Jio Happy New year Plan : ಹೊಸ ವರ್ಷಕ್ಕೆ ಹೊಸ ಪ್ಲಾನ್‌ ಪರಿಚಯಿಸಿದ ಜಿಯೋ; ಅನ್‌ಲಿಮಿಟೆಡ್‌ ಕರೆ, 2.5 GB ಡಾಟಾ…

ರಿಲಯನ್ಸ್‌ ಜಿಯೋ (Reliance Jio) ಹೊಸ ವರ್ಷಕ್ಕೆ ಹ್ಯಾಪಿ ನ್ಯೂ ಇಯರ್‌ 2023 ಪ್ಲಾನ್‌ (Happy New year Plan) ಅನ್ನು ಪರಿಚಯಿಸಿದೆ. ಈ ಮೂಲಕ ಟೆಲಿಕಾಂ ದೈತ್ಯ ಜಿಯೋ ತನ್ನ ಬಳಕೆದಾರರಿಗೆ ಇಂಟರ್ನೆಟ್‌ ಡಾಟಾ, ಅನ್‌ಲಿಮಿಟೆಡ್‌ ಕರೆ ಮತ್ತು ಜಿಯೋ ಆಪ್‌ನ ಪ್ರಯೋಜನಗಳನ್ನು ನಿಡುತ್ತಿದೆ. ಜಿಯೊನ ಹ್ಯಾಪಿ ನ್ಯೂ ಇಯರ್‌ ಪ್ಲಾನ್‌ 2023 ರೂ. ಗಳದ್ದಾಗಿದೆ. ಇದು ಪ್ರತಿದಿನ 2.5 ಜಿಬಿ ಭರ್ಜರಿ ಡಾಟಾ ನೀಡುತ್ತದೆ. ಜೊತೆಗೆ 9 ತಿಂಗಳುಗಳ ವರೆಗೆ ಅನ್‌ಲಿಮಿಟೆಡ್‌ ಕರೆಯನ್ನು ನೀಡುತ್ತಿದೆ. ಜಿಯೋ 2023 ರೂ.ಗಳ ಹ್ಯಾಪಿ ನ್ಯೂ ಇಯರ್‌ ಪ್ಲಾನ್‌ನಲ್ಲಿ ಏನೇನು ಪ್ರಯೋಜನಗಳನ್ನು ನೀಡುತ್ತಿದೆ ಇಲ್ಲಿದೆ ಓದಿ.

Jio Happy New year Plan : ಜಿಯೋನ 2023 ರೂ.ಗಳ ಹ್ಯಾಪಿ ನ್ಯೂ ಇಯರ್‌ ಪ್ಲಾನ್‌ನಲ್ಲಿರುವ ಪ್ರಯೋಜನಗಳು :

  • 2023 ರೂ.ಗಳ ಹೊಸ ಪ್ಲಾನ್‌ 252 ದಿನಗಳ ವರೆಗೆ ಪ್ರತಿದಿನ 2.5 ಜಿಬಿ ಡಾಟಾ ನೀಡಲಿದೆ. ಅಂದರೆ ಈ ಪ್ಲಾನ್‌ ಒಟ್ಟು 630 ಜಿಬಿ ಡಾಟಾ ನೀಡಲಿದೆ.
  • ಈ ಪ್ಯಾಕ್‌ನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಉಚಿತವಾಗಿರುತ್ತದೆ ಮತ್ತು ಅದೇ ಅವಧಿಗೆ ಅನ್‌ಲಿಮಿಟೆಡ್‌ ಕರೆಯ ಸೌಲಭ್ಯವಿರುತ್ತದೆ.
  • ಜಿಯೋನ ಹೊಸ ಹ್ಯಾಪಿ ನ್ಯೂ ಇಯರ್‌ ಪ್ಲಾನ್‌ನಲ್ಲಿ ಜಿಯೋ ಅಪ್ಲಿಕೇಶನ್‌ಗಳನ್ನು ಪಡೆಯಬಹುದಾಗಿದೆ. ಜೊತೆಗೆ ಹೊಸ ಗ್ರಾಹಕರಿಗೆ ಅಮೆಜಾನ್‌ ಪ್ರೈಮ್‌ ಸದಸ್ಯತ್ವವನ್ನು ನೀಡಲಿದೆ.
  • ಈ ಪ್ಲಾನ್‌ ನಲ್ಲಿ ಬರುವ ಪ್ರತಿದಿನದ ನೆಟ್‌ವರ್ಕ್‌ ಸ್ಪೀಡ್‌, ದಿನದ ಡಾಟಾ 2.5 ಜಿಬಿ ಮುಗಿದನಂತರ ಅದು 64kbps ಗಳಷ್ಟು ವೇಗವನ್ನು ಮಾತ್ರ ನೀಡಲಿದೆ. ಇದು ಈ ಪ್ಯಾಕ್‌ನ ಮೂಲ ವೇಗಕ್ಕಿಂತ ಬಹಳ ನಿಧಾನವಾಗಿದೆ.
  • ಈ ಪ್ಯಾಕ್‌ Jio.com, MyJio app ಮತ್ತು ಗೂಗಲ್‌ ಪೇ ಮತ್ತು ಫೋನ್‌ಪೇ ಗಳಂತಹ ಥರ್ಡ್‌ಪಾರ್ಟಿ ಆಪ್‌ಗಳನ್ನು ಬೆಂಬಲಿಸುತ್ತದೆ.

2,999 ರೂಗಳ ಪ್ಲಾನ್‌ ಅನ್ನು ಪರಿಷ್ಕರಿಸಿದ ರಿಲಯನ್ಸ್‌ ಜಿಯೋ :

ರಿಲಯನ್ಸ್‌ ಜಿಯೋ ಈಗಾಗಲೆ ಅಸ್ಥಿತ್ವದಲ್ಲಿರುವ 2,999 ರೂ.ಗಳ ಪ್ಲಾನ್‌ ಅನ್ನು ಪರಿಷ್ಕರಿಸಿದೆ. ಇದು 75GB ಹೆಚ್ಚುವರಿ ಡೇಟಾವನ್ನು ಮತ್ತು 23 ದಿನಗಳ ಹೆಚ್ಚುವರಿ ಮಾನ್ಯತೆಯೊಂದಿಗೆ ಪರಿಷ್ಕರಿಸಿದೆ. ಅಂದರೆ 365 ದಿನಗಳ ಮಾನ್ಯತೆಯಿರುವ ಈ ಪ್ಲಾನ್‌ ಪ್ರತಿದಿನ 2.5 ಜಿಬಿ ಡಾಟಾ, 100 ಎಸ್‌ಎಮ್‌ಎಸ್‌ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಇದನ್ನೂ ಓದಿ : Omicron BF.7: ಕೊರೊನಾ ಹೊಸ ರೂಪಾಂತರದ ಬಗ್ಗೆ ಭಯ ಬೇಡ ಈ ನಿಯಮ ಪಾಲಿಸಿ ಸಾಕು

ಇದನ್ನೂ ಓದಿ : SBI Recruitment 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಬ್ಯಾಂಕ್‌ ಅಧಿಕಾರಿಗಳಿಗೆ ಉದ್ಯೋಗಾವಕಾಶ

(Jio Happy New year Plan 2023 this plan offers unlimited calls, 2.5 GB data, and many more)

Comments are closed.