Motorola Moto E22s : ಇಂದು ಬಿಡುಗಡೆಯಾಗಲಿರುವ ಮತ್ತೊಂದು ಬಜೆಟ್‌ ಫೋನ್‌ Moto E22s; ಇದರ ವಿಶೇಷತೆಗಳೇನಿರಬಹುದು…

.ಮೊಟೊರೊಲಾ (Motorola)ವು ಭಾರತದಲ್ಲಿ ಮೊತ್ತೊಂದು ಬಜೆಟ್‌ ಸ್ಮಾರ್ಟ್‌ಫೋನ್‌ (Smartphone) Moto E22s (Motorola Moto E22s) ಬಿಡುಗಡೆಗೆ ಸಜ್ಜಾಗಿದೆ. ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಈ ಫೋನ್‌ ಬಿಡುಗಡೆ (launch) ಮಾಡುವುದಾಗಿ ಘೋಷಿಸಿದೆ. ಕಂಪನಿಯು ಕಳೆದ ವಾರವಷ್ಟೇ ತನ್ನ Moto E32 ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸುತ್ತು. ಈ ಫೋನ್‌ ಈಗಾಗಲೇ ಯುರೋಪಿಯನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 4G ಫೋನ್ ಆಗಿದ್ದು, 10,000 ರೂ. ಗಳ ಒಳಗೆ ಬೆಲೆಯನ್ನು ನಿರೀಕ್ಷಿಸಲಾಗಿದೆ. ಏಕೆಂದರೆ ಕಳೆದ ವಾರ ಬಿಡುಗಡೆಯಾಗಿದ್ದ Moto E32 ಅನ್ನು 10,499 ರೂ. ಗಳಿಗೆ ನಿಗದಿಪಡಿಸಿದೆ. ಹೊಸ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

Moto E22s ವಿಶೇಷತೆಗಳು :
ಈಗಾಗಲೇ ಯುರೋಪಿಯನ್‌ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇದರ ವಿಶೇಷತೆಗಳು ತಿಳಿದಿದೆ. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ IPS LCD ಡಿಸ್ಪ್ಲೇ ಮತ್ತು HD+ ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 20:9 ಅನುಪಾತದ ಆಕಾರ ಹೊಂದಿದ್ದು 90Hz ರಿಫ್ರೆಶ್‌ ದರ ಬೆಂಬಲಿಸುತ್ತದೆ. ಇದು ಅನೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿರುವ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿರುತ್ತದೆ. Moto E22s ಸ್ಮಾರ್ಟ್‌ಫೋನ್‌ MediaTek Helio G37 SoC ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ ಎಂದು ವರದಿಗಳು ಹೇಳುತ್ತವೆ. 4GB RAM ಮತ್ತು 64GB ಸಂಗ್ರಹಣೆಯನ್ನು ಬೆಂಬಲಿಸುವ ಈ ಫೋನ್‌ ಅನ್ನು ಮೈಕ್ರೋ SD ಕಾರ್ಡ್‌ ಮೂಲಕ 1TB ವರೆಗೆ ಆಂತರಿಕ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ ಎಂದು ವರದಿಯಾಗಿದೆ. ಇದು ಆಂಡ್ರಾಯ್ಡ್‌ 12 ಅನ್ನು ಬೆಂಬಲಿಸಬಹುದು.

ಇಂದು ಬಿಡುಗಡೆಯಾಗಲಿರುವ Moto E22s ನ ಕ್ಯಾಮೆರಾವು 16 16-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಆಳ ಸಂವೇದಕವನ್ನು ಒಳಗೊಂಡಿದೆ. ಇದು ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಅನ್ನು ನೋಡಬಹುದು. ಆದರೆ ಇದು ಯಾವುದೇ ಕ್ಯಾಮೆರಾ ಮಾಡ್ಯೂಲ್‌ ಹೊಂದಿರುವುದಿಲ್ಲ. ಇದರಲ್ಲಿ ಸೆಲ್ಫಿಗಾಗಿ ಮುಂಬಾಗದಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ನೋಡಬಹುದಾಗಿದೆ. 4G ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್‌ ವಿಶೇಷತೆಯನ್ನು ಹೊಂದಿರುವ ನಿರೀಕ್ಷೆಯಿದೆ.

ಇನ್ನು ಬ್ಯಾಟರಿಯ ವಿಷಯದಲ್ಲಿ ಇದು 5,000mAh ಬ್ಯಾಟರಿಯನ್ನು ಹೊಂದಿರಬಹುದು ಮತ್ತು 10W ಚಾರ್ಜಿಂಗ್‌ಗೆ ಮಾತ್ರ ಬೆಂಬಲಿಸಬಹುದು. ಇದರಿಂದ ಬ್ಯಾಟರಿ ಚಾರ್ಜ್‌ ಆಗಲು ಸಮಯ ತೆಗೆದುಕೊಳ್ಳಬಹುದು. ಇವೆಲ್ಲ ಅಂಶಗಳನ್ನು ನೋಡಿದಾಗ Moto E22s ಭಾರತದಲ್ಲಿ 10,000 ರೂ. ಗಿಂತ ಕಡಿಮೆ ಬೆಲೆಯಲ್ಲಿ ದೊರಕಬಹುದು ಎಂದು ನಿರೀಕ್ಷಿಸಬಹುದಾಗಿದೆ.

ಇದನ್ನು ಓದಿ : Redmi A1+ : ಸೀಮಿತ ಸಮಯದ ರಿಯಾಯಿತಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾದ ರೆಡ್‌ಮಿ A1 ಪ್ಲಸ್‌

ಇದನ್ನು ಓದಿ : Google Pixel 7 And Pixel 7 Pro ಭಾರತದಲ್ಲಿ ಅನಾವರಣ ; ಇದರ ಫಸ್ಟ್‌ ಲುಕ್‌ ಹೇಗಿದೆ ಗೊತ್ತಾ…

(Motorola Moto E22s is launching in India today know the expected specification)

Comments are closed.