Oppo Reno 8T 5G Smartphone: 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುವ ಓಪ್ಪೋ ರೆನೊ 8T 5G ಮೊಬೈಲ್‌ ಖರೀದಿಗೆ ಲಭ್ಯ; ಹೇಗಿದೆ ಇದರ ವೈಶಿಷ್ಟ್ಯತೆ

ಉತ್ತಮ ಕ್ಯಾಮೆರಾದಿಂದಲೇ ಹೆಸರುಗಳಿಸಿರುವ ಓಪ್ಪೋ (Oppo) ಇತ್ತೀಚೆಗೆ ಹೊಸ ಹ್ಯಾಂಡ್‌ಸೆಟ್‌ (Handset) ಅನ್ನು ವಿಯೆಟ್ನಾಂನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು (Oppo Reno 8T 5G Smartphone). ಅದು ಈಗ ಭಾರತದಲ್ಲೂ (India) ಫೆಬ್ರವರಿ 3 ರಂದು (ಇಂದು) ಬಿಡುಗಡೆ ಮಾಡಲಿದೆ. ಓಪ್ಪೋ ರೆನೊ 8T 5G ಮತ್ತು ರೆನೊ 8T ಸ್ಮಾರ್ಟ್‌ಫೋನ್‌ ಅನ್ನು ಅಂದಾಜು 40,000 ರೂ. ಗಳ ಒಳಗೆ ಪರಿಚಯಿಸಬಹುದು ಎಂಬ ನಿರೀಕ್ಷೆಯಿದೆ. 8GB RAM ಮತ್ತು 128GB ಸಂಗ್ರಹಣೆಯಿರುವ ಇದು ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸ್ಸರ್‌ ಮತ್ತು ಶಕ್ತಿಶಾಲಿ 108 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. ಈ ಹ್ಯಾಂಡ್‌ಸೆಟ್‌ನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು ಇಲ್ಲಿವೆ ಓದಿ.

ಓಪ್ಪೋ ರೆನೊ 8T 5G ಸ್ಮಾರ್ಟ್‌ಫೋನ್‌ ವೈಶಿಷ್ಟ್ಯತೆಗಳು :

ಓಪ್ಪೋದ ಹೊಸ ಫೋನ್‌ ರೆನೊ 8T 5G ಕಲರ್‌ OS 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 6.7 ಇಂಚಿನ ಕರ್‌ವ್ಡ್‌ OLED ಫುಲ್‌ HD ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ನ್ಯಾನೊ ಡ್ಯುಯಲ್‌ SIM ಅನ್ನು ಅಳವಡಿಸಬಹುದಾಗಿದೆ. ಈ ಹ್ಯಾಂಡ್‌ಸೆಟ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದು 108-ಮೆಗಾಪಿಕ್ಸೆಲ್ ಇರುವ ಪ್ರೈಮರಿ ಶೂಟರ್, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಜೊತೆಗೆ 89-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಇನ್ನು ಬ್ಯಾಟರಿಯ ವಿಷಯದಲ್ಲಿ ಹೊಸ ಓಪ್ಪೋ ರೆನೊ ಮೊಬೈಲ್‌ 4,800 mAh ಬ್ಯಾಟರಿಯೊಂದಿಗೆ ಬರಲಿದೆ. ಇದು 67W SuperVOOC ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : Portronics Harmonics Z5 neckband : ನೆಕ್‌ಬ್ಯಾಂಡ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಹೊಸ ವಿನ್ಯಾಸದ ನೆಕ್‌ಬ್ಯಾಂಡ್‌

ಓಪ್ಪೋ ರೆನೊ 8T ಸ್ಮಾರ್ಟ್‌ಫೋನ್‌ ವೈಶಿಷ್ಟ್ಯಗಳು :
ರೆನೊ 8T ಸ್ಮಾರ್ಟ್‌ಫೋನ್‌ ಕೂಡಾ ಕಲರ್‌ OS 13.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.43-ಇಂಚಿನ ಫುಲ್‌ HD AMOLED ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 695 5G ಪ್ರೊಸೆಸ್ಸರ್‌ನಿಂದ ಚಾಲಿತವಾಗಲಿದೆ. ಹೊಸ ರೆನೊ 8T ಸ್ಮಾರ್ಟ್‌ಫೋನ್‌ 100-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, 2-ಮೆಗಾಪಿಕ್ಸೆಲ್ ಸೆಕೆಂಡರಿ ಮೈಕ್ರೊಸೆನ್ಸರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಅರೇಯೊಂದಿಗೆ ಬರಲಿದೆ. ಇದು ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ರೆನೊ 8T ಸ್ಮಾರ್ಟ್‌ಫೋನ್‌ 256GB UFS2.2 ಸಂಗ್ರಹಣೆಯೊಂದಿಗೆ ಬರುತ್ತದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್ ಬಳಸಿ ಮತ್ತಷ್ಟು ವಿಸ್ತರಿಸಬಹುದಾಗಿದೆ. ಸಂಪರ್ಕ ಇದು 4G LTE ಯನ್ನು ಅವಲಂಬಿಸಿದೆ. 3.5mm ಆಡಿಯೊ ಜಾಕ್, Wi-Fi, ಬ್ಲೂಟೂತ್ 5.3, USB OTG, GPS/ A-GPS ಮತ್ತು USB ಟೈಪ್-C ಕನೆಕ್ಟರ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿಯಿಂದ ಚಾಲಿತವಾಗಲಿದೆ.

ಬೆಲೆ ಮತ್ತು ಲಭ್ಯತೆ:
ಓಪ್ಪೋ ರೆನೊ 8T ಸ್ಮಾರ್ಟ್‌ಫೋನ್‌ ಬ್ಲಾಕ್‌ ಸ್ಟಾರ್‌ಲೈಟ್‌ ಮತ್ತು ಸನ್‌ಸೆಟ್‌ ಆರೆಂಜ್‌ ಬಣ್ಣಗಳಲ್ಲಿ ಲಭ್ಯವಿರಲಿದೆ. 8GB RAM + 256GB ಸಂಗ್ರಹಣೆಯಿರುವ ಇದು ವಿಯೆಟ್ನಾಂ ನಲ್ಲಿ VND 8,490,000 ಗಳಿಗೆ (ಅಂದಾಜು 29,8000 ರೂ) ಲಭ್ಯವಿರಲಿದೆ. ಭಾರತದಲ್ಲಿ ಇದನ್ನು ಅಂದಾಜು 40,000 ರೂ. ಒಳಗೆ ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : Samsung New Phones : ಫೆಬ್ರವರಿ 1ಕ್ಕೆ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿ ಸ್ಮಾರ್ಟ್‌ಫೋನ್‌ಗಳು

(Oppo Reno 8T 5G smartphone is now available in India. Check the price and specifications)

Comments are closed.