Oppo A79 5G : ಚೀನಾ ಮೂಲದ ಒಪ್ಪೋ ಕಂಪೆನಿ ಅತ್ಯಾಧುನಿಕ ಸ್ಮಾರ್ಟ್ಪೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ 79 5ಜಿ ( Oppo A79 5G) ಫೋನ್ ಬಿಡುಗಡೆ ಮಾಡಿದೆ. 50MP ಕ್ಯಾಮೆರಾ ಒಳಗೊಂಡಿರುವ ಈ 5G ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಮೊಬೈಲ್ನ ಬೆಲೆ ಎಷ್ಟು ? ವೈಶಿಷ್ಟ್ಯತೆಗಳೇನು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಒಪ್ಪೋ ಕಂಪೆನಿ ಭಾರತೀಯ ಮಾರುಕಟ್ಟೆಗೆ ಈಗಾಗಲೇ ಎ ಸರಣಿಯಲ್ಲಿ ಹಲವು ಸ್ಮಾರ್ಟ್ಪೋನ್ಗಳನ್ನು ಬಿಡುಗಡೆಗೊಳಿಸಿದೆ. ಇದೀಗ 5G ತಂತ್ರಜ್ಞಾನ ದಲ್ಲಿ ಮತ್ತೊಂದು ಮೊಬೈಲ್ ಪೋನ್ ಗ್ರಾಹಕರಿಗೆ ನೀಡಿದೆ. A ಸರಣಿಯ ಹೊಸ Oppo A79 5G ಫೋನ್ ಎರಡು ಬಣ್ಣ ಆಯ್ಕೆಗಳನ್ನು ಒಳಗೊಂಡಿದೆ.
ಮೀಡಿಯಾ ಟೆಕ್ ಡೈಮೆನ್ಷನ್ ಪ್ರೊಸೆಸರ್, ಡ್ಯುಯಲ್ ಕ್ಯಾಮೆರಾ ಸೆಟಪ್, ಶಕ್ತಿಯುತ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯತೆ ಗಳನ್ನು ಒಳಗೊಂಡಿದೆ. ಜೊತೆಗೆ ಇತರ ಕಂಪೆನಿಯ ಮೊಬೈಲ್ ಗಳಿಗೆ ಹೋಲಿಕೆ ಮಾಡಿದ್ರೆ ಬೆಲೆ ಅತ್ಯಂತ ಕಡಿಮೆ. ಸಾಮಾನ್ಯವಾಗಿ ಈ ಸ್ಮಾರ್ಟ್ಪೋನ್ ಒನ್ ಪ್ಲಸ್ ನೋರ್ಟ್ (OnePlus Nord CE 3 Lite 5G), ವಿವೋ ಟಿ2 5G (Vivo T2 5G) ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ34 5G( Samsung Galaxy M34 5G) ಮೊಬೈಲ್ಗೆ ನೇರ ಪ್ರತಿಸ್ಪರ್ಧಿಯಾಗಿದೆ.

ಇದನ್ನು ಓದಿ : ಹೆಚ್ಚುವರಿ ಸಿಮ್ಕಾರ್ಡ್ ಇಟ್ಟುಕೊಳ್ಳುವಂತಿಲ್ಲ: ಸಿಮ್ಕಾರ್ಡ್ ಖರೀದಿಗೂ ಹೊಸ ರೂಲ್ಸ್, ಈ ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ
ಹೊಸ Oppo A79 5G ಸ್ಮಾರ್ಟ್ಪೋನ್ ಭಾರತದಲ್ಲಿ 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರವೇ ಲಭ್ಯವಿದೆ. ಈ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಕೇವಲ 19,999 ರೂ.ಗೆ ಮಾರಾಟವಾಗುತ್ತಿದೆ. ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಬಣ್ಣಗಳಲ್ಲಿ ಮೊಬೈಲ್ ಖರೀದಿ ಮಾಡಬಹುದಾಗಿದೆ. Oppo ಇ-ಸ್ಟೋರ್, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ವಿವಿಧ ಇ- ಕಾಮರ್ಸ್ ಸೈಟ್ಗಳ ಮೂಲಕ ಖರೀದಿಸಬಹುದು.
ಇನ್ನು ಭಾರತದ ಪ್ರಮುಖ ಬ್ಯಾಂಕುಗಳಾದ ಎಸ್ಬಿಐ, ಕೋಟಕ್ ಮಹೇಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್ಸಿ ಫಸ್ಟ್, ಎಯು ಫೈನಾನ್ಸ್ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಈ ಮೊಬೈಲ್ ಪೋನ್ ಖರೀದಿಸಿದ್ರೆ 4,000. ರಿಯಾಯಿತಿ ಪಡೆಯಬಹುದಾಗಿದೆ.
Oppo A79 5G ವೈಶಿಷ್ಟ್ಯಗಳು:
Oppo A79 5G ಮೊಬೈಲ್ ಪ್ರಮುಖವಾಗಿ ಡ್ಯುಯಲ್ ಸಿಮ್ (ನ್ಯಾನೋ)ಒಳಗೊಂಡಿದೆ. OS 13.1 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ಪೋನ್ 6.72-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್ಗಳು) LCD ಡಿಸ್ಪ್ಲೇ ಹೊಂದಿದೆ. ಜೊತೆಗೆ 90Hz ರಿಫ್ರೆಶ್ ದರ, 391ppi ಪಿಕ್ಸೆಲ್ ಇದ್ದು, 650nits ಗರಿಷ್ಠ ಹೊಳಪನ್ನು ಹೊಂದಿದೆ. ಇನ್ನು 7nm MediaTek ಡೈಮೆನ್ಸಿಟಿ 6020 SoC ನಿಂದ ನಡೆಸಲ್ಪಡುತ್ತಿದೆ.

