Moto G62 : ಆಗಸ್ಟ್‌ 11 ಕ್ಕೆ ಬಿಡುಗಡೆಯಾಗಲಿದೆ ಅಗ್ಗದ 5ಜಿ ಮೋಟೋ G62 ಸ್ಮಾರ್ಟ್‌ಫೋನ್‌

ಮೊಟೊರೊಲಾ (Motorola) ಭಾರತದಲ್ಲಿ ಮೋಟೋ G62 (Moto G62) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆಗಸ್ಟ್‌ 11 ರಂದು ಮೊಟೊರೊಲಾದ ಮೂರನೇ 5ಜಿ ಹ್ಯಾಂಡ್‌ಸೆಟ್‌ (Handset) ಜಿ62 ಅನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಖಚಿತಪಡಿಸಿದೆ. ಇದು G ಸರಣಿಯಲ್ಲಿ G71 ಮತ್ತು G82 ನಂತರದ ಹ್ಯಾಂಡ್‌ಸೆಟ್‌ ಆಗಿದೆ. ಜಾಗತಿಕವಾಗಿ ಲಭ್ಯವಿರುವ ಅಗ್ಗದ 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಒಂದಾಗಿದೆ. ಇದು ಸ್ನಾಪ್‌ಡ್ರಾಗನ್‌ 695 ಚಿಪ್‌ಸೆಟ್‌ ಅನ್ನ ಬೆಂಬಲಿಸುತ್ತದೆ. ಅಂದರೆ ಯುರೋಪಿಯನ್‌ ಸ್ನಾಪ್‌ಡ್ರಾಗನ್‌ 480+ ಚಿಪ್‌ಸೆಟ್‌ ಆವೃತ್ತಿಗಿಂತ ಭಿನ್ನವಾಗಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಮೋಟೋ G62 ಡಿಸ್ಪ್ಲೇ:
ಈ ಹ್ಯಾಂಡ್‌ಸೆಟ್ 120Hz ಗಳೊಂದಿಗೆ ಪೂರ್ಣಪ್ರಮಾಣದ HD+ ಡಿಸ್ಪ್ಲೇ ನೀಡುತ್ತದೆ. Moto G62 ಬೆಜೆಲ್‌ಗಳೊಂದಿಗೆ ಪಂಚ್-ಹೋಲ್ ಕಟ್-ಔಟ್ ಅನ್ನು ಕೇಂದ್ರೀಯವಾಗಿ ಜೋಡಿಸಿದ್ದನ್ನು ಗಮನಿಸಬಹುದಾಗಿದೆ. ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ, ಲಂಬವಾಗಿ ಜೋಡಿಸಲಾದ ಕ್ಯಾಮೆರಾ ಘಟಕವನ್ನು ಹೊಂದಿದೆ.

ಈ ಹ್ಯಾಂಡ್‌ಸೆಟ್ 6.5-ಇಂಚಿನ ಪೂರ್ಣ ಪ್ರಮಾಣದ HD+ (1080×2400 ಪಿಕ್ಸೆಲ್‌ಗಳು) IPS LCD ಪ್ಯಾನೆಲ್ ಅನ್ನು 120Hz ರಿಫ್ರೆಶ್ ರೇಟ್‌ ಮತ್ತು 405ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಕ್ಯಾಮೆರಾ:
ಮೋಟೋ G62 ಸ್ಮಾರ್ಟ್‌ಫೋನ್‌, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕದಲ್ಲಿ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ನಂತರ ಎರಡು ಲೆನ್ಸ್‌ಗಳು 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ, 16MP ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿದೆ.

ಮೋಟೋ G62 ವಿನ್ಯಾಸ:

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೋಟೋ G62 ರೂಪಾಂತರವು ಸ್ನಾಪ್‌ಡ್ರಾಗನ್‌ 695 ಚಿಪ್‌ಸೆಟ್‌ ಅನ್ನು ಹೊಂದಿದೆ. ಮೋಟೋ G62 ಸ್ನಾಪ್‌ಡ್ರಾಗನ್ 695 SoC ನಿಂದ ಚಾಲಿತವಾಗಲಿದ್ದು, 4GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಸಂಯೋಜಿಸಲ್ಪಡುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 12-ಆಧಾರಿತ MyUX ಅನ್ನು ಬೂಟ್ ಮಾಡುತ್ತದೆ ಮತ್ತು 15W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

ಇನ್ನು ಸೌಂಡ್‌ಗಾಗಿ ಈ ಸ್ಮಾರ್ಟ್‌ಫೋನ್‌ ಡೋಲ್ಬೇ ಅಟ್ಮೋಸ್‌ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಡ್ಯುಯಲ್‌ ಬ್ಯಾಂಡ್‌ ವೈ–ಫೈ, ಬ್ಲೂಟೂತ್‌ 5.1, 5G ಮತ್ತು NFC ಇದರ ಕನೆಕ್ಟಿವಿಟಿ ಆಯ್ಕೆಯಾಗಿದೆ.

ಮೋಟೋ G62 ಬೆಲೆ ಮತ್ತು ಲಭ್ಯತೆ :
ಭಾರತದಲ್ಲಿ ಮೋಟೋ G62 ನ ಅಧಿಕೃತ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಅದರ ಬಿಡುಗಡೆಯ ಸಮಯದಲ್ಲಿ ಘೋಷಿಸಲಾಗುತ್ತದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಭಾರತದಲ್ಲಿ ಇದರ ಬೆಲೆ 20,000 ರೂ. ಇರಬಹುದೆಂದು ನಾವು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…

ಇದನ್ನೂ ಓದಿ : Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!

(Moto G62’s India launch date on August 11, is affordable smartphone)

Comments are closed.