Exclusive: Mayank Agarwal RCB: ಮಯಾಂಕ್ ಅಗರ್ವಾಲ್’ಗೆ RCB ಗಾಳ.. ಮತ್ತೆ ಬೆಂಗಳೂರು ಪರ ಆಡ್ತಾರಾ ಕನ್ನಡಿಗ?

ಬೆಂಗಳೂರು: (Exclusive: Mayank Agarwal RCB)ಕರ್ನಾಟಕ ತಂಡದ ನಾಯಕ, ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಐಪಿಎಲ್’ನಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಆಡಲಿದ್ದಾರೆಯೇ? ಇಂಥದ್ದೊಂದು ಚರ್ಚೆಯನ್ನು ಹುಟ್ಟು ಹಾಕಿದೆ ಅದೊಂದು ಚಿತ್ರ.

(Exclusive: Mayank Agarwal RCB)2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕವೇ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಅಗರ್ವಾಲ್ ಕಳೆದ ನಾಲ್ಕು ವರ್ಷ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಕಳೆದ ಸಾಲಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿ 14 ಪಂದ್ಯಗಳಲ್ಲಿ 7 ಗೆಲುವು ತಂದುಕೊಟ್ಟಿದ್ದರು. ಆದರೆ ಈ ಬಾರಿ ಮಯಾಂಕ್ ಅವರನ್ನು ಪಂಜಾಬ್ ಫ್ರಾಂಚೈಸಿ ರಿಲೀಸ್ ಮಾಡಿದೆ. ಹೀಗಾಗಿ ಮಯಾಂಕ್ ಐಪಿಎಲ್ ಹರಾಜಿಗೊಳಗಾಗಲಿದ್ದು, 1 ಕೋಟಿ ರೂ. ಮೂಲ ಬೆಲೆಯನ್ನು ನಿಗದಿ ಪಡಿಸಿಕೊಂಡಿದ್ದಾರೆ. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.

ಐಪಿಎಲ್ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸುವ ಸಾಧ್ಯತೆಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆರ್’ಸಿಬಿ ಫ್ರಾಂಚೈಸಿಯ ವೈಸ್ ಪ್ರೆಸಿಜೆಂಡ್ ರಾಜೇಶ್ ಮೆನನ್, ಮಯಾಂಕ್ ಅಗರ್ವಾಲ್ ಜೊತೆಗಿರುವ ಚಿತ್ರವನ್ನು ತಮ್ಮ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.

31 ವರ್ಷದ ಮಯಾಂಕ್ ಅಗರ್ವಾಲ್ ಇದುವರೆಗೆ ರಾಯಲ್ ಜಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಐಪಿಎಲ್’ನಲ್ಲಿ ಒಟ್ಟು 113 ಪಂದ್ಯಗಳನ್ನಾಡಿರುವ ಬಲಗೈ ಬ್ಯಾಟ್ಸ್’ಮನ್ ಮಯಾಂಕ್ 22.59ರ ಸರಾಸರಿಯಲ್ಲಿ 134.28ರ ಸ್ಟ್ರೈಕ್’ರೇಟ್’ನಲ್ಲಿ 2327 ರನ್ ಕಲೆ ಹಾಕಿದ್ದಾರೆ. ಐಪಿಎಲ್’ನಲ್ಲಿ ಒಂದು ಶತಕ ಬಾರಿಸಿರುವ ಮಯಾಂಕ್ 12 ಅರ್ಧಶತಕಗಳನ್ನೂ ಬಾರಿಸಿದ್ದಾರೆ.

ಇದನ್ನೂ ಓದಿ:Bengaluru Bulls out: ಸೆಮಿಫೈನಲ್’ನಲ್ಲಿ ಸೋಲು ಕಂಡ ಬುಲ್ಸ್, ನಾಳೆ ಜೈಪುರ, ಪಲ್ಟನ್ ಮಧ್ಯೆ ಫೈನಲ್

ಇದನ್ನೂ ಓದಿ:Shreyas Iyer : ಶತಕ ಮಿಸ್ಸಾದ್ರೂ ಯಾರೂ ಮಾಡಲಾಗದ ದಾಖಲೆ ಬರೆದ ಶ್ರೇಯಸ್ ಅಯ್ಯ

ಕರ್ನಾಟಕ ತಂಡದ ನಾಯಕ ಮಯಾಂಗ್ ಅಗರ್ವಾಲ್ ಜೊತೆ ಮಾಜಿ ನಾಯಕ ಮನೀಶ್ ಪಾಂಡೆ ಕೂಡ ಪ್ರಸಕ್ತ ಸಾಲಿನ ಐಪಿಎಲ್ ಹರಾಜಿಗೊಳಗಾಗಲಿದ್ದಾರೆ. ಇಬ್ಬರೂ ಆಟಗಾರರು 1 ಕೋಟಿ ರೂ.ಗಳ ಮೂಲ ಬೆಲೆ ಹೊಂದಿದ್ದಾರೆ. ಮನೀಶ್ ಪಾಂಡೆ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು.

Mayank Agarwal RCB Mayank Agarwal Will he play for Royal Challengers Bangalore?

Comments are closed.