Nokia G60 5G : ಶುರುವಾಗುತ್ತಾ ನೋಕಿಯಾ ಹವಾ

ನೋಕಿಯಾ (Nokia) ಬ್ರಾಂಡ್ ನ ಪರವಾನಗಿ ಪಡೆದಿರುವ ಹೆಚ್‌ಎಮ್‌ಡಿ ಗ್ಲೋಬಲ್ ಶೀಘ್ರದಲ್ಲೇ ಭಾರತದಲ್ಲಿ ನೋಕಿಯಾ G60 (Nokia G60 5G) ಎನ್ನುವ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್‌ನಲ್ಲಿ ಜಾಗತಿಕವಾಗಿ ಪ್ರಾರಂಭವಾಯಿತು. ಅದು ಮರುಬಳಕೆಯ ಪ್ಲಾಸ್ಟಿಕ್ ಮತ್ತು ಆಂಡ್ರಾಯ್ಡ್ 12 ನೊಂದಿಗೆ ನವೀಕರಣಗೊಂಡಿತ್ತು. ಸ್ಮಾರ್ಟ್‌ಫೋನ್ ಮುಖ್ಯವಾಗಿ ಕ್ಯಾಶುಯಲ್ ಗೇಮಿಂಗ್ ಮತ್ತು ಬ್ರೌಸಿಂಗ್ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಆನಂದಿಸುವ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಕಂಪನಿಯು ನಿರ್ದಿಷ್ಟ ಲಾಂಚ್‌ ದಿನಾಂಕ ಮತ್ತು ಬೆಲೆ ವಿವರಗಳನ್ನು ತಿಳಿಸಿಲ್ಲ. ಆದರೂ ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಬರೆದುಕೊಂಡಿದೆ.

ವೆಬ್‌ಸೈಟ್‌ ಪುಟದಲ್ಲಿ ಅದರ ವಿನ್ಯಾಸ ಮತ್ತು ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಇದು ಯುರೋಪಿಯನ್ ಮಾರುಕಟ್ಟೆಗಳಲ್ಲಿ EUR 320 ಕ್ಕೆ ಬಿಡುಗಡೆಯಾಗಿದೆ. ಅಲ್ಲಿ ಈ ಸ್ಮಾರ್ಟ್‌ಫೋನ್‌ನ ಬೆಲೆ ಸರಿಸುಮಾರು 26,000 ರೂ. ಭಾರತದಲ್ಲಿ ಇದರ ಬೆಲೆ 20,000 ರೂ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 695 (Qualcomm Snapdragon 695) ಚಿಪ್‌ಸೆಟ್ ಅನ್ನು ಪಡೆದುಕೊಂಡಿದೆ.

ಇನ್ನು ವಿನ್ಯಾಸದ ವಿಷಯದಲ್ಲಿ, ಫೋನ್ ಪ್ಲಾಸ್ಟಿಕ್ ಬಿಲ್ಡ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರು ಕಪ್ಪು ಮತ್ತು ಐಸ್ (ಬೂದು) ಬಣ್ಣಗಳ ನಡುವೆ ಆಯ್ದುಕೊಳ್ಳಬಹುದಾಗಿದೆ. ನೋಕಿಯಾ G60, ಐಫೋನ್ 12 ನಂತೆಯೇ ಫ್ಲಾಟ್-ಬಾಡಿ ವಿನ್ಯಾಸವನ್ನು ಹೊಂದಿದೆ. ಇದು ಫ್ಲಾಟ್‌–ಬಾಡಿ ಬಯಸುವ ಯುವ ಗ್ರಾಹಕರನ್ನು ಆಕರ್ಷಿಸಬಹುದು.

ವಿಶೇಷಣಗಳ ವಿಷಯದಲ್ಲಿ, ನೋಕಿಯಾ G60 ಯು 120Hz ರಿಫ್ರೆಶ್ ದರ, ಪೂರ್ಣಪ್ರಮಾಣದ HD+ ರೆಸಲ್ಯೂಶನ್ (1080×2400 ಪಿಕ್ಸೆಲ್‌ಗಳು), ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಸಾಕಷ್ಟು ದೊಡ್ಡ ಅಂದರೆ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು 400 ರ ವಿಶಿಷ್ಟ ಹೊಳಪನ್ನು ನೀಡುತ್ತದೆ. ಇದು ವಾಟರ್-ಡ್ರಾಪ್ ಶೈಲಿಯ ನಾಚ್ ಅನ್ನು ಹೊಂದಿದೆ. ಕ್ಯಾಮೆರಾದ ವಿಚಾರದಲ್ಲಿ ಈ ಫೋನ್‌ನ ಮುಂಭಾಗದ ಫಲಕವು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ ಮತ್ತು ಹಿಂಭಾಗವು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

ನೋಕಿಯಾ G60 ಇದೂ ಸಹ 4500mAh ಬ್ಯಾಟರಿಯನ್ನು ಹೊಂದಿದೆ. ಇದು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ QC2.0 ಮತ್ತು PD3.0 ಅನ್ನು ಬೆಂಬಲಿಸುತ್ತದೆ ಎಂದು ಅಧಿಕೃತ ಸ್ಪೆಕ್ ಶೀಟ್ ಬಹಿರಂಗಪಡಿಸುತ್ತದೆ. ವೆಬ್‌ಸೈಟ್‌ ಪುಟದಲ್ಲಿ ಹೇಳಿರುವಂತೆ ಈ ಫೋನ್ ಸ್ನಾಪ್‌ಡ್ರಾಗನ್ 695 SoC ನಿಂದ ಚಾಲಿತವಾಗಿದೆ. ಇದು 6GB RAM ಮತ್ತು 128GB ಸಂಗ್ರಹಣೆಯನ್ನು ಹೊಂದಿದೆ. ಫೋನಿನ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ಬ್ಲೂಟೂತ್ 5.1, 3.5 ಎಂಎಂ ಜ್ಯಾಕ್ ಮತ್ತು ಟೈಪ್-ಸಿ ಪೋರ್ಟ್ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಗಳನ್ನು ಹೊಂದಿದೆ.

ಇದನ್ನೂ ಓದಿ : Twitter Blue Tick : ಟ್ವೀಟರ್‌ ಉಚಿತವಲ್ಲ ; ಬ್ಲೂ ಟಿಕ್‌ಗೆ ಇನ್ಮುಂದೆ ಮಾಸಿಕ ಶುಲ್ಕ

ಇದನ್ನೂ ಓದಿ :Google Play Store: ಪ್ಲೇ ಸ್ಟೋರ್‌ನಿಂದ 13 ಡೇಂಜರಸ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌

(Nokia G60 5G launch in India soon, will this restart reign of Nokia in India again)

Comments are closed.