Mera Ration App : ಈ ಆಪ್‌ ಬಗ್ಗೆ ನಿಮಗೆ ತಿಳಿದಿದೆಯೇ? ಈ ಆಪ್‌ ಬಳಸಿ ನಿಮ್ಮ ರೇಷನ್‌ ಎಲ್ಲಿ ಬೇಕಾದರೂ ಪಡೆದುಕೊಳ್ಳಬಹುದು.

ಭಾರತ ಸರ್ಕಾರ ತನ್ನ ನಾಗರಿಕರಿಗೆ ರೇಷನ್‌ (Mera Ration App) ಪಡೆಯುವ ಸಲುವಾಗಿ ಉತ್ತಮ ಸೌಲಭ್ಯಗಳನ್ನು ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌(ONORC) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯು ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳು ಅಂದರೆ ಜೀವನ ನಿರ್ವಹಣೆಗಾಗಿ ವಲಸೆ ಹೋದವರಿಗೂ ಇದರ ಪ್ರಯೋಜನ ದೊರೆಯಬೇಕು ಎಂಬುದೇ ಇದರ ಆಶಯವಾಗಿದೆ. ಇದು ಒಂದು ಕಾರ್ಡ್‌ ಉಪಯೋಗಿಸುವುದರ ಮೂಲಕ ರೇಷನ್‌ ಕಾರ್ಡ್‌ ಹೊಂದಿದವರು ಈ ಸೇವೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಉಮಂಗ್‌ ಆಪ್‌ ನಲ್ಲಿರುವ ‘ಮೇರಾ ರೇಷನ್‌ ಸರ್ವೀಸ್‌’ ಬಳಕೆದಾರ ಸ್ನೇಹಿ ಸೇವೆಯನ್ನು ನೀಡುತ್ತದೆ.

ಉಮಂಗ್‌ (ಯುನಿಫೈಡ್‌ ಮೊಬೈಲ್‌ ಅಪ್ಲಿಕೇಶನ್‌ ಫಾರ್‌ ನ್ಯೂ–ಏಜ್‌ ಅಪ್ಲಿಕೇಷನ್‌) ಮೂಲತ: ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮತ್ತು ರಾಷ್ಟ್ರೀಯ ಇ–ಆಡಳಿತ ವಿಭಾಗ (NeGD) ಮೂಲಕ ಅಭಿವೃದ್ಧಿಪಡಿಸಲಾಗಿದೆ. ಉಮಂಗ್‌ ಭಾರತೀಯ ನಾಗರೀಕರು ಕೇಂದ್ರದಿಂದ ಸ್ಥಳಿಯ ಸರ್ಕಾರದ ಸೇವೆಗಳನ್ನು ಪಡೆಯಲು ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಅದೇ ರೀತಿ ಉಮಂಗ್‌ ಆಪ್‌ ಕಾರ್ಡ್‌ಹೋಲ್ಡರ್‌ಗೆ ತಮ್ಮ ಸ್ಮಾರ್ಟ್‌ಫೋನ್‌ ನಲ್ಲಿಯ ಮಾಹಿತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಉಮಂಗ್‌ ಆಪ್‌ ಹೊಂದಿರುವ ರೇಷನ್‌ ಕಾರ್ಡ್‌ ಹೋಲ್ಡರ್‌ ತಮ್ಮೆ‌ಲ್ಲಾ ಮಾಹಿತಿಗಳನ್ನು ಹತ್ತಿರಿದ ಪಡಿತರ ಅಂಗಡಿಗೆ ತೆಗೆದುಕೊಂಡು ಹೋಗ ಬೇಕೆಂದಿಲ್ಲ. ಇದಷ್ಟೇ ಅಲ್ಲ ರೇಷನ್‌ನ ಪಡೆಯಲು ಅರ್ಹರೇ ಮತ್ತು ರೇಷನ್‌ ಒದಗಿಸ ಬೇಕಾದ ಹಣ ಇವೆಲ್ಲವನ್ನು ಉಮಂಗ್‌ ಆಪ್‌ ಮೂಲಕ ತಿಳಿಯಬಹುದಾಗಿದೆ. ಕಾರ್ಡ್‌ ಹೋಲ್ಡರ್‌ ತಮ್ಮ ರೇಷನ್‌ ಕಾರ್ಡ್‌ ಡೀಟೇಲ್ಸ್‌, ಉಳಿದ ಸರಕುಗಳ ಮಾಹಿತಿ, 6 ತಿಂಗಳ ವಹಿವಾಟು ಮತ್ತು ಹತ್ತಿರದ ಪಡಿತರ ಅಂಗಡಿಯ ದರ ಮುಂತಾದ ಮಾಹಿತಿಗಳನ್ನೂ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Android Shocking News: ಮೇ ತಿಂಗಳಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಶಾಕ್! ಏನೇನು ಬದಲಾಗುತ್ತಿದೆ?

ಮೇರಾ ರೇಷನ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

  • ಗೂಗಲ್‌ ಪ್ಲೇ ಸ್ಟೋರ್‌ ತೆರೆಯಿರಿ. ಅಲ್ಲಿ ಮೇರಾ ರೇಷನ್‌ ಎಂದು ಟೈಪ್‌ ಮಾಡಿ.
  • ಸರ್ಚ್‌ನಲ್ಲಿ ಬಂದಂತಹ ಮೇರಾ ರೇಷನ್‌ ಆಯ್ದುಕೊಳ್ಳಿ.
  • ಇನ್ಸ್ಟಾಲ್‌ ಮೇಲೆ ಕ್ಲಿಕ್ಕಿಸಿ.
  • ಇನ್ಸ್ಟಾಲ್‌ ಆದ ಮೇಲೆ ಆಪ್‌ ತೆರೆಯಿರಿ
  • ONORC ರೆಜಿಸ್ಟ್ರೇಷನ್‌ ಮೇಲೆ ಕ್ಲಿಕ್ಕಿಸಿ. ಅದು ಒಪೆನ್‌ ಆದ ಮೇಲೆ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ನಮೂದಿಸಿ ಮತ್ತು ‘ಸಬ್ಮಿಟ್‌’ ಒತ್ತಿ.
  • ಈಗ ನೀವು ಮೇರಾ ರೇಷನ್‌ ಆಪ್‌ ಅನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು.

ಇದನ್ನೂ ಓದಿ : DigiLocker : ಡಿಜಿಲಾಕರ್‌ ಬಳಸುವುದು ಹೇಗೆ ಗೊತ್ತೇ? ನಿಮ್ಮ ಅಗತ್ಯ ದಾಖಲೆಗಳನ್ನು ಹೀಗೆ ಸ್ಟೋರ್‌ ಮಾಡಿಕೊಳ್ಳಿ

(Mera Ration App How to download the app and know all about the services)

Comments are closed.