Zomato : ಹೈದರಾಬಾದ್​ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್​ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ

Zomato : ನೀವು ನಿಜವಾದ ಆಹಾರ ಪ್ರಿಯರೇ ಆಗಿದ್ದರೆ ಆಯಾ ರಾಜ್ಯಗಳ ವಿಶೇಷ ತಿನಿಸುಗಳನ್ನು ಅದೇ ಪ್ರದೇಶಕ್ಕೆ ತೆರಳಿ ತಿನ್ನುವುದರ ಮಜಾ ಏನು ಎಂಬುದು ತಿಳಿದಿರುತ್ತೆ. ಉದಾಹರಣೆಗೆ ಕರಾವಳಿಯ ಮೀನು ಫ್ರೈ, ಮೈಸೂರಿನ ಮೈಸೂರು ಪಾಕ್​, ಹೈದರಾಬಾದ್​ನ ಬಿರಿಯಾನಿ ಹೀಗೆ ಒಂದೊಂದು ಸ್ಥಳದ ತಿನಿಸುಗಳು ನಿಮಗೆ ಬೇರೆ ಪ್ರದೇಶಗಳಲ್ಲಿ ತಿಂದರೆ ಅಷ್ಟು ಮಜಾ ಕೊಡೋಕೆ ಸಾಧ್ಯವೇ ಇಲ್ಲ. ಆದರೆ ಆನ್​ಲೈನ್​ ಫುಡ್​ ಡೆಲಿವರಿ ಕಂಪನಿಯಾದ ಜೊಮ್ಯಾಟೋ ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡು ಹಿಡಿದಿದೆ.


ಜೊಮ್ಯಾಟೋ ಕಂಪನಿಯು ದೇಶದ ವಿವಿಧ ಭಾಗಗಳಿಗೆ ಆಹಾರವನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಈ ಬಗ್ಗೆ ಜೊಮ್ಯಾಟೋ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್​ ಗೋಯಲ್​ ಅಧಿಕೃತ ಮಾಹಿತಿ ನೀಡಿದ್ದಾರೆ.


ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನೀಡಿರುವ ದೀಪಿಂದರ್​ ಗೋಯಲ್​​ ಭಾರತದ ಯಾವುದೇ ಮೂಲೆಯ ಆಹಾರವನ್ನು ಆರ್ಡರ್​ ಮಾಡಲು ಗ್ರಾಹಕರಿಗೆ ಜೊಮ್ಯಾಟೋ ಅವಕಾಶ ಮಾಡಿಕೊಡುತ್ತಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.


ಐತಿಹಾಸಿಕ ತಿನಿಸುಗಳಾದ ಕೋಲ್ಕತ್ತಾದ ರಸಗುಲ್ಲಾ, ಹೈದರಾಬಾದ್​ ಬಿರಿಯಾನಿ, ಬೆಂಗಳೂರಿನಿಂದ ಮೈಸೂರು ಪಾಕ್​, ಲಖನೌ ಕಬಾಬ್​, ಹಳೆ ದೆಹಲಿ ಭಾಗದಿಂದ ಬಟರ್​ ಚಿಕನ್​​ ಅಥವಾ ಜೈಪುರದಿಂದ ಈರುಳ್ಳಿ ಕಚೋರಿಗಳನ್ನು ನೀವು ಆರ್ಡರ್​ ಮಾಡಿದರೆ ಮಾರನೇ ದಿನವೇ ಈ ಆಹಾರವನ್ನು ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ದೀಪಿಂದರ್​ ಗೋಯಲ್​ ಹೇಳಿದ್ದಾರೆ.

ಜೊಮ್ಯಾಟೋದ ರೆಸ್ಟಾರೆಂಟ್​ ಪಾಲುದಾರರು ಹಾಗೂ ವಿತರಣಾ ಪಾಲುದಾರರ ನೆಟ್​ವರ್ಕ್​ನನ್ನು ಬಳಕೆ ಮಾಡಿಕೊಂಡು ಗ್ರಾಹಕರ ತಮ್ಮಿಷ್ಟದ ತಿನಿಸುಗಳನ್ನು ನಿರ್ದಿಷ್ಟ ಸ್ಥಳದಿಂದಲೇ ಆರ್ಡರ್​ ಮಾಡಿ ತಿನ್ನು ಅವಕಾಶವನ್ನು ಕಲ್ಪಿಸುತ್ತಿದ್ದೇವೆ ಎಂದು ದೀಪಿದಂರ್​ ಗೋಯಲ್​ ಬರೆದುಕೊಂಡಿದ್ದಾರೆ.

ಇದನ್ನು ಓದಿ : permission to place Ganesha idol :ಗಣೇಶ ವಿಗ್ರಹ ಇರಿಸಲು ಅನುಮತಿ ಕೇಳಲು ಇದೇನು ಪಾಕಿಸ್ತಾನವಾ : ಯತ್ನಾಳ್​​ ಕಿಡಿ

ಇದನ್ನೂ ಓದಿ :

Now You Can Order Mysore Pak From Bengaluru, Kebabs From Lucknow On Zomato. Here’s How

Comments are closed.