Acidity Heartburn Problem Tips:ಆಹಾರ ಸೇವನೆ ನಂತರ ಎದೆಯುರಿ ಅನುಭವ ಆಗುತ್ತಿದೆಯೇ? ಹಾಗಾದ್ರೆ ಈ ಸಲಹೆಗಳನ್ನು ಅನುಸರಿಸಿ

(Acidity Heartburn Problem Tips)ಭಾರತೀಯರು ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುವುದರಿಂದ ಆಹಾರವು ಮಸಾಲೆಯುಕ್ತವಾಗಿರುವುದರ ಜೊತೆಗೆ ಅಧಿಕವಾಗಿ ಎಣ್ಣೆ ಇರುತ್ತದೆ. ಇದರಿಂದಾಗಿ ಹಲವರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚಿನ ಜೀವನಶೈಲಿಯಲ್ಲಿ ಅಳವಡಿಸಿಕೊಂಡಿರುವ ಆಹಾರ ಪದ್ದತಿಯಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳನ್ನು ಹಲವರು ಎದುರಿಸುತ್ತಿದ್ದಾರೆ . ಕೆಲವು ಆಹಾರವನ್ನು ಸೇವನೆ ಮಾಡಿದ ತಕ್ಷಣ ಎದೆಯುರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಅಂಗಡಿಯಿಂದ ಖರಿದೀಸಿ ತಂದ ಔಷಧೀಯನ್ನು ಸೇವನೆ ಮಾಡುತ್ತೆವೆ. ಅಂಗಡಿಯಿಂದ ತಂದ ಔಷಧೀಯನ್ನು ಸೇವನೆ ಮಾಡುವ ಬದಲು ಆಹಾರ ಸೇವನೆಯ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಎದೆಯುರಿ ಸಮಸ್ಯೆಯಿಂದ ದೂರವಿರಬಹುದು. ಇದರ ಮಾಹಿತಿಯ ಕುರಿತು ತಿಳಿದುಕೊಳ್ಳಿ.

(Acidity Heartburn Problem Tips)ಸಂಸ್ಕರಿಸಿದ ಆಹಾರ ಸೇವನೆ ಕಡಿಮೆ ಮಾಡಿ
ಅಂಗಡಿಗಳಲ್ಲಿ ಪ್ಯಾಕ್‌ ಮಾಡಿದಂತಹ ಆಹಾರವನ್ನು ಕೊಂಡು ತಿನ್ನುವ ಹವ್ಯಾಸ ಎಲ್ಲರಲ್ಲೂ ಇರುತ್ತದೆ ಇದನ್ನು ಆದಷ್ಟು ಕಡಿಮೆ ಮಾಡಿ. ಪ್ಯಾಕ್‌ ಮಾಡಿಟ್ಟ ಚಿಪ್ಸ್‌, ಚಾಕೋಲೆಟ್‌, ಬೇಕರಿಗಳಲ್ಲಿ ಸಿಗುವಂತಹ ತಿನಿಸುಗಳನ್ನು ಆದಷ್ಟು ಕಡಿಮೆ ಮಾಡಿ. ಮುಂಚಿತವಾಗಿ ಅಂಗಡಿಯಲ್ಲಿ ತಯಾರಿಸಿ ಇಟ್ಟ ಆಹರವನ್ನು ಆದಷ್ಟು ಕಡಿಮೆ ಮಾಡಿ.

ಮಸಾಲೆಯುಕ್ತ ಆಹಾರದಿಂದ ದೂರವಿರಿ
ಆದಷ್ಟು ಮಸಾಲೆ ಕಡಿಮೆ ಇರುವಂತಹ ಆಹಾರ ಸೇವನೆಯನ್ನು ಕಡಿಮೆ ಮಾಡಿ. ಯಾವುದೇ ಆಹಾರನ್ನು ಸೇವನೆ ಮಾಡುವಾಗ ಅದರಲ್ಲಿ ಆದಷ್ಟು ಮಸಾಲೆ ಸಮತೋಲಿತವಾಗಿರಬೇಕು.

ಹೆಚ್ಚು ಆಹಾರ ಸೇವನೆಯನ್ನು ಕಡಿಮೆ ಮಾಡಿ
ಒಂದೇ ಬಾರಿಗೆ ಹೆಚ್ಚು ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ. ಒಂದೇ ಬಾರಿಗೆ ಹೆಚ್ಚು ಆಹಾರವನ್ನು ಸೇವನೆ ಮಾಡುವುದರಿಂದ ಜೀರ್ಣಿಸಿಕೊಳ್ಳಲು ದೇಹಕ್ಕೆ ಸಾಧ್ಯವಾಗುವುದಿಲ್ಲ ಇದರಿಂದ ಗ್ಯಾಸ್ಟಿಕ್‌ ಸಮಸ್ಯೆ ನಿಮ್ಮನ್ನು ಕಾಡುತ್ತದೆ ಹಾಗಾಗಿ ಮೀತವಾಗಿ ಆಹಾರವನ್ನು ತೆಗೆದುಕೊಂಡರೆ ಉತ್ತಮ.

ವ್ಯಾಯಾಮದ ಹವ್ಯಾಸ ರೂಡಿಸಿಕೊಳ್ಳಿ
ಊಟ ಆದ ತಕ್ಷಣ ವಾಕಿಂಗ್‌ ಮಾಡುವಂತಹ ಹವ್ಯಾಸವನ್ನು ರೂಡಿಸಿಕೊಳ್ಳಿ ಇದರಿಂದ ಆಹಾರ ಬೇಗ ಜೀರ್ಣವಾಗುವುದಕ್ಕೆ ಸಹಾಯವಾಗುತ್ತದೆ.

ರಾತ್ರಿಯ ಸಮಯ ಆದಷ್ಟು ಹೊರಗಡೆಯ ತಿನ್ನುವುದನ್ನು ಕಡಿಮೆ ಮಾಡಿ
ಕೆಲವರು ಹೊರಗಡೆ ತಿಂದು ಹಾಗೆ ಮಲಗುತ್ತಾರೆ ಇದರಿಂದ ಬೇಗ ಹಸಿವು ಆಗುವುದರಿಂದ ಕೂಡ ಎದೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆದಷ್ಟು ಹೋರಗಡೆಯ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಿ.

ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್‌ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ

ಇದನ್ನೂ ಓದಿ:Omicron BF.7: ಕೊರೊನಾ ಹೊಸ ರೂಪಾಂತರದ ಬಗ್ಗೆ ಭಯ ಬೇಡ ಈ ನಿಯಮ ಪಾಲಿಸಿ ಸಾಕು

ಇದನ್ನೂ ಓದಿ:Sleeping Problem Tips:ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ ? ಹಾಗಾದ್ರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಊಟ ಮಾಡಿದ ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಊಟ ಆದ ತಕ್ಷಣ ಮಲಗುವುದನ್ನು ಕಡಿಮೆ ಮಾಡಿ. ರಾತ್ರಿಯ ಊಟವನ್ನು ಯಾವಾಗಲೂ ಮಲಗುವ 3 ಗಂಟೆಗಳ ಮೊದಲು ಮಾಡಿ ನಂತರ 15 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಉತ್ತಮ.

Acidity Heartburn Problem Tips Experiencing heartburn after eating? So follow these tips

Comments are closed.