Pro Kabaddi League: ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್’ಗೆ ಸತತ 2ನೇ ಸೋಲು, ಯೋಧಾ ವಿರುದ್ಧ ಸೋತ ಗೂಳಿಗಳು

ಬೆಂಗಳೂರು: Bengaluru Bulls vs UP Yoddha : ಆತಿಥೇಯ ಬೆಂಗಳೂರು ಬುಲ್ಸ್ ತಂಡದ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ (Pro Kabaddi League 9th season) ಸತತ ಎರಡನೇ ಸೋಲು ಕಂಡಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣದ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ಪಡೆ, ಯು.ಪಿ ಯೋಧಾ (U.P Yodhas) ವಿರುದ್ಧ 37-44ರ ಅಂತರದಲ್ಲಿ ಸೋಲು ಕಂಡಿತು. ಕಳೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋತಿದ್ದ (33-42) ಬುಲ್ಸ್ ಬಳಗ ಸತತ ಎರಡು ಗೆಲುಗಳ ನಂತರ ತವರು ನೆಲದಲ್ಲಿ ಸತತ 2ನೇ ಸೋಲು ಎದುರಿಸಿತು.

ಪ್ರಥಮಾರ್ಧದಲ್ಲಿ 12-26ರ ಭಾರೀ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್, ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ಪ್ರಯತ್ನ ನಡೆಸಿತು. 2ನೇ ಅವಧಿಯ ಆಟದಲ್ಲಿ ಕೆಂಪುಗೂಳಿಗಳು 25 ಅಂಕ ಕಲೆ ಹಾಕಿದರೆ, ಯೋಧಾ 18 ಅಂಕ ಪಡೆಯಿತು. ಸ್ಟಾರ್ ರೇಡರ್ ಒಟ್ಟು 12 ರೇಡ್ ಪಾಯಿಂಟ್ಸ ಗಳಿಸಿ ಬೆಂಗಳೂರು ಬುಲ್ಸ್’ಗೆ ಸೋಲು ತಪ್ಪಿಸುವ ಎಲ್ಲಾ ಪ್ರಯತ್ನ ನಡೆಸಿದರು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಬೆಂಗಳೂರು ಬುಲ್ಸ್’ಗೆ ಸೋಲಿನಲ್ಲೂ ಒಂದು ಸಣ್ಣ ಸಮಾಧಾನ ಏನೆಂದರೆ ಏಳು ಅಂಕಗಳ ಅಂತರದಲ್ಲಿ ಸೋತ ಕಾರಣ ಒಂದು ಪಾಯಿಂಟ್ ಪಡೆದದ್ದು. ತಂಡವೊಂದು ಏಳು ಹಾಗೂ ಅದಕ್ಕಿಂತ ಕಡಿಮೆ ಅಂಕಗಳಲ್ಲಿ ಸೋತರೆ, ಸೋತ ತಂಡ ಒಂದು ಅಂಕ ಪಡೆಯುವ ನಿಯಮ ಪ್ರೊ ಕಬಡ್ಡಿ ಲೀಗ್’ನಲ್ಲಿದೆ.

ಆಡಿರುವ ನಾಲ್ಕು ಪಂದ್ಯಗಳಿಂದ 2 ಸೋಲು ಹಾಗೂ 2 ಗೆಲುವುಗಳೊಂದಿಗೆ 9 ಅಂಕ ಸಂಪಾದಿಸಿರುವ ಬೆಂಗಳೂರು ಬುಲ್ಸ್ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಅಕ್ಟೋಬರ್ 19ರಂದು ನಡೆಯಲಿರುವ ತನ್ನ 5ನೇ ಲೀಗ್ ಪಂದ್ಯದಲ್ಲಿ ಮಹೇಂದರ್ ಸಿಂಗ್ ನಾಯಕತ್ವದ ಬುಲ್ಸ್ ಪಡೆ, ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ.

Bengaluru Bulls vs UP Yoddha : ಪ್ರೊ ಕಬಡ್ಡಿ ಲೀಗ್-9: ಸೋಮವಾರದ ಪಂದ್ಯಗಳು (ಅಕ್ಟೋಬರ್ 17

  1. ತಮಿಳು ತಲೈವಾಸ್ Vs ಪಾಟ್ನಾ ಪೈರೇಟ್ಸ್
  2. ದಬಾಂಗ್ ಡೆಲ್ಲಿ Vs ಹರ್ಯಾಣ ಸ್ಟೀಲರ್ಸ್
    ಸ್ಥಳ: ಶ್ರೀ ಕಂಠೀರವ ಒಳಾಂಗಣದ ಕ್ರೀಡಾಂಗಣ, ಬೆಂಗಳೂರು.
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
    ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : India Vs Australia warm-up Match : ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ: ರಾಹುಲ್ ಅಬ್ಬರದ ಅರ್ಧಶತಕ, ಕ್ಟಾಪ್ಟನ್ ರೋಹಿತ್ ಫೇಲ್

ಇದನ್ನೂ ಓದಿ : Pro Kabaddi League-9: ಯೋಧಾ ಚಾಲೆಂಜ್‌ಗೆ ಕೆಂಪು ಗೂಳಿ ರೆಡಿ, ಬೆಂಗಳೂರಲ್ಲಿಂದು ಮಹಾರಾಷ್ಟ್ರ ಡರ್ಬಿ

Bengaluru Bulls vs up Yoddha 2022 Lost Bulls 2nd match Pro Kabbai 2022

Comments are closed.