8GB LPDDR4X RAM ಮತ್ತು 128GB UFS2.2 ಸಂಗ್ರಹಣೆ ಮಾಡಬಹುದಾಗಿದ್ದು, 16GB RAM ವರೆಗೆ ವಿಸ್ತರಣಾ ಸಾಮರ್ಥ್ಯವನ್ನು ಒಳಗೊಂಡಿದೆ. ಕ್ಯಾಮರಾ ವಿಚಾರದಲ್ಲಿಯೂ ಇದು ಗ್ರಾಹಕರಿಗೆ ಬೆಸ್ಟ್ ಮೊಬೈಲ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, f/1.8 ಅಪರ್ಚರ್ ಮತ್ತು 77-ಡಿಗ್ರಿ ಫೀಲ್ಡ್ ಆಫ್ ವ್ಯೂ ಬಳಕೆ ಮಾಡಬಹುದಾಗಿದೆ. ಅಲ್ಲದೇ f/2.4 ಅಪರ್ಚರ್ ಲೆನ್ಸ್ನೊಂದಿಗೆ 2-ಮೆಗಾಪಿಕ್ಸೆಲ್ ಕ್ಯಾಮರಾ ಒಳಗೊಂಡಿದೆ.
ಇದನ್ನೂ ಓದಿ : Xiaomi 12 Pro 5G ಮೊಬೈಲ್ಗೆ ಬಾರೀ ಡಿಸ್ಕೌಂಟ್ : 62,999 ರೂ. ಮೊಬೈಲ್ ಕೇವಲ ರೂ.27,999ಕ್ಕೆ ಸೇಲ್
ಮೊಬೈಲ್ ಪ್ರಿಯರಿಗಾಗಿಯೇ ಸೆಲ್ಫಿ ಹಾಗೂ ವಿಡಿಯೋ ಚಾಟ್ಗಳಿಗಾಗಿ f/2.0 ಅಪರ್ಚರ್ ಲೆನ್ಸ್ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇನ್ನು ಅತೀ ವೇಗದ ಚಾರ್ಜಿಂಗ್ಗಾಗಿಯೇ ಈ ಮೊಬೈಲ್ ಪೋನ್ನಲ್ಲಿ 33W SuperVOOC ವೇಗದ ಚಾರ್ಜಿಂಗ್ ಜತೆಗೆ 5,000mAh ಬ್ಯಾಟರಿ ಒಳಗೊಂಡಿದೆ ಕೇವಲ 30 ನಿಮಿಷಗಳಲ್ಲಿ ಬ್ಯಟರಿಯನ್ನು 51% ಚಾರ್ಜ್ ಮಾಡಬಹುದಾಗಿದೆ.

ಇಷ್ಟೇ ಅಲ್ಲದೇ ವೈ-ಫೈ, ಬ್ಲೂಟೂತ್ 5.3, 3.5 ಎಂಎಂ ಆಡಿಯೊ ಜಾಕ್, ಯುಎಸ್ಬಿ ಟೈಪ್-ಸಿ ಪೋರ್ಟ್ ಒಳಗೊಂಡಿದೆ. ಇನ್ನು ಸುರಕ್ಷತೆಗಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಹೊಂದಿದ್ದು, ಫೇಸ್ ಅನ್ಲಾಕ್ ವೈಶಿಷ್ಠ್ಯತೆಗಳನ್ನು ಹೊಂದಿದೆ. ಒಟ್ಟಿನಲ್ಲಿ ಭಾರತದ ಗ್ರಾಹಕರಿಗೆ ಒಂದೊಂದು ಉತ್ತಮವಾದ ಆಯ್ಕೆಯಾಗಿದೆ.
Oppo A79 5G launch with 50MP Camera Available at lowest price Just Rs 19999