ಭಾನುವಾರ, ಏಪ್ರಿಲ್ 27, 2025
Hometechnologyಜಿಯೋ ಡೇಟಾ ಪ್ಯಾಕ್ : ಅತೀ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ,...

ಜಿಯೋ ಡೇಟಾ ಪ್ಯಾಕ್ : ಅತೀ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ, ಅನಿಯಮಿತ ಕರೆ

- Advertisement -

Jio New Plan : ಭಾರತದ ಅಗ್ರಗಣ್ಯ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈಗಾಗಲೇ ಹಲವು ಜಿಯೋ ಹಲವು ರಿಚಾರ್ಜ್ ಫ್ಲ್ಯಾನ್‌ಗಳು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ‌ ಜಿಯೋ ರಿಚಾರ್ಜ್‌ ಫ್ಲ್ಯಾನ್‌ವೊಂದನ್ನು ಬಿಡುಗಡೆ ಮಾಡಿದೆ.

Jio New Plan 90 Days Validity 5g Data Unlimited Call Every Day With Very Less Price
Image credit To Original Source

ಜಿಯೋ ಪ್ರಕಟಿಸಿರುವ ಈ ಯೋಜನೆಯಲ್ಲಿಅತ್ಯಂತ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ, ಅನಿಯಮಿತ ಕರೆ ಯೋಜನೆಯನ್ನು ಪಡೆಯ ಬಹುದಾಗಿದೆ. ಗ್ರಾಹಕರು ಒಮ್ಮೆ ರಿಚಾರ್ಜ್‌ ಮಾಡಿದ್ರೆ ಸುಮಾರು 90 ದಿನಗಳು ಅಥವಾ ಮೂರು ತಿಂಗಳ ಅವಧಿಗೆ ಯೋಜನೆಯನ್ನು ಬಳಸಿಕೊಳ್ಳ ಬಹುದಾಗಿದೆ.

ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಜಿಯೋ, ಮಾಸಿಕ ರೀಚಾರ್ಜ್‌ಗಳಿಂದ ಬೇಸತ್ತಿರುವ ಗ್ರಾಹಕರಿಗೆ ಇದೀಗ ದೀರ್ಘಾವಧಿಯ ಯೋಜನೆಯನ್ನು ಪರಿಚಯಿಸುತ್ತಿದೆ. ಇದೀಗ ತನ್ನ ಬಳಕೆದಾರರಿಗಾಗಿಯೇ 90 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಪರಿಚಯಿಸಿದೆ.

ಇದನ್ನೂ ಓದಿ : 15 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ 5G ಸ್ಮಾರ್ಟ್‌ ಪೋನ್‌

ಸುಮಾರು 90 ದಿನಗಳು ಅಥವಾ ಮೂರು ತಿಂಗಳ ಅವಧಿಯ ಯೋಜನೆಗಳನ್ನು ಆಯ್ಕೆ ಮಾಡಲು ಬಯಸುವ ಬಳಕೆದಾರರಿಗೆ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಜಿಯೋದ ರೂ 749 ಬೆಲೆಯ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ಸುಮಾರು 3 ತಿಂಗಳ ವ್ಯಾಲಿಡಿಟಿ ಗ್ಯಾರಂಟಿ ನೀಡುತ್ತದೆ.

Jio New Plan 90 Days Validity 5g Data Unlimited Call Every Day With Very Less Price
Image Credit To Original Source

ರಿಲಯನ್ಸ್ ಜಿಯೋದ ಈ ಯೋಜನೆಯಲ್ಲಿ ಗ್ರಾಹಕರು 90 ದಿನಗಳ ಅವಧಿಯ ವರೆಗೆ ಮಾನ್ಯತೆ ಮಾತ್ರವಲ್ಲದೇ ಪ್ರತಿ ನಿತ್ಯವೂ 2GB ದೈನಂದಿನ ಡೇಟಾ ಮಿತಿಯೊಂದಿಗೆ 180GB ಯ ಒಟ್ಟು ಡೇಟಾವನ್ನು ನೀಡುತ್ತದೆ. ದೈನಂದಿನ ಡೇಟಾ ಮುಗಿದ ನಂತರದಲ್ಲಿ ಅನಿಯಮಿತ ಡೇಟಾ ಮುಂದುವರಿಯಲಿದೆ. ಆದರೆ ಅದರ ವೇಗ 64Kbpsಗೆ ಇಳಿಯಲಿದೆ.

