The Halal Cut Controversy : ದೀಪಾವಳಿ ಹೊತ್ತಲೇ ಹಲಾಲ್ ಕಟ್ ವಿವಾದ : ಹಿಂದೂ ಸಂಘಟನೆಗಳಿಂದ ಜಾಗೃತಿ ಅಭಿಯಾನ

ಬೆಂಗಳೂರು : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ರಾಜ್ಯದಾದ್ಯಂತ ಮತ್ತೆ(The Halal Cut Controversy) ಹಲಾಲ್ ಕಟ್ ವಿವಾದವನ್ನು ಹುಟ್ಟುಹಾಕಿದೆ. ಹಲಾಲ್ ಕಟ್ ನಿಷೇಧಿಸುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿವೆ. ಈ ನಡುವಲ್ಲೇ ಹಿಂದೂ ಸಂಘಟನೆಗಳು ಜಾಗೃತಿ ಅಭಿಯಾನವನ್ನು ಆರಂಭಿಸಿವೆ. ಇದರಿಂದಾಗಿ ಮುಸ್ಲೀಂ ವ್ಯಾಪಾರಿಗಳು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಾರಿ ದೀಪಾವಳಿಯನ್ನು ಹಲಾಲ್ ಮುಕ್ತವಾಗಿ ಆಚರಣೆ ಮಾಡುವಂತೆ ಈಗಾಗಲೇ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದಲೂ ಹಿಜಾಬ್ ವಿವಾದ ಕರ್ನಾಟಕದಲ್ಲಿ ಸಾಕಷ್ಟು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಹಲಾಲ್ ಕಟ್ ವಿರುದ್ದ ಹಿಂದೂ ಸಂಘಟನೆಗಳು ಸಮರ ಸಾರಿದ್ದವು. ಹಲಾಲ್ ಮಾಂಸಕ್ಕೆ ನಿಷೇಧ ಹೇರುವಂತೆ ಒತ್ತಡ ಕೇಳಿಬಂದಿತ್ತು. ಇದೀಗ ದೀಪಾವಳಿ ಸಮೀಪಿಸುತ್ತಿದಂತೆಯೇ ಹಲಾಲ್ ಕಟ್ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಹಲಾಲ್ ಮಾಡಿರುವ ಮಾಂಸವನ್ನು ಹಿಂದೂಗಳು ಬಳಸಬಾರದು ಎಂದು ಹಿಂದೂ ಸಂಘಟನೆಯ ಮುಖಂಡರು ಕರೆ ಕೊಟ್ಟಿದ್ದಾರೆ. ಆದರೆ “ಹಲಾಲ್‌” ದೃಢೀಕೃತ ಉದ್ಯಮ ಜಾಗತಿಕ ಮಟ್ಟದಲ್ಲಿ ಕಾರ್ಯಚರಿಸುತ್ತದೆ. ಇನ್ನೂ ಮಾಂಸ ರಫ್ತು ವ್ಯವಹಾರಗಳಲ್ಲಿ ಮಾತ್ರ ಹಲಾಲ್‌ ದೃಢೀಕರಣ ಅತ್ಯವಶ್ಯವಾಗಿರುತ್ತದೆ.

ಹಲಾಲ್‌ ಎಂದರೇನು ?
ಇಸ್ಲಾಮೀಶಾಸ್ತ್ರದ ಪ್ರಕಾರ, ಒಪ್ಪಬಹುದಾದ ಅಥವಾ ಮಾನ್ಯವಾದ ವಿಷಯಗಳನ್ನು ಹಲಾಲ್‌ ಎನ್ನಲಾಗುತ್ತದೆ. ಮುಸ್ಲಿಂ ಧರ್ಮದಲ್ಲಿ ಬಲಿ ಕೊಡುವಾಗ ಅಥವಾ ಮಾಂಸವನ್ನು ರೆಡಿ ಮಾಡುವಾಗ ಪ್ರಾಣಿಯ ರಕ್ತನಾಳವನ್ನು ಕೊಯ್ಯುತ್ತಾರೆ. ಆಗ ರಕ್ತ ಪೂರ್ತಿ ಹೊರಗೆ ಹೋಗುತ್ತದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಹೋಗುತ್ತದೆ. ಆಗ ಶುದ್ಧ ಮಾಂಸ ಸಿಗುತ್ತದೆ. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ಮೆಕ್ಕಾ ಕಡೆ ಮುಖ ಮಾಡಿ ಕೊಯ್ಯುತ್ತಾರೆ. ಇದನ್ನು ಹಲಾಲ್‌ ಕಟ್‌ ಎಂದು ಹೇಳುತ್ತಾರೆ. ಹಲಾಲ್‌ ಕಟ್‌ ಮಾಡಿದ್ದರೆ ಮಾತ್ರ ಪ್ರಾಣಿ ಆಹಾರ ಶುದ್ಧವಾಗಿರುತ್ತದೆ. ಶುದ್ಧ ಆಹಾರವಲ್ಲದ ಆಹಾರ ಮುಸ್ಲಿಂ ಧರ್ಮದಲ್ಲಿ ನಿಷಿದ್ಧ ಎಂದಿದ್ದಾರೆ.

ಇದನ್ನೂ ಓದಿ : Congress presidential election :  ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ.. ರಾಹುಲ್ ಗಾಂಧಿ ಮತಚಲಾಯಿಸೋದು ಎಲ್ಲಿ..?

ಇದನ್ನೂ ಓದಿ : BJP MOCK RAHUL : ‘ಖತಂ.. ಟಾ ಟಾ ಬೈ ಬೈ’ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಲೇವಡಿ ಮಾಡಿದ್ದು ಹೀಗೆ

ಇದನ್ನೂ ಓದಿ : CONG PRESIDENT ELECTION: ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಕೌನ್ ಬನೇಗಾ ಕಾಂಗ್ ಕಿಂಗ್..?

ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಲಾಲ್‌ ಕಟ್‌ ವಿವಾದದ ಮೂಲಕ ಜನರಿಗೆ ಮುಸ್ಲಿಂಗೆ ಸಂಬಂಧಪಟ್ಟ ಯಾವುದೇ ಅಂಗಡಿಯಲ್ಲೂ ಯಾವುದೇ ವಸ್ತುಗಳನ್ನು ಖರೀದಿ ಮಾಡದ ಹಾಗೆ ಹಿಂದೂ ಪರ ಸಂಘಟನೆಗಳನ್ನು ಮನವಿ ಮಾಡುತ್ತಿದೆ. ಈ ದೀಪಾವಳಿಯಲ್ಲಿ ಹಲಾಲ್‌ನಿಂದ ಮುಕ್ತಿ ಪಡೆಯುದರ ಬಗ್ಗೆ ಅಭಿಯಾನಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಕುರಿತು ರಾಜ್ಯ ಸರಕಾರ ಯಾವ ನಿರ್ಧಾರವನ್ನು ಕೈಗೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

Halal Cut Controversy on Diwali: Awareness Campaign by Hindu Organisations

Comments are closed.