Yash : ರಜನಿಕಾಂತ್ ಅವರ ಸಾಧನೆ ಗೌರವಿಸೋಣ ಹಾಗೇನೇ, ಈಗ ನಮ್ಮಕೈಲಿ ಏನು ಮಾಡೋಕೆ ಸಾಧ್ಯ ಅನ್ನೋದನ್ನು ನೋಡೋಣ : ಯಶ್

ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಎಲ್ಲಾ ವುಡ್ ಗಳನ್ನು ಬೆಚ್ಚಿಬೀಳಿಸಿರುವ ಕೆಜಿಎಫ್ (KGF) ಈಗ 1000 ಕೋಟಿ ಬಾಕ್ಸ್ ಆಫೀಸಲ್ಲಿ ಗಳಿಸಿದೆ. ಕೇವಲ 11 ದಿನಕ್ಕೇ ಗಳಿಸಿರುವ ಈ ಮೊತ್ತ ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಮೈಲಿಗಲ್ಲು ಎನ್ನಲಾಗುತ್ತಿದೆ. ಈ ರೀತಿ ಶರವೇಗದಲ್ಲಿ ನುಗ್ಗುತ್ತಿರುವ ಕೆಜಿಎಫ್ ಕಮಾಲ್ ನಿಂದ ನಟ ಯಶ್ (Yash) ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಕೇವಲ ಕನ್ನಡಕ್ಕೆ ಮಾತ್ರವಲ್ಲ, ಉತ್ತರ ಭಾರತದಲ್ಲೆಲ್ಲಾ ಕೆಜಿಎಫ್ ಬಾಯ್ ಎನಿಸಿದ್ದಾರೆ.

ರಜನಿಕಾಂತ್ ಹೀಗೆ ಟ್ರೆಂಡ್ ಸೆಟರ್ ಆಗಿದ್ದರು. ಸೂಪರ್ ಸ್ಟಾರ್ ಎನಿಸಿದ್ದಾರೆ. ಕೆಜಿಎಫ್ ಬಿಡುಗಡೆ ನಂತರ ರಜನಿ ಪಕ್ಕ ಯಶ್ ಅವರನ್ನು ತೂಗಿ ನೋಡುವುದು ಶುರುವಾಗಿದೆ. ಆದರೆ, ಅವರಾಗಲಿ, ಅವರ ಸಿನಿಮವಾಗಲಿ ಕೆಜಿಎಫ್ ವೇಗದಲ್ಲಿ ಇರಲಿಲ್ಲ ಅನ್ನೋದು ಸತ್ಯ. ಈ ಬಗ್ಗೆ ಯಶ್ ಸಂದರ್ಶನವೊಂದರಲ್ಲಿ, ಬಹಳ ನಾಜೂಕಾಗಿ ಉತ್ತರಕೊಟ್ಟಿದ್ದಾರೆ.

‘ಕೆಜಿಎಫ್ ಗೆಲುವು, ಸೂಪರ್ ಸ್ಟಾರ್ ಪಟ್ಟ ಇವೆಲ್ಲವೂ ಟೆಕ್ನಾಲಜಿಯಿಂದ ಆದದ್ದು. ನಾನು ಅದರ ಒಂದು ಭಾಗವಾಗಿದ್ದೇನೆ. ರಜನಿ ಸಾರ್ ಆ ಸಂದರ್ಭದಲ್ಲಿ ಏನು ಮಾಡಿದ್ದಾರೆ ಅದಕ್ಕೆ ನಾವು ಗೌರವ ಕೊಡಬೇಕು. ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಬಹಳ ಮುಂದಿದೆ. ಹಿಂದೆ ಏನು ಮಾಡಿದ್ದೀವಿ ಅನ್ನೋದಕ್ಕಿಂತ ಈಗ ಏನು ಮಾಡೋಕೆ ಸಾಧ್ಯ ಅನ್ನೋದನ್ನು ಯೋಚನೆ ಮಾಡಬೇಕಾಗಿದೆ.

ಇದನ್ನೂ ಓದಿ : Shahrukh Khan : ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಶಾರುಖ್ ಖಾನ್

ಸಿನಿಮಾಟಿಕ್ ಅನುಭವ ಬೇರೆಯದೇ. ಮನೆಯಲ್ಲಿ ಕೂತು ಸಿನಿಮಾ ನೋಡೋದಕ್ಕಿಂತ, ಥಿಯೇಟರ್ ನಲ್ಲಿ ನೋಡುವಾಗ ಸಿಗುವ ಅನುಭವ ಬೇರೆಯದೇ ಆಗಿದೆ. ನಮ್ಮಂಥ ಸ್ಟಾರ್ ಗಳು ಹುಟ್ಟುವುದು ಥಿಯೇಟರ್ ನಲ್ಲಿ ಅಂತ ನಾನು ನಂಬಿದ್ದೇನೆ. ದೊಡ್ಡ ಸ್ಕ್ರೀನ್, ಸೌಂಡ್, ವಿಷ್ಯುಯಲ್ ಟ್ರೀಟಮೆಂಟ್ ಎಲ್ಲವೂ ಅಲ್ಲಿ ಬೇರೆ ರೀತಿಯಾಗಿ ಸಿನಿಮಾ ಕಾಣುವಂತೆ ಮಾಡುತ್ತದೆ. ಅದೃಷ್ಟ ಎಂದರೆ ನನ್ನನ್ನು ಜನ ನನ್ನ ಸ್ವೀಕರಿಸಿದ್ದಾರೆ’ ಎಂದು ಯಶ್ ವಿವರಣೆ ಕೊಟ್ಟರು.

ಈತನಕ ನೀವು ಕನ್ನಡದ ನಟ ಎಂದು ಗುರುತುಮಾಡುತ್ತಿದ್ದವರು, ಕೆಜಿಎಫ್-2 ಬಿಡುಗಡೆ ನಂತರ ಈಗ ಇಡೀ ದೇಶದ ನಟನಾಗಿದ್ದೀರಿ ಎಂದಾಗ ಯಶ್,
‘ನೀವು ಹೇಳುತ್ತಿರುವುದು ನಿಜ. ಈಗ ದೇಶದ ನಟ. ಆದರೆ, ನನ್ನ ಮನಸ್ಸಲ್ಲಿ ಮೊದಲು ನಾನು ಕನ್ನಡದ ನಟನೇ. ಅಂದರೆ, ಭಾರತೀಯ ಸಿನಿಮಾರಂಗಕ್ಕೆ ಕರ್ನಾಟಕದಿಂದ ಬಂದವನು ನಾನು. ಹಾಗಾಗಿ ಕನ್ನಡವೇ ಮೊದಲ ಅಭಿಮಾನ ಎಂದು ಸಂತೋಷ ಪೂರ್ವಕವಾಗಿ ಯಶ್ ಹೇಳಿಕೊಂಡರು.

ಇದನ್ನೂ ಓದಿ : KGF Chapter 2 : ಬಾಲಿವುಡ್​ನ ಜೆರ್ಸಿ ಸಿನಿಮಾಗೆ ಭರ್ಜರಿ ಶಾಕ್​ ಕೊಟ್ಟ ಕೆಜಿಎಫ್​ 2

(Yash Said We have to respect to Rajanikanth’s Achievements)

Comments are closed.