ಇದನ್ನೂ ಓದಿ : Xiaomi Redmi Note 13 Pro :ಅತ್ಯಂತ ಕಡಿಮೆ ಬೆಲೆಗೆ 200 MP ಕ್ಯಾಮರಾ ಪೋನ್ : Iphone ಮೀರಿಸುತ್ತೆ ರೆಡ್‌ಮೀ 13 ಪ್ರೋ

ಕೇವಲ ವ್ಯಾಲಿಡಿಟಿ, ದಿನಂಪ್ರತಿ ಡೇಟಾ ಮಾತ್ರವಲ್ಲದೇ ಅನಿಯಮಿತ ಕರೆ ಮಾಡಲು ಅವಕಾಶವಿದೆ. ಜೊತೆಗೆ ನಿತ್ಯವೂ 100 SMS ಹಾಗೂ JioTV ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಪಡೆಯಲು ಅವಕಾಶವಿದೆ. ಇನ್ನು ಬಳಕೆದಾರರು JioCinema, JioSecurity ಮತ್ತು JioCloud ಪ್ರಯೋಜನವನ್ನು ಕೂಡ ಪಡೆಯಲಿದ್ದಾರೆ.

 

ಟೆಲಿಕಾಂ ತನ್ನ 5G ವೆಲ್ಕಮ್ ಆಫರ್ ಅಡಿಯಲ್ಲಿ ಅನಿಯಮಿತ 5G ಡೇಟಾವನ್ನು ಸಹ jio ನಿಜವಾದ 5G ಅರ್ಹ ನಗರಗಳಲ್ಲಿ ವಾಸಿಸುವ ಎಲ್ಲಾ ಬಳಕೆದಾರರಿಗೆ ನೀಡುತ್ತಿದೆ. ಮಾರುಕಟ್ಟೆಗೆ 5G ಸ್ಮಾರ್ಟ್‌ಫೋನ್ ಎಂಟ್ರಿ ಕೊಟ್ಟಿದ್ದು, ಗ್ರಾಹಕರ ಅನುಕೂಲಕ್ಕಾಗಿ ಜಿಯೋ ಅನಿಯಮಿತ 5G ಡೇಟಾವನ್ನು ಈ ಪ್ಯಾಕ್‌ ಮೂಲಕ ನೀಡಲಾಗುತ್ತಿದೆ.

ಇದನ್ನೂ ಓದಿ : ಜಿಯೋ ಹೊಸ ಡೇಟಾ ಪ್ಲ್ಯಾನ್‌ : ಕೇವಲ 210 ರೂ.ಕ್ಕೆ ನಿತ್ಯವೂ 1GB ಡೇಟಾ , 28 ದಿನಗಳ ವ್ಯಾಲಿಡಿಟಿ

ಜಿಯೋ ಮತ್ತೊಂದು ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು 719 ರೂಪಾಯಿ ನೀಡಬೇಕಾಗುತ್ತದೆ. 168GB ಒಟ್ಟು ಡೇಟಾದೊಂದಿಗೆ 84 ದಿನಗಳ ಪ್ಲಾನ್ ಮಾನ್ಯತೆ ಯನ್ನು ನೀಡುತ್ತದೆ. ಈ ಯೋಜನೆಯು ಇದೇ ರೀತಿಯ ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳ ಪ್ರಯೋಜನಗಳ ಜೊತೆಗೆ Jio ವೆಲ್‌ಕಮ್ ಆಫರ್ ಪ್ಲಾನ್ ಅಡಿಯಲ್ಲಿ ಬರುತ್ತದೆ

Jio New Plan 90 Days Validity 5g Data Unlimited Call Every Day With Very Less Price
Image credit To Original Source

ಜಿಯೋದ ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್ ಏರ್‌ಟೆಲ್ 84 ದಿನಗಳ ಪ್ಲಾನ್ ಪ್ರಯೋಜನಗಳೊಂದಿಗೆ ರೂ 719 ಪ್ರಿಪೇಯ್ಡ್ ಯೋಜನೆ ಯನ್ನು ಸಹ ನೀಡುತ್ತದೆ. ಟೆಲ್ಕೊ ಯೋಜನೆಯಡಿಯಲ್ಲಿ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 SMS. ಪ್ಲಾನ್ ಪ್ರಯೋಜನಗಳು ರಿವಾರ್ಡ್‌ಮಿನಿ ಚಂದಾದಾರಿಕೆಯೊಂದಿಗೆ ಎಕ್ಸ್‌ಟ್ರೀಮ್ ಅಪ್ಲಿಕೇಶನ್ ಪ್ರಯೋಜನಗಳನ್ನು ಸಹ ಒಳಗೊಂಡಿವೆ.

Jio New Plan 90 Days Validity 5g Data Unlimited Call Every Day With Very Less Price

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular