Jio Airtel Vi 2022 Best Plans: ವರ್ಷಕ್ಕೆ ಒಂದೇ ಸಲ ರಿಚಾರ್ಜ್ ಮಾಡಿ ಹಣ ಉಳಿಸಿ; Jio, Airtel, Vi ಬೆಸ್ಟ್ ಪ್ಲಾನ್‌ಗಳ ವಿವರ ಇಲ್ಲಿದೆ

ಹೊಸ ವರ್ಷದ ಆಗಮನದ ಖುಷಿಯಲ್ಲಿದ್ದ ಗ್ರಾಹಕರಿಗೆ ಟೆಲಿಕಾಂ ಕಂಪೆನಿಗಳು (Telecom Companies) ಬೆಲೆ ಏರಿಕೆಯ ಶಾಕ್ (Price Hike) ನೀಡಿದ್ದವು. ಗ್ರಾಹಕರನ್ನು ಸೆಳೆಯುವ ಸಲುವಾಗಿ, ಓಟಿಟಿ (OTT) ಹಾಗೂ ಇತರ ಆಕರ್ಷಕ ಸೌಲಭ್ಯಗಳನ್ನು ಪರಿಚಯಿಸಿದ್ದವು. ಅದರಲ್ಲಿ ವಾರ್ಷಿಕ ವ್ಯಾಲಿಡಿಟಿ (Jio Airtel Vi 2022 Best Plans) ಹೊಂದಿದ ಪ್ಲಾನ್ ಜನಪ್ರಿಯ ಆಗಿದೆ. ಅನೇಕ ಗ್ರಾಹಕರು, ಈ ಪ್ಲಾನ್ ಅನ್ನೇ ರೀಚಾರ್ಜ್ ಮಾಡಲು ಬಳಸುತ್ತಾರೆ. ಯಾಕೆಂದರೆ ಒಮ್ಮೆ ರೀಚಾರ್ಜ್ ಮಾಡಿದಲ್ಲಿ, ಮತ್ತೆ ತಿಂಗಳು ತಿಂಗಳು ರೀಚಾರ್ಜ್ (Monthly Recharge) ಮಾಡುವ ಕಿರಿಕಿರಿ ಇರುವುದಿಲ್ಲ. ಇದು ಕೊಂಚ ದುಬಾರಿ ಎನಿಸಿದರೂ, ತಿಂಗಳ ಪ್ಲಾನ್ ಹೋಲಿಸಿದರೆ, ಇದು ಎಷ್ಟೋ ಉತ್ತಮ ಆಯ್ಕೆ ಅನಿಸುತ್ತದೆ. ಇದೀಗ ಜಿಯೋ, ಏರ್ಟೆಲ್, ವಿ ಟೆಲಿಕಾಂ ಕಂಪೆನಿಗಳು ವಾರ್ಷಿಕ ಅವಧಿಯ ಹಲವು ಪ್ರಿಪೇಯ್ಡ್ ಆಯ್ಕೆಗಳನ್ನು (Best Prepaid Plans) ಹೊರ ತಂದಿವೆ. ಇವುಗಳು ಎಕ್ಸ್ಟ್ರಾ ಡಾಟಾ, ಅನ್ ಲಿಮಿಟೆಡ್ ಡಾಟಾದಂತಹ ಇನ್ನು ಹಲವು ಆಫರ್ ಹೊಂದಿದೆ. ಭಾರತದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಜಿಯೋ, ಏರ್‌ಟೆಲ್ ಹಾಗೂ ವಿ ವಾರ್ಷಿಕ (Jio, Airtel and Vi Best Recharge Plans)ಯೋಜನೆಗಳ ಕುರಿತು ಈ ಕೆಳಗೆ ನೀಡಲಾಗಿದೆ.

