Corona in state : ರಾಜ್ಯದಲ್ಲಿ ಕೊರೊನಾ ಭೀತಿ : ವಿದೇಶಿ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ : ಸಚಿವ ಡಾ. ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸವರ್ಷದ ಆಚರಣೆಗೆ ಜನರು ಕಾತುರದಿಂದ ಕಾದಿದ್ದಾರೆ. ಆದರೆ ಈವರ್ಷವೂ ಕೂಡ ಕ್ರಿಸ್‌ಮಸ್‌ ಹಾಗೂ ಹೊಸವರ್ಷದ ಮೇಲೆ ಕೊರೊನಾದ ಕರಿನೆರಳು (Corona in state) ಬಿದ್ದಿದೆ. ಹಾಗೇ ಕ್ರಿಸ್‌ಮಸ್‌ ಹಾಗೂ ಹೊಸವರ್ಷ ಹಿನ್ನಲೆಯಲ್ಲಿ ತವರೂರಿಗೆ ಬರುವ ಪ್ರಯಾಣಿಕರಿಗೆ ಬಿಗ್‌ ಶಾಕ್‌ವೊಂದು ಎದುರಾಗಿದೆ. ಹೌದು ಹೊರದೇಶದಿಂದ ಬರುವ ವಿದೇಶಿಗರು ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ದರೆ ಮಾತ್ರ ಎಂಟ್ರಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್‌, “ಚೀನಾದಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, ಬೇರೆ ದೇಶಗಳಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕಾಗಿದೆ. ಅಷ್ಟೇ ಅಲ್ಲದೇ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ದರೆ ಮಾತ್ರ ಅವರಿಗೆ ಬರೋದಕ್ಕೆ ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸವರ್ಷ ಹಿನ್ನಲೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೊರ ದೇಶದಿಂದ ಪ್ರಯಾಣಿಕರು ಹೆಚ್ಚಾಗಿ ಬರುತ್ತಿದ್ದು, ವಿದೇಶದಿಂದ ಬರುತ್ತಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : Omicron BF.7: ಕೊರೊನಾ ಹೊಸ ರೂಪಾಂತರದ ಬಗ್ಗೆ ಭಯ ಬೇಡ ಈ ನಿಯಮ ಪಾಲಿಸಿ ಸಾಕು

ಇದನ್ನೂ ಓದಿ : India’s covid case : ಭಾರತದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳು: ಒಂದೇ ದಿನ 201 ಹೊಸ ಕೇಸ್ ಪತ್ತೆ

ಇದನ್ನೂ ಓದಿ : Covid School holiday :ಕೋವಿಡ್ ಪ್ರಕರಣ ಹೆಚ್ಚಳ : ಕರ್ನಾಟಕದ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ

ವಿಮಾನ ನಿಲ್ದಾಣದಲ್ಲಿ ಇರುವ ಮಾರ್ಗಸೂಚಿಯ ವಿವರ :
ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಾಗಿ ಧರಿಸಬೇಕಾಗಿದೆ. ಶೇ.2ರಷ್ಟು ಪ್ರಯಾನೀಕರಿಗೆ ರ‍್ಯಾಂಡಮ್ ಕೋವಿಡ್‌ ಟೆಸ್ಟ್‌ (ಗಂಟಲು ದ್ರವ ನೀಡಿ ವಿಮಾನ ನಿಲ್ದಾಣದಿಂದ ಹೊರಗೆ ಬರತಕ್ಕದ್ದು) ಮಾಡಲಾಗಿದೆ. ಶೀತ, ಜ್ವರದಂತಹ ಲಕ್ಷಣಗಳು ಕಂಡು ಬಂದರೆ ಪ್ರಾಯಣಿಜರನ್ನು ತಕ್ಷಣವೇ ಐಸೋಲೇಷನ್‌ ಆಗಬೇಕಾಗಿದೆ. 12 ವರ್ಷದ ಒಳ್ಗಿನ ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ ಇರುವುದಿಲ್ಲ. ರೋಗ ಲಕ್ಷಣಗಳು ಇದ್ದರೆ ಮಾತ್ರ ಪರೀಕ್ಷೆ ಮಾಡಿಕೊಳ್ಳಬೇಕಾಗಿದೆ. ರೋಗ ಲಕ್ಷಣವಿಲ್ಲದ ಪ್ರಯಾಣಿಕರು ಸ್ವಯಂ ನಿಆವಹಿಸಲು ಮಾಸ್ಕಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ.

Corona in state: Corona fear in the state: Corona negative report is mandatory for foreign travelers: Minister Dr. Sudhakar

Comments are closed.