Dakshina Kannada district : ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ : ಬೈಕ್​ನಲ್ಲಿ ಹಿಂಬದಿ ಸವಾರರು ಕೂರುವ ಹಾಗಿಲ್ಲ

ಮಂಗಳೂರು : Dakshina Kannada district : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಕೊಲೆ ಪ್ರಕರಣಗಳು ವರದಿಯಾಗಿರುವುದು ಸಂಪೂರ್ಣ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸ್​ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೊಂದು ಅಹಿತಕರ ಘಟನೆ ಸಂಭವಿಸಿದಂತೆ ಇನ್ನಿಲ್ಲದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ.


ಮಂಗಳೂರು ಹೊರ ವಲಯದ ಬಜಪೆ ಹಾಗೂ ಸುರತ್ಕಲ್​ ಪ್ರದೇಶಗಳಿಗೆ ಭೇಟಿ ನೀಡಿದ ಎಡಿಜಿಪಿ ಅಲೋಕ್​ ಕುಮಾರ್​ ಸಾರ್ವಜನಿಕರು ಹಾಗೂ ಪೊಲೀಸ್​ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಭದ್ರತೆಯ ಕುರಿತು ಪರಿಶೀಲನಾ ಸಭೆ ನಡೆಸಿದ ಎಡಿಜಿಪಿ ಅಲೋಕ್​ ಕುಮಾರ್​​ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದಾರೆ.


ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಬದಿ ಸವಾರರಿಗೆ ಬೈಕ್​ನಲ್ಲಿ ಕುಳಿತುಕೊಳ್ಳಲು ಅವಕಾಶ ಇರೋದಿಲ್ಲ. ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಈ ನಿಯಮದಿಂದ ರಿಯಾಯಿತಿ ನೀಡಲಾಗಿದೆ. ಕೇವಲ ಪುರುಷ ಹಿಂಬದಿ ಸವಾರರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಹಿಂಬದಿ ಸವಾರರಿಂದ ದುಷ್ಕೃತ್ಯಗಳು ನಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರಲಿದೆ. ಈ ಹಿಂದೆ ಬೇರೆ ರಾಜ್ಯಗಳಲ್ಲಿಯೂ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ರೀತಿಯ ನಿಯಮವನ್ನು ಜಾರಿಗೆ ತರಲಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೊಲೆ ಪ್ರಮಾಣವನ್ನು ಕಡಿಮೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್​ ಕುಮಾರ್​ ಹೇಳಿದ್ದಾರೆ.

ಇದನ್ನು ಓದಿ : DK Shivakumar hug Siddaramaiah : ಸಿದ್ದರಾಮಯ್ಯ ತಬ್ಬಿಕೊಳ್ಳಲು ಡಿಕೆ ಶಿವಕುಮಾರ್‌ಗೆ ರಾಹುಲ್ ಕೊಟ್ರಾ ಸಲಹೆ : ವೈರಲ್ ವಿಡಿಯೋದಲ್ಲಿ ಬಯಲಾಯ್ತು ಸತ್ಯ

ಇದನ್ನೂ ಓದಿ : man killed for bar bill : ಬಾರ್​ನಲ್ಲಿ ಬಿಲ್​ ಪಾವತಿ ಮಾಡುವ ವಿಚಾರಕ್ಕೆ ಜಗಳ : ಮಧ್ಯಸ್ಥಿಕೆ ವಹಿಸಿದವನ ಬರ್ಬರ ಕೊಲೆ

New rules have been implemented in Dakshina Kannada district to maintain peace and order

Comments are closed.