Successor of Rohit Sharma : ಈ ಹುಡುಗನಿಗೆ ಸಪೋರ್ಟ್ ಮಾಡಿದ್ರೆ ಮತ್ತೊಬ್ಬ ರೋಹಿತ್ ಶರ್ಮಾ ಆಗ್ತಾನೆ

ಬೆಂಗಳೂರು: ಟೀಮ್ ಇಂಡಿಯಾದ (India Cricket Team) ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharnma) ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ ಆಟಗಾರ. ಮುಂಬೈಕರ್ ರೋಹಿತ್ ಈಗ ಭಾರತ ತಂಡದ ನಾಯಕ. ಕ್ರಿಕೆಟ್’ನ ಮೂರೂ ಫಾರ್ಮ್ಯಾಟ್’ನಲ್ಲಿ ಇನ್ನಿಂಗ್ಸ್ ಆರಂಭಿಸುವ ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬೂ ಹೌದು. ರೋಹಿತ್ ಶರ್ಮಾಗೆ ಈಗ 35 ವರ್ಷ ವಯಸ್ಸು. ಇನ್ನು ಹೆಚ್ಚೆಂದರೆ 2 ವರ್ಷ ಟೀಮ್ ಇಂಡಿಯಾ ಪರ ಆಡಬಹುದು. ಅದೂ ಫಿಟ್”ನೆಸ್ ಕಾಯ್ದುಕೊಂಡರೆ ಮಾತ್ರ. ಹಾಗಾದ್ರೆ ರೋಹಿತ್ ಶರ್ಮಾ ನಂತರ ಭಾರತ ತಂಡದಲ್ಲಿ ಅವರ ಸ್ಥಾನ ( successor of Rohit Sharma ) ತುಂಬುವವರು ಯಾರು? ಈ ಪ್ರಶ್ನೆಗೆ ಉತ್ತರ ಮಹಾರಾಷ್ಟ್ರದ ಯುವ ಆರಂಭಿಕ ಬ್ಯಾಟ್ಸ್”ಮನ್ ರುತುರಾಜ್ ಗಾಯಕ್ವಾಡ್ (Ruturaj Gaikwad) .

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ (India Vs South Africa T20 series) ಆಡುತ್ತಿರುವ ರುತುರಾಜ್ ಗಾಯಕ್ವಾಡ್ ಮೊದಲೆರಡು ಪಂದ್ಯಗಳಲ್ಲಿ ವಿಫಲರಾದ್ರೂ, 3ನೇ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. 35 ಎಸೆತಗಳನ್ನೆದುರಿಸಿದ ಗಾಯಕ್ವಾಡ್ 7 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನೊಂದಿಗೆ ಸ್ಫೋಟಕ 57 ರನ್ ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ರು.

ಸಾಮರ್ಥ್ಯದ ಆಧಾರದಲ್ಲಿ ಹೇಳುವುದಾದ್ರೆ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಸ್ಥಾನ ತುಂಬುವ ತಾಕತ್ತು ಯಾರಿಗಾದ್ರೂ ಇದ್ರೆ ಅದು ರುತುರಾಜ್ ಗಾಯಕ್ವಾಡ್”ಗೆ. 25 ವರ್ಷದ ರುತುರಾಜ್”ಗೆ ಕ್ರಿಕೆಟ್’ನ ಮೂರು ಪ್ರಕಾರಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯವಿದೆ. ದೇಶೀಯ ಕ್ರಿಕೆಟ್’ನಲ್ಲಿ ಇದನ್ನು ಈಗಾಗ್ಲೇ ಸಾಬೀತು ಪಡಿಸಿದ್ದಾರೆ. ಅಷ್ಟೇ ಅಲ್ಲ ಐಪಿಎಲ್”ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಮೋಘ ಪ್ರದರ್ಶನ ತೋರಿರುವ ಗಾಯಕ್ವಾಡ್, 2021ರ ಟೂರ್ನಿಯಲ್ಲಿ 16 ಪಂದ್ಯಗಳಿಂದ 635 ರನ್ ಕಲೆ ಹಾಕಿ, ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ರು. ಅಷ್ಟೇ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು.

ರೋಹಿತ್ ಶರ್ಮಾ ಭಾರತ ತಂಡಕ್ಕೆ ಕಾಲಿಟ್ಟಾಗ ಆಟದಲ್ಲಿ ಸ್ಥಿರತೆ ಇರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಪದೇ ಪದೇ ವೈಫಲ್ಯ ಎದುರಿಸುತ್ತಿದ್ದ ರೋಹಿತ್”ಗೆ ಗಾಡ್ ಫಾದರ್ ಆಗಿ ಸಿಕ್ಕಿದ್ದು ಮಾಜಿ ನಾಯಕ ಎಂ.ಎಸ್ ಧೋನಿ (MS Dhoni). 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy) ರೋಹಿತ್ ಅವರನ್ನು ಆರಂಭಿಕ ಆಟಗಾರನಾಗಿ ಧೋನಿ ಆಡಿಸಿದ್ದೇ ರೋಹಿತ್ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್. ಅಲ್ಲಿಂದ ರೋಹಿತ್ ಹಿಂದಿರುಗಿ ನೋಡಿದ್ದೇ ಇಲ್ಲ. ಏಕದಿನ ಕ್ರಿಕೆಟ್”ನಲ್ಲಿ ರೋಹಿತ್ 230 ಪಂದ್ಯಗಳಿಂದ 29 ಶತಕಗಳ ಸಹಿತ 9,283 ರನ್, 45 ಟೆಸ್ಟ್ ಪಂದ್ಯಗಳಿಂದ 8 ಶತಕಗಳ ಸಹಿತ 3,137 ರನ್, 125 ಟಿ20 ಪಂದ್ಯಗಳಿಂದ 4 ಶತಕಗಳ ಸಹಿತ 3,313 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾರಂತೆ ಬ್ಯಾಟಿಂಗ್”ನಲ್ಲಿ ಅದ್ಭುತ ಟೈಮಿಂಗ್ ಹೊಂದಿರುವ ರುತುರಾಜ್ ಗಾಯಕ್ವಾಡ್ ಕೂಡ ರೈಡ್ ಹ್ಯಾಂಡ್ ಬ್ಯಾಟ್ಸ್”ಮನ್. ವೈಫಲ್ಯ ಎದುರಿಸುತ್ತಿದ್ದ ಸಮಯದಲ್ಲಿ “ಸ್ಪೆಷಲ್ ಪ್ಲೇಯರ್“ ಎಂಬ ಟ್ಯಾಗ್ ಲೈನ್”ನಲ್ಲಿ ರೋಹಿತ್ ಶರ್ಮಾಗೆ ಅವಕಾಶಗಳ ಮೇಲೆ ಅವಕಾಶಗಳನ್ನು ನೀಡಲಾಗಿತ್ತು. ಅದೇ ಅವಕಾಶಗಳನ್ನು ರುತುರಾಜ್ ಗಾಯಕ್ವಾಡ್”ಗೂ ನೀಡಿದ್ರೆ, ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ ಸ್ಥಾನವನ್ನು ಗಾಯಕ್ವಾಡ್ ತುಂಬಬಲ್ಲ.

ಇದನ್ನೂ ಓದಿ : Asian Cup 2023 : India Qualified for the Finals : ಏಷ್ಯನ್ ಕಪ್ 2023,ಫೈನಲಿಗೆ ಅರ್ಹತೆ ಪಡೆದ ಭಾರತ

ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್

Ruturaj Gaikwad He is the successor of Rohit Sharma

Comments are closed.