ಈಗ ಅತ್ಯಂತ ವೇಗದ ನೆಟ್‌ವರ್ಕ್ 5G ಯ ಕಾಲ. ರಿಲಯನ್ಸ್ ಜಿಯೊ ಮತ್ತು ಏರ್‌ಟೆಲ್ (Jio and Airtel 5G Network) ಭಾರತದ ಕೆಲವು ಭಾಗಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿವೆ. ಇದು ಅತ್ಯಂತ ವೇಗದ ನೆಟ್‌ವರ್ಕ್. ಈಗಾಗಲೆ 8 ನಗರಗಳಲ್ಲಿ ಏರ್‌ಟೆಲ್ ನ 5G ಸೇವೆ ಲಭ್ಯವಿದೆ. ಈಗ ಜಿಯೊ ಕೂಡಾ 4 ನಗರಗಳಲ್ಲಿ 5G ಸೇವೆಯನ್ನು ಹೊರತರುತ್ತಿದೆ. ಆದರೆ, ಗಮನಿಸಬೇಕಾದ ವಿಷಯವೇನೆಂದರೆ, ಎಲ್ಲಾ ಸ್ಮಾರ್ಟ್‌ಫೋನ್‌ಗಳು 5G ಸೇವೆಯನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ.
ಜಿಯೊ ಮತ್ತು ಏರ್‌ಟೆಲ್ ನಿಂದ 5G ಸೇವೆಯನ್ನು ಪಡೆಯಬೇಕಾದರೆ ಸ್ಮಾರ್ಟ್‌ಫೋನ್‌ಗಳು 5G ನೆಟ್‌ವರ್ಕ್ ಅನ್ನು ಹೊಂದಿರಬೇಕು. ಈಗಿರುವ 2G, 3G, 4G ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ವೇಗದ 5G ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನ್ 5G ಅನ್ನು ಸಪೋರ್ಟ್ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ?
ಇದನ್ನೂ ಓದಿ : UCO Bank Recruitment 2022 : ಪದವೀಧದರಿಗೆ ಯುಕೋ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
ಈಗ ನಿಮ್ಮ ಹತ್ತಿರ ಇರುವ ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡುತ್ತದೆಯೇ ಅಥವಾ ಇಲ್ಲವೆ ಎಂಬುದನ್ನು ಕಂಡುಹಿಡಿಯಲು ಹೀಗೆ ಮಾಡಿ:
- ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ನ ಸೆಟ್ಟಿಂಗ್ಸ್ ಆಪ್‌ಗೆ ಹೋಗಿ.
- ಅಲ್ಲಿ ನೆಟ್‌ವರ್ಕ್ ಆಪ್ಷನ್‌ಗೆ ಹೋಗಿ.
- SIM & Network ಅಥವಾ ನೇರವಾಗಿ Network ಮೋಡ್ ಆಪ್ಷನ್‌ಗೆ ಹೋಗಿ.
- ಅಲ್ಲಿ ಪ್ರಿಫರ್ಡ್ ನೆಟ್‌ವರ್ಕ್ ಟೈಪ್ ಅನ್ನು ನೋಡಬಹುದು.
- ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 5G ಅನ್ನು ಬೆಂಬಲಿಸುತ್ತಿದ್ದರೆ ಆಗ 2G/3G/4G ಯಲ್ಲಿ 5G ಸಹ ಕಾಣಿಸುವುದು.
ಏರ್‌ಟೆಲ್ ಮತ್ತು ಜಿಯೊ 5G ಸೇವೆಯನ್ನು ಆರಂಭಿಸಿರುವ ನಗರಗಳಲ್ಲಿ ನೀವು ವಾಸಿಸುತ್ತಿದ್ದರೆ ನೀವು ಸುಲಭವಾಗಿ ಚೆಕ್ ನೆಟ್‌ವರ್ಕ್ ಚೆಕ್ ಮಾಡಬಹುದು. ವೇಗದ ಇಂಟರ್ನೆಟ್ ಪಡೆಯಲು 2G/3G/4G/5G ಆಯ್ಕೆಯನ್ನು ಕ್ಲಿಕ್ ಮಾಡಿ. ವೇಗದ 5G ಸೇವೆ ಪಡೆಯಲು ಮೊದಲು 5G ಬೆಂಬಿಲಸುವ ಸ್ಮಾರ್ಟ್‌ಫೋನ್ ಖರೀದಿಸಬೇಕಾಗುತ್ತದೆ. ಹಲವಾರು ಸ್ಮಾರ್ಟ್‌ಫೋನ್ ಕಂಪನಿಗಳು ಈಗಾಗಲೆ 5G ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ವಿವಿಧ ಬೆಲೆಗಳಲ್ಲಿ ನೀಡುತ್ತಿದೆ. ರಿಯಲ್‌ಮಿ ಮತ್ತು ಲಾವಾ ನಂತಹ ಸ್ಮಾರ್ಟ್‌ಫೋನ್‌ಗಳು 5G ಬೆಂಬಲಿಸುತ್ತವೆ ಎಂದು ಕಂಪನಿ ಖಚಿತವಾಗಿ ಹೇಳಿದೆ. ರಿಲಯನ್ಸ್ ಜಿಯೊ ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಟ್ರಯಲ್ ಆಗಿ 5G ಸೇವೆಯನ್ನು ಹೊರತಂದಿದೆ. ಮತ್ತೊಂದೆಡೆ, ಏರ್‌ಟೆಲ್ ದೆಹಲಿ, ವಾರಣಾಸಿ, ನಾಗ್ಪುರ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಸಿಲಿಗುರಿ ಸೇರಿದಂತೆ 8 ನಗರಗಳಲ್ಲಿ 5G ಸೇವೆಗಳನ್ನು ನೀಡುತ್ತಿದೆ.
(Jio and Airtel 5G Network you can check if your smartphone has 5G support)