Woman Gangraped : ರೈಲ್ವೆ ನಿಲ್ದಾಣದ ಸಿಬ್ಬಂದಿಯಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ನಾಲ್ವರ ಬಂಧನ

ದೆಹಲಿ : Woman Gangraped  :ದೆಹಲಿ ರೈಲು ನಿಲ್ದಾಣದ ಫ್ಲಾಟ್​ಫಾರಂನಲ್ಲಿ 30 ವರ್ಷದ ಮಹಿಳೆಯ ಮೇಲೆ ರೈಲ್ವೆ ಇಲಾಖೆ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದಿಲ್ಲಿ: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಾಲ್ವರು ಆರೋಪಿಗಳು ರೈಲ್ವೆ ಇಲಾಖೆಯಲ್ಲಿ ಎಲೆಕ್ಟ್ರಿಕ್​ ವಿಭಾಗದ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಸುಮಾರಿಗೆ ಫ್ಲಾಟ್​ಫಾರಂನ ರೈಲು ದೀಪದ ಹಟ್​ನಲ್ಲಿ ಈ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರವೆಸಗುತ್ತಿದ್ದರೆ ಇನ್ನಿಬ್ಬರು ಹೊರಗೆ ಕಾವಲು ಕಾದಿದ್ದಾರೆ ಎನ್ನಲಾಗಿದೆ.

ಬಂಧಿತರನ್ನು 35 ವರ್ಷದ ಸತೀಶ್​ ಕುಮಾರ್​, 38 ವರ್ಷದ ವಿನೋದ್​ ಕುಮಾರ್​, 33 ವರ್ಷದ ಮಂಗಲ್​ ಚಂದ್​​ ಹಾಗೂ 37 ವರ್ಷದ ಜಗದೀಶ್​ ಚಂದ್​ ಎಂದು ಗುರುತಿಸಲಾಗಿದೆ.ರೈಲ್ವೆ ಡಿಸಿಪಿ ಹರೀಂದ್ರ ಸಿಂಗ್​ ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆಯು ಬೆಳಗ್ಗೆ 3:27ರ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಳೆ. ಕೂಡಲೇ ರೈಲ್ವೆ ನಿಲ್ದಾಣಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಯು ಹರಿಯಾಣದ ಫರಿದಾಬಾದ್​ನವಳಾಗಿದ್ದಾಳೆ. ಎರಡು ವರ್ಷಗಳ ಹಿಂದೆ ಪತಿಯಿಂದ ದೂರಾಗಿದ್ದ ಈಕೆ ಕೆಲಸ ಅರಸುತ್ತಾ ದೆಹಲಿಗೆ ಬಂದಿದ್ದಳು. ಆರೋಪಿಗಳಲ್ಲಿ ಒಬ್ಬನಾದ ಸತೀಶ್​​ ಈಕೆಯ ಸ್ನೇಹಿತನ ಮೂಲಕ ಪರಿಚಯವಾಗಿದ್ದ,ಹಾಗೂ ಈತ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆಮದು ನಂಬಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.


ಗುರುವಾರದಂದು ಸತೀಶ್​ ಆಕೆಗೆ ಕರೆಮಾಡಿ ನನ್ನ ಪುತ್ರನ ಜನ್ಮ ದಿನಕ್ಕೆ ಆಗಮಿಸುವಂತೆ ಕೇಳಿದ್ದನು. ರಾತ್ರಿ 10:30ರ ಸುಮಾರಿಗೆ ಮಹಿಳೆಯು ಸತೀಶ್​ರನ್ನು ಕೀರ್ತಿ ನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಿದ್ದಾಳೆ. ಬಳಿಕ ಆಕೆಯನ್ನು ಸತೀಶ್​ ದೆಹಲಿ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ. ಅಲ್ಲಿ ಉಳಿದ ಮೂವರು ಆರೋಪಿಗಳು ಇದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ . ಬಳಿಕ ಆಕೆಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಿಗಿದ್ದಾರೆ.

ಇದನ್ನು ಓದಿ : Bigg Boss Kannada OTT : ಬಿಗ್​ಬಾಸ್​ ಕನ್ನಡ ಸೀಸನ್​ 9 ಅಲ್ಲ..ಸೀಸನ್​ 1 : ಆಗಸ್ಟ್​ 6ರಿಂದ ಶುರು ಒಟಿಟಿ ಶೋ

ಇದನ್ನೂ ಓದಿ : Amazon Prime Day Sale 2022 : ಎರಡು ದಿನಗಳ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇಂದಿನಿಂದ ಆರಂಭ! ಸಖತ್‌ ಡಿಸ್ಕೌಂಟ್‌, ಫ್ರೀ ಡಿಲೇವರಿ ಎಲ್ಲಾ ಮಿಸ್‌ ಮಾಡ್ಕೋಬೇಡಿ!

Woman Gangraped At New Delhi Station 4 Railway Staff Arrested: Police

Comments are closed.