್ಟ್ಯವನ್ನು ಬಳಸುವಂತೆ ಸ್ಯಾಮ್​ಸಂಗ್​ ಕಂಪನಿ ಕೂಡ ಕೇಳಿಕೊಂಡಿದೆ.

ಹೊಸ ಬಗೆಯ ಅಪ್​ಡೇಟ್​ಗಳನ್ನು ಹೊರಬಿಡೋದ್ರಲ್ಲಿ ಸ್ಯಾಮ್​ಸಂಗ್​ ಕಂಪನಿಗೆ ಸರಿಸಾಟಿ ಯಾವುದೂ ಇಲ್ಲ.ಸದಾ ಒಂದಿಲ್ಲೊಂದು ರೀತಿಯ ಮೊಬೈಲ್​ಗಳನ್ನು ಲಾಂಚ್​ ಮಾಡುವ ಮೂಲಕ ಆಪಲ್​ ಕಂಪನಿಯ ಮೊಬೈಲ್​ಗಳಿಗೆ ಠಕ್ಕರ್​ ನೀಡುತ್ತಲೇ ಬಂದಿದೆ. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ಎಂಬಂತೆ ಇದುವರೆಗೆ ಯಾವ ಮೊಬೈಲ್​ ಕಂಪನಿಯು ಮಾರುಕಟ್ಟೆಗೆ ತಂದಿರದ ಒಂದು ಹೊಸ ವೈಶಿಷ್ಟ್ಯವನ್ನು ತರೋಕೆ ಸ್ಯಾಮ್​ಸಂಗ್​ (Samsung) ಕಂಪನಿಯು ಮುಂದಾಗಿದೆ.

samsung galaxy phones AI features can translate any Language call into your Language
Image Credit to Original Source

ಈ ಹೊಸ ವೈಶಿಷ್ಟ್ಯ ಯಾವ ರೀತಿ ಇದೆ ಎಂದರೆ ಮತ್ತೊಬ್ಬರ ಭಾಷೆ ನಿಮಗೆ ಅರ್ಥವಾಗದೇ ಇದ್ದರೂ ಸಹ ನೀವು ಅನಾಯಾಸವಾಗಿ ಅವರೊಂದಿಗೆ ಮಾತನಾಡಬಹುದಾಗಿದೆ. ಇದೀಗ ಸ್ಯಾಮ್​ಸಂಗ್​ Galaxy AI ಯನ್ನು ಪರಿಚಯಿಸಿದ್ದು ಈ ಹೊಸ ವೈಶಿಷ್ಟ್ಯವು ಸ್ಯಾಮ್​ಸಂಗ್​ ಫೋನ್​ ಬಳಕೆದಾರರಿಗೆ ಇನ್ನೂ ಉತ್ತಮ ಅನುಭವವನ್ನು ನೀಡುತ್ತಿದೆ. ಉತ್ತಮ ಸ್ಮಾರ್ಟ್​ಫೋನ್​ ಅನುಭವಕ್ಕಾಗಿ AI ಆಧಾರಿತ ಈ ವೈಶಿಷ್ಟ್ಯವನ್ನು ಬಳಸುವಂತೆ ಸ್ಯಾಮ್​ಸಂಗ್​ ಕಂಪನಿ ಕೂಡ ಕೇಳಿಕೊಂಡಿದೆ.

ಇದನ್ನೂ ಓದಿ : ಹೊಸ ಮೊಬೈಲ್​ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್​ ಪರಿಶೀಲಿಸೋದನ್ನ ಮರೀಬೇಡಿ

AI ತಂತ್ರಜ್ಞಾನದಿಂದ ಸ್ಯಾಮ್​ಸಂಗ್​ ಮೊಬೈಲ್​ನಲ್ಲಿ ಯಾವೆಲ್ಲ ರೀತಿಯಲ್ಲಿ ಲಾಭ ಪಡೆಯಬಹುದು ಎಂಬುದರ ಬಗ್ಗೆ ಕಂಪನಿಯು ಪೂರ್ಣ ಮಾಹಿತಿ ನೀಡಿಲ್ಲವಾದರೂ ಸಹ ಸ್ಯಾಮ್​ಸಂಗ್​ ಬಳಕೆದಾರರು ಶೀಘ್ರದಲ್ಲಿಯೇ Galaxy AI ಬಳಸಿ ಕರೆಯನ್ನು ಟ್ರಾನ್ಸ್​ಲೇಟ್​ ಮಾಡುವ ಅವಕಾಶ ಪಡೆದುಕೊಳ್ತಾರೆ ಎನ್ನಲಾಗಿದೆ. ಏನಿದು ಕರೆ ಟ್ರಾನ್ಸ್​ಲೇಟ್​ ಎಂದು ಯೋಚಿಸುತ್ತಿದ್ದೀರೇ..? ಈ ಹೊಸ ವೈಶಿಷ್ಟ್ಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

samsung galaxy phones AI features can translate any Language call into your Language
Image Credit to Original Source

ಹೆಸರೇ ತಿಳಿಸುವಂತೆ ಈ ಆಯ್ಕೆಯು ನಿಮಗೆ ಕರೆಯನ್ನು ಅನುವಾದ ಮಾಡಲು ಸಹಾಯ ಮಾಡುತ್ತದೆ. AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೀವು ಬೇರೆ ಭಾಷೆಯ ಕರೆಗಳು ಹಾಗೂ ಮೆಸೇಜ್​ಗಳನ್ನು ನಿಮಗೆ ಗೊತ್ತಿರುವ ಭಾಷೆಗೆ ಅನುವಾದಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ವೈಶಿಷ್ಟ್ಯವು ನಿಮ್ಮ ಡೇಟಾ ಹಾಗೂ ಗೌಪ್ಯತೆಗೆ ಯಾವುದೇ ರೀತಿಯ ತೊಂದರೆಯನ್ನೂ ಉಂಟು ಮಾಡೋದಿಲ್ಲ ಎಂದು ಸ್ಯಾಮ್​ಸಂಗ್​ ಕಂಪನಿಯು ಮಾಹಿತಿ ನೀಡಿದೆ.

ಇದನ್ನೂ ಓದಿ : ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

AI ತಂತ್ರಜ್ಞಾನವನ್ನು ಬಳಸಿ ಮೊಬೈಲ್​ ಕರೆಗಳನ್ನು ಅನುವಾದ ಮಾಡುವ ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲಿಯೇ ಗ್ಯಾಲಕ್ಸಿ ಫೋನ್​ ಬಳಕೆದಾರರಿಗೆ ಸಿಗಲಿದೆ ಎನ್ನಲಾಗಿದೆ. ಇದರಿಂದ ನೀವು ಈ ರೀತಿಯ ಕೆಲಸಕ್ಕಾಗಿ ಯಾವುದೋ ಥರ್ಡ್ ಪಾರ್ಟಿ ಅಪ್ಲಿಕೇಶನ್​ಗಳನ್ನು ಬಳಕೆ ಮಾಡಿ ಗೌಪ್ಯತೆಗಳ ಬಗ್ಗೆ ಅನುಮಾನ ಪಡುವ ಅಗತ್ಯ ಇರೋದಿಲ್ಲ. ಇದರಿಂದ ನೀವು ನಿಮಗೆ ಗೊತ್ತಿಲ್ಲದ ಭಾಷೆಯನ್ನು ಮಾತನಾಡುವ ವ್ಯಕ್ತಿಯೊಂದಿಗೂ ಅನಾಯಾಸವಾಗಿ ಮಾತನಾಡಬಹುದಾಗಿದೆ.

Galaxy AI ಮುಂದಿನ ವರ್ಷದ ಆರಂಭದಲ್ಲಿ ಲಾಂಚ್​ಗೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಆದರೆ ಸ್ಯಾಮ್​ಸಂಗ್​ನ ಯಾವ ಫೋನ್​ನಿಂದ ಈ ಸೌಕರ್ಯ ಸಿಗಲಿದೆ ಎಂಬುದರ ಬಗ್ಗೆ ಕಂಪನಿಯು ಇನ್ನೂ ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಮುಂಬರುವ ಗ್ಯಾಲಕ್ಸಿ ಎಸ್​ 24 ನಲ್ಲಿ ಈ ವೈಶಿಷ್ಟ್ಯ ಇರಬಹುದು ಅಂತಾ ಅಂದಾಜಿಸಲಾಗ್ತಿದೆ. ಈ ಸರಣಿಯು 2024ರ ಜನವರಿ ತಿಂಗಳಲ್ಲಿ ಲಾಂಚ್​ ಆಗಲಿದೆ.

ಇದನ್ನೂ ಓದಿ : ಆಧಾರ್​ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸುವುದು ಈಗ ಇನ್ನಷ್ಟು ಸುಲಭ : ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

samsung galaxy phones AI features can translate any Language call into your Language

Comments are closed.