5 ಟೆಸ್ಟ್ ಪಂದ್ಯಗಳ ಮೇಲೆ ನಿಂತಿದೆ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯ

ಬೆಂಗಳೂರು: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ನಾಯಕತ್ವದ ಸತ್ವಪರೀಕ್ಷೆ ಈಗ (Rohit Sharma 5 Test Match) ಆರಂಭವಾಗಿದೆ. ಮುಂದಿನ 5 ಟೆಸ್ಟ್ ಪಂದ್ಯಗಳು ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯವನ್ನು ನಿರ್ಧರಿಸಲಿದೆ.ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಈಗಾಗಲೇ ಏಷ್ಯಾ ಕಪ್ ಟಿ20 ಟೂರ್ನಿ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಸೋಲು ಕಂಡಿದೆ. ಈ ವರ್ಷ ರೋಹಿತ್ ಸಾರಥ್ಯದಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ಅರ್ಹತೆ ಪಡೆದರೆ) ಮತ್ತು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಭಾರತ ಆಡಲಿದೆ.

ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಬೇಕಾದರೆ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು (India Vs Australia Border-Gavaskar test series) ಭಾರತ ಗೆಲ್ಲಲೇಬೇಕಿದೆ. ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಫೆಬ್ರವರಿ 9ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಗೆದ್ದರೆ ನಂತರ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಆಡಲಿದೆ. ಈಗಾಗಲೇ 2021ರ ಫೈನಲ್’ನಲ್ಲಿ ಸೋತು ನಿರಾಸೆಗೊಳಗಾದಿದ್ದ ಭಾರತ ಈ ಬಾರಿ ಟೆಸ್ಟ್ ಚಾಂಪಿಯನ್’ಷಿಪ್ ಗೆಲ್ಲುವ ಉತ್ಸಾಹದಲ್ಲಿದೆ.

2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್’ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಸತತ 10 ವರ್ಷಗಳಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ವರ್ಷ ಭಾರತಕ್ಕೆ ಎರಡು ಐಸಿಸಿ ಟ್ರೋಫಿಗಳ ಚಾಲೆಂಜ್ ಎದುರಾಗಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಪದಾಧಿಕಾರಿಯೊಬ್ಬರು, “ನೋಡಿ, ಮೆಸೇಜ್ ಕ್ಲಿಯರ್ ಇದೆ. ನಾವು ಇನ್ನೊಂದು ಐಸಿಸಿ ಟ್ರೋಫಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ವಿಶ್ವಕಪ್ ಗೆಲ್ಲದೇ ಇದ್ದರೆ ದ್ವಿಪಕ್ಷೀಯ ಸರಣಿಗಳನ್ನಷ್ಟೇ ಗೆದ್ದರೆ ಏನು ಪ್ರಯೋಜನ? ಕಳೆದ ಎರಡು ವರ್ಷಗಳಲ್ಲಿ ನಾವು ಇಂತಹ 3 ಟೂರ್ನಿಗಳನ್ನು ಸೋತಿದ್ದೇವೆ. ಅದು ರೋಹಿತ್ ಶರ್ಮಾ ಮತ್ತು ಇಡೀ ತಂಡಕ್ಕೂ ಗೊತ್ತು. ಹೀಗಾಗಿ ಎಲ್ಲರೂ ವಿಶ್ವಕಪ್ ಗೆಲ್ಲುವ ದೃಢ ವಿಶ್ವಾಸ ಹೊಂದಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ : Border-Gavaskar Test series: ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್ ಚಾಲೆಂಜ್

ಇದನ್ನೂ ಓದಿ : KL Rahul: ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಜೊತೆ ರಾಹುಲ್ ಓಪನರ್, ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ?

ಇದನ್ನೂ ಓದಿ : Virat Kohl‌i : ಕಾಂಗರೂ ಬೇಟೆಗೆ ಕಿಂಗ್ ಕೊಹ್ಲಿ ಭರ್ಜರಿ ತಾಲೀಮು, ಜಿಮ್’ನಲ್ಲಿ ವಿರಾಟ್, biceps ವೈರಲ್

ಒಂದು ವೇಳೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲಲು ವಿಫಲವಾಗಿ, ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ತಲುಪಲು ವಿಫಲವಾದರೆ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯಕ್ಕೆ ಕುತ್ತು ಬರಲಿದೆ. 2021-23ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಜೂನ್’ನಲ್ಲಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ನಂತರ ಭಾರತ 2023-25ನೇ ಸಾಲಿನ ಟೆಸ್ಟ್ ಚಾಂಪಿಯನ್’ಷಿಪ್’ಗೆ ಸಜ್ಜಾಗಬೇಕಿರುವುದರಿಂದ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವ ಬಿಟ್ಟು ಕೊಡುವ ಸಾಧ್ಯತೆಯಿದೆ.

Rohit Sharma 5 Test Match : Rohit Sharma’s Test future rests on 5 Test matches

Comments are closed.