ಏರ್‌ಟೆಲ್
ಏರ್‌ಟೆಲ್ ವಾರ್ಷಿಕ ಯೋಜನೆಯು 2999ರೂನದ್ದಾಗಿದೆ. ಇದು 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಆಫರ್ ರೀಚಾರ್ಜ್ ಮಾಡಿದರೆ, 2 ಜಿಬಿ ಡಾಟಾ ದಿನನಿತ್ಯ ಸಿಗಲಿದೆ ಅಷ್ಟೇ ಅಲ್ಲದೇ, ಏರ್‌ಟೆಲ್ ಹಾಗೂ ಇತರ ನೆಟವರ್ಕ್‌ಗಳಿಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ಫ್ರೀ 100 ಮೆಸೇಜ್ ಸೌಲಭ್ಯಗಳನ್ನು ಸಹ ಈ ಆಫರ್ ಹೊಂದಿದೆ.
ಇದರ ಜೊತೆಗೆ 1799ರ ಇನ್ನೊಂದು ಪ್ಲಾನ್ ಕೂಡ ಇದೆ. ಇದು ಸಹ 365 ದಿನಗಳ ಅವಧಿ ಹೊಂದಿದೆ. ಇದು ನಿತ್ಯ 1.5 ಜಿಬಿ ಡಾಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ಫ್ರೀ 100 ಮೆಸೇಜ್ ಸೌಲಭ್ಯಗಳನ್ನು ಸಹ ಈ ಆಫರ್ ಹೊಂದಿದೆ.

ಜಿಯೋ
ಸದಾ ಅಗ್ಗದ ದರದಲ್ಲಿ ಡಾಟಾ ನೀಡುವ ಜಿಯೋ ಈ ಬಾರಿ 2879ರ ವಾರ್ಷಿಕ ಪ್ಲಾನ್ ಅನ್ನು ಹೊರ ತಂದಿದೆ. ಇದೂ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಡೈಲಿ 2 ಜಿಬಿ ಡಾಟಾ ಹಾಗೂ ಫ್ರೀ ವಾಯ್ಸ್ ಹಾಗೂ 100 ಮೆಸೇಜ್ ಸೌಲಭ್ಯ ಇದೆ. ಇದಲ್ಲದೆ 2545ರ ವಾರ್ಷಿಕ ಪ್ಲಾನ್ ಕೂಡ ಜಿಯೋ ಹೊರ ತಂದಿದೆ. ಇದು 336 ದಿನಗಳ ವ್ಯಾಲಿಡಿಟಿ ಮಾತ್ರ ಹೊಂದಿದೆ. ಇದರಲ್ಲಿ 1.5 ಜಿಬಿ ಡಾಟಾ ಮಾತ್ರ ಗ್ರಾಹಕರಿಗೆ ಸಿಗಲಿದೆ. ಉಳಿದಂತೆ ಎಲ್ಲ ನೆಟವರ್ಕ್‌ ಗಳಿಗೂ ಫ್ರೀ ವಾಯ್ಸ್ ಕಾಲ್ಸ್ ಹಾಗೂ 100 ಮೆಸೇಜ್ ಸೌಲಭ್ಯ ಇರಲಿದೆ.

ವೊಡಾಫೋನ್- ಐಡಿಯಾ
ವಿ ಟೆಲಿಕಾಂ ಕಂಪೆನಿಯ ಪ್ಲಾನ್ ಉಳಿದ ಎರಡು ಕಂಪೆನಿಗಳ ಆಫರ್‌ಗಿಂತಲೂ ದುಬಾರಿಯಾಗಿದೆ. ಇದರ ವಾರ್ಷಿಕ ಪ್ಲಾನ್ 3099ರೂ ಆಗಿದೆ. ಇದರಲ್ಲಿ ಡೈಲಿ 1.5 ಜಿಬಿ ಡಾಟಾ ಗ್ರಾಹಕರಿಗೆ ಸಿಗಲಿದೆ. ಇದು ಒಟ್ಟು 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಇಷ್ಟೇ ಅಲ್ಲದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.
2899 ರೂ. ಇನ್ನೊಂದು ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು  ಹೊಂದಿದೆ. ಇದರಲ್ಲೂ ನಿತ್ಯ 1.5 ಜಿಬಿ ಡಾಟಾ ಹಾಗೂ ವಿ ಸೇರಿದಂತೆ ಎಲ್ಲ ನೆಟವರ್ಕ್‌ಗಳಿಗೂ ಅನಿಯಮಿತ ಕರೆ ಹಾಗೂ 100 ಮೆಸೇಜ್ ಸೌಲಭ್ಯ ದೊರೆಯಲಿದೆ. ಇಷ್ಟೇ ಅಲ್ಲದೇ ವೀಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯವಿದೆ.

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Jio Airtel and Vodafone Idea Vi New Year 2022 Prepaid Plan with 365 days validity)

Comments are closed.