Govt bus-van accident: ಸರ್ಕಾರಿ ಬಸ್-ವ್ಯಾನ್ ಢಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ತ್ರಿಪುರಾ: (Govt bus-van accident) ಸರ್ಕಾರಿ ಬಸ್‌ಗೆ ವ್ಯಾನ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವೆಲ್ಲಕೋವಿಲ್ ಬಳಿ ನಡೆದಿದೆ. ಇನ್ನೂ ಅದೇ ಕುಟುಂಬದ ಮೂವರು ಅಪಘಾತದಲ್ಲಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮೃತರನ್ನು ತ್ರಿಪುರಾ ಪಾಂಡ್ಯನ್‌ನ ಮನೋಕರನ್ ಅವರ ಪುತ್ರ ಎಂ. ಯೋಗೇಶ್ವರನ್ (26), ಅವರ ಚಿಕ್ಕಮ್ಮ ಪ್ರಮೀಳಾ (45) ಮತ್ತು ತಾಯಿ ದೇವಿ (60) ಎಂದು ಪೊಲೀಸರು ಗುರುತಿಸಿದ್ದಾರೆ.

ಮದುವೆ ದಿನಾಂಕವನ್ನು ಅಂತಿಮಗೊಳಿಸಲು ವದುವಿನ ಮನೆಗೆ ಹೋಗಿದ್ದು, ವಧುವಿನ ಮನೆಯಿಂದ ದಿನಾಂಕ ನಿಗಧಿ ಮಾಡಿ ಕುಟುಂಬ ಸದಸ್ಯರೊಂದಿಗೆ ಮನೆಗೆ ಮರಳುತ್ತಿದ್ದು, ಕೊಯಮತ್ತೂರು ಕಡೆಯಿಂದ ಕುಂಭಕೋಣಂ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್‌ಗೆ ಕರೂರ್-ಕೊಯಮತ್ತೂರು ಹೆದ್ದಾರಿಯಲ್ಲಿ ಓಲಪಾಳ್ಯಂ ಬಳಿ ಕುಟುಂಬದವರಿದ್ದ ವ್ಯಾನ್‌ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ವ್ಯಾನಿನೊಳಗೆ ಸಿಲುಕಿಕೊಂಡಿದ್ದಾರೆ. ಸಹ ವಾಹನ ಸವಾರರು ಅವರ ರಕ್ಷಣೆಗೆ ಧಾವಿಸಿದ್ದು, ವ್ಯಾನ್‌ನಿಂದ ಹೊರತೆಗೆದರು.

ಆದರೆ ಯೋಗೇಶ್ವರನ್ ಮತ್ತು ಪ್ರಮೀಳಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ನಾಲ್ವರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಗೇಶ್ವರನ್‌ ತಾಯಿ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗಳಾಗಿರುವ ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ 26 ವರ್ಷದ ಯುವಕ ಯೋಗೇಶ್ವರನ್ ಇನ್ನು ಕೆಲವೇ ವಾರಗಳಲ್ಲಿ ವಿವಾಹವಾಗಲಿದ್ದ ಎಂದು ಗಂಗಮ್ ಪೊಲೀಸರು ತಿಳಿಸಿದ್ದಾರೆ. ಅವರು ವಧುವಿನ ಮನೆಯಿಂದ ಇತರ ಕುಟುಂಬ ಸದಸ್ಯರೊಂದಿಗೆ‌ ಮದುವೆ ದಿನಾಂಕ ನಿಗಧಿಗೊಳಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ವರ ದುರಂತವಾಗಿ ಮರಣಕ್ಕೊಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು

ಇದನ್ನೂ ಓದಿ : Cow smuggling case: ಹಸು ಕಳ್ಳಸಾಗಣೆ ಪ್ರಕರಣ: 120 ಮಂದಿ ಅರೆಸ್ಟ್‌

ಇದನ್ನೂ ಓದಿ : Madurai govt bus accident: ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್: 10ಕ್ಕೂ ಹೆಚ್ಚು ಮಂದಿಗೆ ಗಾಯ

ಇದೀಗ ಅಪಘಾತದ ಕುರಿತು ಗಂಗಾಯಮ್ಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ.

Govt bus-van accident: Govt bus-van collision: Three from the same family killed

Comments are closed.