15,000ಕ್ಕಿಂತ ಕಡಿಮೆ ಬೆಲೆ, 50MP OIS ಕ್ಯಾಮೆರಾ: ಮೋಟೋರೋಲಾದ ದೀಪಾವಳಿ ಧಮಾಕಾ!

Motorola Smartphones: ಫ್ಲಿಪ್‌ಕಾರ್ಟ್‌, ಬಿಗ್ ಬ್ಯಾಂಗ್‌ ದೀಪಾವಳಿ ಸೇಲ್‌ 2025ರಲ್ಲಿ, ಮೋಟೋರೋಲಾ ಫೋನುಗಳನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ.

ಈ ಸೇಲ್‌ನಲ್ಲಿ ತನ್ನ ವೇಗದ 5G ಸ್ಮಾರ್ಟ್‌ಫೋನ್‌ಗಳನ್ನು 15,000 ರೂ. ಗಿಂತ ಕಡಿಮೆ ಬೆಲೆಗೆ ನೀಡುತ್ತಿದೆ. ಮೋಟೋ G96 5G, ಮೋಟೊ G86 ಪವರ್, ಮೋಟೊ G85 5G, ಮೋಟೊ G45 ​​5G, ಮತ್ತು ಮೋಟೊ G35 5G ಫೋನ್‌ಗಳು ಅವುಗಳ ಬಿಡುಗಡೆ ಬೆಲೆಗಿಂತ ಗಮನಾರ್ಹವಾಗಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಈ ದೀಪಾವಳಿ ಸೇಲ್‌ನಲ್ಲಿ ಮೋಟೋರೋಲಾದ ಯಾವ ಫೋನ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡು ಗ್ರಾಹಕರಿಗೆ ದುಪ್ಪಟ್ಟು ಖುಷಿ ನೀಡಲಿದೆ ಎಂದು ನೋಡೋಣ.

ಮೋಟೋರೋಲಾ G96 5G ಫೋನ್‌

ಇದು ಮೋಟೋರೋಲಾದ ಪ್ರೀಮಿಯಂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಆಗಿದೆ. ಮೋಟೋರೋಲಾ G96 5G ಫೋನ್‌ನ 8GB + 18 GB ರೂಪಾಂತರವು 14,999 ರೂ ಕ್ಕೆ ಮಾರಾಟವಾಗುತ್ತಿದೆ.

ಅಂದರೆ ಈ ಫೋನ್‌ ಖರೀದಿಯಲ್ಲಿ 3000 ರೂ. ರಿಯಾಯಿತಿ ಪಡೆಯುಬಹುದು. ಈ ಫೋನ್‌ನ ವೈಶಿಷ್ಟ್ಯವೇನೆಂದರೆ 144Hz pOLED ಕರ್ವ್ಡ್ ಡಿಸ್ಪ್ಲೇ, 50MP ಸೋನಿ LYTIA 700C OIS ಸೆನ್ಸರ್, 8MP ಅಲ್ಟ್ರಾ-ವೈಡ್ ಮತ್ತು ಮ್ಯಾಕ್ರೋ ಕ್ಯಾಮೆರಾ ಮತ್ತು 32MP 4K ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಫೋಟೋದ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು motoAI ಮತ್ತು Google AI ಪರಿಕರಗಳನ್ನು ಬೆಂಬಲಿಸುತ್ತದೆ. ಈ ಫೋನ್ 5500mAh ಬ್ಯಾಟರಿ ಹೊಂದಿದೆ.

ಮೋಟೋ G86 ಪವರ್ 5G ಫೋನ್‌

ನೀವು ಎರಡು ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುವ ಫೋನ್‌ನ ಹುಡುಕಾಟದಲ್ಲಿದ್ದರೆ ಮೋಟೋ G86 ಪವರ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ 8GB+128GB ರೂಪಾಂತರದಲ್ಲಿ 14,999 ರೂ. ಹಬ್ಬದ ಕೊಡುಗೆಯಾಗಿ ಲಭ್ಯವಿದೆ.

