ಭಾರತದಲ್ಲಿ 5G ಕ್ರಾಂತಿ ಆಗುತ್ತಿದ್ದಂತೆಯೇ ಹೊಸ ತಂತ್ರಜ್ಞಾನದ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದ್ರಲ್ಲೂ ಬಜೆಟ್ ಸ್ಮಾರ್ಟ್‌ಪೋನ್‌ಗಳಿಗೆ (Smartphone) ಹೆಸರುವಾಸಿ ಆಗಿರುವ ಇಂಟೆಲ್ ಕಂಪೆನಿ ಇದೀಗ Itel A05s ಮೊಬೈಲ್‌ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
Itel A05s ಸದ್ಯ ನಾಲ್ಕು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಕ್ರಿಸ್ಟಲ್ ಬ್ಲೂ, ಗ್ಲೋರಿಯಸ್ ಆರೆಂಜ್, ಮೆಡೋ ಗ್ರೀನ್ ಮತ್ತು ನೆಬ್ಯುಲಾ ಬ್ಲ್ಯಾಕ್ ಕಲರ್‌ಗಳಲ್ಲಿ ಈ ಸ್ಮಾರ್ಟ್‌ಪೋನ್ ಖರೀದಿ ಮಾಡಬಹುದಾಗಿದೆ. 2GB + 32GB ಸಂಗ್ರಹಣಾ ಸಾಮರ್ಥ್ದದ ಮೊಬೈಲ್ ಅನ್ನು ಕೇವಲ 6,499 ರೂ.ಗಳಿಗೆ ಬಿಡುಗಡೆಯಾಗಿದೆ.
ಭಾರತದ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಪ್ರಸಿದ್ದ ಬ್ರ್ಯಾಂಡ್ ಆಗಿರುವ Itel ಈಗ ದೇಶದಲ್ಲಿ ಹೊಚ್ಚ ಹೊಸ Itel A05s ಫೋನ್ ಅನ್ನು ಅನಾವರಣಗೊಳಿಸಿದೆ. ಇದು ಆಕ್ಟಾ-ಕೋರ್ SoC ನಿಂದ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಪೋನ್‌ನಲ್ಲಿ (Smartphone) 4,000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸುದೀರ್ಘ ಅವಧಿಯ ವರೆಗೆ ಬಾಳಿಕೆಗೆ ಬರುತ್ತದೆ. ಇನ್ನು USB ಟೈಪ್-C ಸಂಪರ್ಕವನ್ನು ಚಾರ್ಜಿಂಗ್‌ಗಾಗಿ ನೀಡಲಾಗಿದೆ. Itel A05s ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರು ಕ್ರಿಸ್ಟಲ್ ಬ್ಲೂ, ಗ್ಲೋರಿಯಸ್ ಆರೆಂಜ್, ಮೆಡೋ ಗ್ರೀನ್ ಮತ್ತು ನೆಬ್ಯುಲಾ ಬ್ಲ್ಯಾಕ್ ಖರೀದಿ ಮಾಡಬಹುದು.
ಈ ಸ್ಮಾರ್ಟ್‌ಫೋನ್ ಅನ್ನು ಒಂದೇ ಶೇಖರಣಾ ಆಯ್ಕೆಯಲ್ಲಿ ಮಾತ್ರ ದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 2GB + 32GB ರೂಪಾಂತರದ ಬೆಲೆ ಕೇವಲ 6,499 ರೂ. dual nano SIM-ಬೆಂಬಲಿತ itel A05s 6.6-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) IPS LCD ಡಿಸ್ಪ್ಲೇ ಜೊತೆಗೆ 60Hz ರಿಫ್ರೆಶ್ ರೇಟ್ ಮತ್ತು 270ppi ಪಿಕ್ಸೆಲ್ ಒಳಗೊಂಡಿದೆ.

ಈ ಸ್ಮಾರ್ಟ್‌ಪೋನ್ ಆಕ್ಟಾ-ಕೋರ್ ಯುನಿಸೊಕ್ SC9863A SoC ಯಿಂದ 2GB RAM ಮತ್ತು 32GB ಸಂಗ್ರಹಣೆಯನ್ನು ಒಳಗೊಂಡಿದೆ. ಸ್ಮಾರ್ಟ್‌ಪೋನ್ ಮೈಕ್ರೋ SD ಕಾರ್ಡ್ ಬಳಸಿ ಹ್ಯಾಂಡ್‌ಸೆಟ್‌ನ ಸಂಗ್ರಹಣಾ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೇ Android 13 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್
ಇನ್ನು Itel A05s ಸ್ಮಾರ್ಟ್ಫೋನ್ 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಒಳಗೊಂಡಿದೆ. ಇದು LED ಫ್ಲ್ಯಾಷ್ ಹೊಂದಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Itel A05s ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 4G LTE, Wi-Fi, ಬ್ಲೂಟೂತ್, 3.5mm ಆಡಿಯೊ ಜ್ಯಾಕ್ ಮತ್ತು USB ಟೈಪ್-ಸಿ ಚಾರ್ಜಿಂಗ್‌ಗಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಗ್ರಾಹಕರ ಸುರಕ್ಷತೆಗಾಗಿ ಮೊಬೈಲ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದ್ದು, ಜೊತೆಗೆ ಫೇಸ್‌ಲಾಕ್ ವೈಶಿಷ್ಟ್ಯತೆಗಳನ್ನು ಹೊಂದಿದೆ.