Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

ಫ್ಲೋರಿಡಾ: (Rohit Sharma and Team) ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯವನ್ನು ಭರ್ಜರಿಯಾಗಿ ಗೆದ್ದ ನಂತರ ಟೀಮ್ ಇಂಡಿಯಾ ಆಟಗಾರರು ಮಹಿಳಾ ಕ್ರಿಕೆಟ್ ತಂಡದ (Indian Cricket Team) ಫೈನಲ್ ಪಂದ್ಯವನ್ನು ಮೊಬೈಲ್’ನಲ್ಲಿ ವೀಕ್ಷಿಸಿದ್ದಾರೆ. ವಿಂಡೀಸ್ ವಿರುದ್ಧದ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಅವರ ಮೊಬೈಲ್’ನಲ್ಲಿ ಭಾರತ ತಂಡದ ಆಟಗಾರರು ಮಹಿಳಾ ತಂಡದ ಪಂದ್ಯವನ್ನು ವೀಕ್ಷಿಸಿದರು. ಕ್ಯಾಪ್ಟನ್ ರೋಹಿತ್ ಶರ್ಮಾ, ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸಹಿತ ಹಲವು ಆಟಗಾರರು ಮೊಬೈಲ್ ಮೂಲಕ ಕಾಮನ್ವೆಲ್ತ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ಆಟವನ್ನು ವೀಕ್ಷಿಸಿದರು. ಭಾರತ ತಂಡದ ಗೆಲುವಿಗೆ ರೋಹಿತ್ ಶರ್ಮಾ ಬಳಗ ಹಾರೈಸಿದ್ರೂ, ಫೈನಲ್’ನಲ್ಲಿ ಹರ್ಮನ್’ಪ್ರೀತ್ ಕೌರ್ ಬಳಗ 9 ರನ್’ಗಳ ಸೋಲು ಅನುಭವಿಸಿತು.

ಬರ್ಮಿಂಗ್’ಹ್ಯಾಮ್’ನಲ್ಲಿ ಭಾನುವಾರ ನಡೆದ ಕಾಮನ್ವೆಲ್ಸ್ ಗೇಮ್ಸ್ ಟಿ20 ಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಕೇವಲ 9 ರನ್’ಗಳಿಂದ ಸೋಲು ಕಂಡು ನಿರಾಸೆ ಅನುಭವಿಸಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ವನಿತೆಯರು ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿದರು.

ನಂತರ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ 19.3 ಓವರ್’ಗಳಲ್ಲಿ 152 ರನ್’ಗಳಿಗೆ ಆಲೌಟಾಗಿ ವೀರೋಚಿತ ಸೋಲು ಅನುಭವಿಸಿತು. ನಾಯಕಿ ಹರ್ಮನ್’ಪ್ರೀತ್ ಕೌರ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್’ಗಳನ್ನೊಳಗೊಂಡ ಸ್ಫೋಟಕ 65 ರನ್ ಸಿಡಿಸಿದ್ರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. 16ನೇ ಓವರ್’ನಲ್ಲಿ ತಂಡದ ಮೊತ್ತ 121 ರನ್’ಗಳಾಗಿದ್ದ ಹರ್ಮನ್’ಪ್ರೀತ್ ಕೌರ್ ಔಟಾದಾಗಲೂ ಭಾರತಕ್ಕೆ ಗೆಲುವಿನ ಅವಕಾಶವಿತ್ತು. ಆದರೆ ಕೆಳ ಕ್ರಮಾಂಕದ ಆಟಗಾರ್ತಿಯರ ಬೇಜವಾಬ್ದಾರಿ ಆಟದಿಂದಾಗಿ ಭಾರತದ ಕೈಯಲ್ಲಿದ್ದ ಗೆಲುವು ಕೈ ಜಾರಿತು. 9 ರನ್’ಗಳಿಂದ ಪಂದ್ಯ ಗೆದ್ದ ಆಸ್ಟ್ರೇಲಿಯಾ ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿತು.

ಇದಕ್ಕೂ ಮೊದಲು ಅಮೆರಿಕದ ಫ್ಲೋರಿಡಾದಲ್ಲಿರುವ ಲಾಡರ್’ಹಿಲ್ ಮೈದಾನದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ 88 ರನ್’ಗಳ ಭರ್ಜರಿ ಗೆಲುವು ದಾಖಲಿಸಿ 5 ಪಂದ್ಯಗಳ ಸರಣಿಯನ್ನು 4-1ರಿಂದ ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ವಿಂಡೀಸ್, ಭಾರತದ ಸ್ಪಿನ್ ದಾಳಿಗೆ ತತ್ತರಿಸಿ 15.4 ಓವರ್’ಗಳಲ್ಲಿ 100 ರನ್ನಿಗೆ ಆಲೌಟಾಯಿತು.

ಇದನ್ನೂ ಓದಿ : India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”

ಇದನ್ನೂ ಓದಿ : CWG 2022 India Women : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟ ಟೀಂ ಇಂಡಿಯಾ

Rohit Sharma and Team Watch Women’s Cricket Team Final on Mobile Indian Cricket Team

Comments are closed.