ಈ ಫೋನ್‌ನ ಮೂಲ ಬೆಲೆಗಿಂತ 3,000 ರೂ. ರಿಯಾಯಿತಿ ದೊರೆಯಲಿದೆ. ಈ ಫೋನ್ 6.7-ಇಂಚಿನ AMOLED ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ದರ, 4500 nits ವರೆಗೆ ಗರಿಷ್ಠ ಹೊಳಪು ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್‌ನಿಂದ ಚಾಲಿತವಾಗುವ ಈ ಫೋನ್‌ ಆಂಡ್ರಾಯ್ಡ್ 15 ಆಧಾರಿತ ಹಲೋ UI ನಲ್ಲಿ ಕಾರ್ಯನಿರ್ವಹಿಸುತ್ತದೆ. 50-ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಸಂವೇದಕವನ್ನು ಹೊಂದಿರುವ ಕ್ಯಾಮೆರಾವಿದೆ.

ಸೆಲ್ಫಿಗಾಗಿ, 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು 33W ಟರ್ಬೋಪವರ್ ಬೆಂಬಲದೊಂದಿಗೆ 6720mAh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

ಮೋಟೋ ಜಿ45 5ಜಿ

ಮೋಟೋ G45 5G ಈ ಸ್ಮಾರ್ಟಫೋನ್‌ ಅನ್ನು ಕಂಪನಿಯು ಅತ್ಯಂತ ವೇಗದ 5G ಸ್ಮಾರ್ಟ್‌ಫೋನ್ ಎಂದು ಬಣ್ಣಿಸಿದೆ. ಇದು ಸ್ನಾಪ್‌ಡ್ರಾಗನ್ 6s ಜೆನ್ 3 ಪ್ರೊಸೆಸರ್ ಹೊಂದಿದೆ. 12,999 ರೂ. ಮೂಲ ಬೆಲೆಯ ಈ ಫೋನ್ ಈಗ ಹಬ್ಬದ ಕೊಡುಗೆಯ ಭಾಗವಾಗಿ 10,999 ರೂ. ಗೆ ಲಭ್ಯವಿದೆ. ಇದರರ್ಥ 2000 ರೂ. ಉಳಿಸಬಹುದಾಗಿದೆ.

ಮೋಟೋ ಜಿ35 5ಜಿ

ಈ ಸೇಲ್‌ನಲ್ಲಿ ಮೋಟೋರೋಲಾದ ಅತ್ಯಂತ ಬಜೆಟ್‌ ಸ್ನೇಹಿ ಮೊಬೈಲ್‌ ಇದಾಗಿದೆ. 4GB RAM ಮತ್ತು 128GB ಸಂಗ್ರಹಣೆಯನ್ನು ಇದು ಹೊಂದಿದೆ. ವೇಗದ 5G ಸಂಪರ್ಕವನ್ನು ನೀಡುವ ಜಿ35 ಫೋನ್‌ ಅನ್ನು ಕೇವಲ 8,999 ರೂ. ಬೆಲೆಗೆ ಈ ಸೇಲ್‌ನಲ್ಲಿ ಖರೀದಿಸಬಹುದಾಗಿದೆ. ಹಾಗಾಗಿ ಇದು ಅತ್ಯಂತ ಕೈಗೆಟುಕುವ 5G ಫೋನ್ ಆಗಿದೆ.

ಇದನ್ನೂ ಓದಿ: ಯೂನಿಕ್ ಡಿಸೈನ್‌ನ ರಿಯಲ್ ಮಿ 15 ಪ್ರೊ ಗೇಮ್ ಆಫ್ ಥೋನ್ಸ್ ಆವೃತ್ತಿಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ

(Motorola Smartphones Deepavali Deals buy 50 mp ois camera long battery under 15000 rupees)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories