Poco X5 Pro: ಭಾರತದ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಲಗ್ಗೆ; ಇಂದು ಬಿಡುಗಡೆಯಾಗುತ್ತಿರುವ ಪೋಕೊ X5 ಪ್ರೋ ಸ್ಮಾರ್ಟ್‌ಫೋನ್‌

ದಿನಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ (Smartphone), ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳುತ್ತವೆ. ಈಗ ಅದರ ಸಾಲಿಗೆ ಸೇರಲಿದೆ ಪೋಕೊ (Poco) ದ ಹೊಸ X5 ಪ್ರೋ (Poco X5 Pro) ಸ್ಮಾರ್ಟ್‌ಫೋನ್‌. ಪೋಕೊ ಇಂದು ಸಂಜೆ 5:30 ಕ್ಕೆ ಹೊಸ ಸ್ಮಾರ್ಟ್‌ಫೋನ್‌ ಪೋಕೊ X5 ಪ್ರೋ ಅನ್ನು ಭಾರತದ ಮಾರುಕಟ್ಟೆಗೆ (India Market) ಪರಿಚಯಿಸಲಿದೆ. ಇದು ಕಳೆದ ವರ್ಷ ಬಿಡುಗಡೆಯಾದ X4 ಪ್ರೋ ಆವೃತ್ತಿಯ ಫೋನ್‌ ಅನ್ನೇ ಅನುಸರಿಸಲಿದೆ ಎಂದು ಕಂಪನಿ ಟಿಸರ್‌ ಮೂಲಕ ಹೇಳಿತ್ತು. ಪೋಕೊ, X5 ಪ್ರೋ ಅನ್ನು ಭಾರತದಲ್ಲಿ ಲಾಂಚ್‌ ಮಾಡಲು ಭಾರತೀಯ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯಾ ಅವರೊಂದಿಗೆ ಸಹಪಾಲುದಾರಿಕೆ ಹೊಂದಿದೆ. ಈ ಫೋನ್‌ನ ಲಾಂಚಿಂಗ್‌ ಈವೆಂಟ್‌ ಇಂದು (ಫೆಬ್ರವರಿ 6, 2023) ನಡೆಯಲಿದೆ. ಇದರ ಲೈವ್‌–ಸ್ಟ್ರೀಮ್‌ ಅನ್ನು ಆನ್‌ಲೈನ್‌ನಲ್ಲಿ ನೋಡಬಹುದಾಗಿದೆ.

ಪೋಕೊ X5 ಪ್ರೋ ಫೋನಿನ ಬೆಲೆ:
ಪೋಕೊ X5 ಪ್ರೋ ಮಿಡ್‌ ರೇಂಜ್‌ನ ಫೋನ್‌ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇದರ ಆರಂಭಿಕ ಬೆಲೆ ಸುಮಾರು 22,999 ರೂ. ಗಳಿರಬಹುದು. ನಿಖರ ಬೆಲೆ ಅಧಿಕೃತವಾಗಿ ಫೋನ್‌ ಬಿಡುಗಡೆಯಾದ ಮೇಲೆ ತಿಳಯಲಿದೆ. ಈ ಫೋನ್‌ಗೆ ಫ್ಲಿಪ್‌ಕಾರ್ಟ್‌, ICICI ಬ್ಯಾಂಕ್‌ ಗ್ರಾಹಕರಿಗೆ 2,000 ರೂ. ಗಳ ವರೆಗೆ ಆಫರ್‌ ನೀಡಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಫೆಬ್ರವರಿ 13 ರಿಂದ ಫ್ಲಿಪ್‌ ಕಾರ್ಟ್‌ನಲ್ಲಿ ಸೇಲಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ :Best Ground Clearance Cars : ಈ ಬಜೆಟ್‌ ಕಾರುಗಳನ್ನೊಮ್ಮೆ ನೋಡಿ; ಇವು ಉತ್ತಮ ಗ್ರೌಂಡ್ ಕ್ಲಿಯರೆನ್ಸ್‌ ಕಾರುಗಳು

ವೈಶಿಷ್ಟ್ಯತೆಗಳು :
ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಪೋಕೊ ಬಿಡುಗಡೆ ಮಾಡುತ್ತಿರುವ X5 ಪ್ರೋ ಫೋನ್‌ಗಳು ಸ್ನಾಪ್‌ಡ್ರಾಗನ್‌ 778G ಚಿಪ್‌ಸೆಟ್‌ನಿಂದ ವೇಗವನ್ನು ಪಡೆದುಕೊಳ್ಳಲಿದೆ. ಈ ಫೋನ್‌ 120 Hz ರಿಫ್ರೆಶ್‌ ದರದೊಂದಿಗೆ ಡೋಲ್ಬೆ ವಿಶನ್‌ ಅನ್ನು ಬೆಂಬಲಿಸಲಿದೆ. ಕಂಪನಿ ಹೇಳಿರುವಂತೆ ಇದು 108 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. ಇದು 4‌K ವರೆಗೆ ರೆಕಾರ್ಡ್‌ ಮಾಡಲಿದೆ. ಜೊತೆಗೆ ಇರ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಇದು ಡಿಸ್ಪ್ಲೇಯ ರಕ್ಷಣೆಗಾಗಿ ಶಕ್ತಿಶಾಲಿ ಗೊರಿಲ್ಲಾ ಗ್ಲಾಸ್‌ 5 ಅನ್ನು ಪಡೆದುಕೊಂಡಿದೆ. ಸ್ಟೀರಿಯೋ ಸ್ಪೀಕರ್‌ಗಳು 3.5mm ನ ಆಡಿಯೋ ಜಾಕ್‌ ಹೊಂದಿರಲಿದೆ. ಇದು ಶಕ್ತಿಶಾಲಿ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ. 67 Wನ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಲಾಂಚಿಂಗ್‌ ಈವೆಂಟ್‌ ನೋಡುವುದು ಹೇಗೆ?
ಪೋಕೊ X5 ಪ್ರೋ ಸ್ಮಾರ್ಟ್‌ಫೋನ್‌ ಅನ್ನು ಇಂದು (ಫೆಬ್ರವರಿ 6) ಸಂಜೆ 5:30ಕ್ಕೆ ಬಿಡುಗಡೆ ಮಾಡಲಿದೆ. ಈ ಲಾಂಚಿಂಗ್‌ ಈವೆಂಟ್‌ ಅನ್ನು ಲೈವ್‌ನಲ್ಲಿ ನೋಡಬಹುದಾಗಿದೆ. ಹೇಗೆಂದರೆ ಯೂಟ್ಯೂಬ್‌ ಮತ್ತು ಪೋಕೊನ ವೆಬ್‌ಸೈಟ್‌ ಮೂಲಕ ನೋಡಬಹುದಾಗಿದೆ. ಇದನ್ನು ಫ್ಲಿಪ್‌ಕಾರ್ಟ್‌ ನಲ್ಲೂ ಸಹ ನೋಡಬಹುದಾಗಿದೆ.

ಇದನ್ನೂ ಓದಿ :Portronics Harmonics Z5 neckband : ನೆಕ್‌ಬ್ಯಾಂಡ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಹೊಸ ವಿನ್ಯಾಸದ ನೆಕ್‌ಬ್ಯಾಂಡ್‌

(Poco X5 Pro launching today in India. Know the expected price, specifications)

Comments are closed.