Realme 9i Review: ರಿಯಲ್‌ಮಿ 9i; ಕಾಸಿಗೆ ತಕ್ಕ ಕಜ್ಜಾಯ ಈ ಸ್ಮಾರ್ಟ್‌ಫೋನ್

ರಿಯಲ್‌ಮಿ ತನ್ನ ಸ್ಟೈಲಿಶ್ ಫೋನ್‌ ಹಾಗೂ ಆಕರ್ಷಕ ಬೆಲೆಗಳಲ್ಲಿ ಗ್ರಾಹಕರ ಕಣ್ಣುಗಳನ್ನು ಸೆಳೆಯುತ್ತಿದೆ. ಈಗ ರಿಯಲ್ ಮಿ 9ಐ(Realme 9i) ಪಟ್ಟಿಗೆ ಸೇರುತ್ತದೆ, ಇದು ಕೆಲವು ಟ್ರೆಂಡಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇವೆಲ್ಲವೂ 15,000 ಕ್ಕಿಂತ ಕಡಿಮೆ ಬೆಲೆಯಿಂದ ಪ್ರಾರಂಭವಾಗುತ್ತದೆ. ರಿಯಲ್‌ಮಿ 9ಐ (Realme 9i Review) ಫೋನ್ 5G ಸಂಪರ್ಕವನ್ನು ಬೆಂಬಲಿಸದಿದ್ದರೂ, ಇದು ಸ್ಪರ್ಧಾತ್ಮಕ 5G ಫೋನ್‌ಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ.ಇದು ಮೊಟೊರೊಲಾ ಮತ್ತು ಶಿಯೋಮಿಗಿಂತಲೂ ತುಂಬ ಚೀಪರ್ ಆಗಿದೆ.

ಮೊದಲ ನೋಟದಲ್ಲಿ, ಹೊಳಪು ಬಣ್ಣ ಮತ್ತು ಸ್ಟಿರಿಯೊ ಪ್ರಿಸ್ಮ್ ವಿನ್ಯಾಸವು ಆಕರ್ಷಿಸುತ್ತದೆ. ಪಾರದರ್ಶಕ ಪ್ಲಾಸ್ಟಿಕ್ ಬ್ಯಾಕ್ ಕವರ್, ಚಾರ್ಜರ್, ಸಿಮ್ ಕಾರ್ಡ್ ಎಜೆಕ್ಟರ್ ಮತ್ತು ಕೈಪಿಡಿಯನ್ನು ಹೊಂದಿರುವ ಹಳದಿ ಕಪ್ಪು ಪೆಟ್ಟಿಗೆಯಲ್ಲಿ ಫೋನ್ ಪ್ಯಾಕ್ ಮಾಡಲಾಗಿದೆ. ಇದು ಪ್ರಿಸ್ಮ್ ಬ್ಲೂ ಹಾಗೂ ಪ್ರಿಸ್ಮ್ ಬ್ಲಾಕ್ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಫೋನ್ ಪ್ಲಾಸ್ಟಿಕ್ ಬಾಡಿ ಹೊಂದಿದ್ದು, ಹಿಡಿದಿಡಲು ಮತ್ತು ಸಾಗಿಸಲು ತುಂಬಾ ಆರಾಮದಾಯಕವಾಗಿದೆ. ಇದು 190 ಗ್ರಾಂ ತೂಕವನ್ನು ಹೊಂದಿದೆ ಮತ್ತು 8.4mm ನ ಸ್ಲಿಮ್ ವಿನ್ಯಾಸವನ್ನು ಹೊಂದಿದೆ.

ಡಿಸ್‌ಪ್ಲೇ
ರಿಯಲ್ ಮಿ 9ಐ ಎಲ್ ಸಿಡಿ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು 6.6 ಇಂಚಿನ ದೊಡ್ಡ ಪರದೆಯ ಗಾತ್ರವನ್ನು ನೀಡುತ್ತದೆ. ದೊಡ್ಡ ಡಿಸ್ಪ್ಲೇ, ಪೂರ್ಣ ಎಚ್ ಡಿ+ ರೆಸಲ್ಯೂಶನ್ ಮತ್ತು 90 ಹರ್ಟ್ಸ್ ರಿಫ್ರೆಶ್ ದರ ಹೊಂದಿದೆ. ಸಬ್‌ವೇ ಸರ್ಫರ್ಸ್, ರೇಸ್ ಮಾಸ್ಟರ್, ಟೆಂಪಲ್ ರನ್ ಮುಂತಾದ ಆಟಗಳನ್ನು ಆಡುವಾಗ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುವಾಗ, ಯಾವುದೇ ವಿಳಂಬ ಇರುವುದಲ್ಲ.

ಪರ್ಫಾರ್ಮೆನ್ಸ್
ಇದು (Qualcomm Snapdragon 680 Octa Core ) 6 ಎಂ ಎಂ ಚಿಪ್‌ಸೆಟ್ ಅನ್ನು ನೀಡುತ್ತಿದೆ. ಹಾಗೆ, ಆಂಡ್ರಾಯ್ಡ್ 11 ಅನ್ನು ಬೆಂಬಲಿಸುತ್ತದೆ .ಫೋನ್ ಸುಮಾರು 15 ಪ್ರಿ ಡೌನ್ಲೋಡ್ ಮಾಡಿದ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ; ಅವುಗಳಲ್ಲಿ ಹೆಚ್ಚಿನವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬಹುದು. ರಿಯಲ್ ಮಿ 9ಐಬಹುತೇಕ ಜಾಹೀರಾತು ಮುಕ್ತವಾಗಿದೆ . ಈ ಬೆಲೆ ಶ್ರೇಣಿಯಲ್ಲಿ ಕೆಲವು ಸ್ಪರ್ಧಿಗಳು ಒದಗಿಸುತ್ತಿರುವ 5G ನೆಟ್‌ವರ್ಕ್ ಅನ್ನು ಫೋನ್ ಬೆಂಬಲಿಸುವುದಿಲ್ಲ. ಫೋನ್‌ನ ಒಟ್ಟಾರೆ ಕಾರ್ಯಕ್ಷಮತೆಯು ಫೋನ್ ನೀಡುತ್ತಿರುವ ಬೆಲೆ ಶ್ರೇಣಿಗೆ ಸಾಕಷ್ಟು ತೃಪ್ತಿಕರವಾಗಿದೆ. ನೀವು 4ಜಿಬಿ/64ಜಿಬಿ ರೂಪಾಂತರವನ್ನು 13999ರೂ.ಗೆ ಪಡೆಯಬಹುದು. ಆದರೆ 6ಜಿಬಿ/128ಜಿಬಿ ರೂಪಾಂತರದ ಬೆಲೆ ರೂ. 15,999.

ಕ್ಯಾಮರಾ
ಹಿಂಬದಿಯ ಕ್ಯಾಮೆರಾಗಳು 50ಎಂಪಿ ಮೈನ್ ಲೆನ್ಸ್ 2ಎಂಪಿ ಪೋರ್ಟ್ರೇಟ್ ಕ್ಯಾಮೆರಾ ಮತ್ತು 2ಎಂಪಿ ಮ್ಯಾಕ್ರೋ ಕ್ಯಾಮೆರಾದೊಂದಿಗೆ ಜೋಡಿಸಲಾಗಿದೆ. ಫೋನ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಬೆಂಬಲಿಸುವುದಿಲ್ಲ. ಅಲ್ಲದೆ, ಪ್ರತಿಯೊಂದು ಫೋನ್ ಹೆಚ್ಚು ಮೆಗಾಪಿಕ್ಸೆಲ್‌ಗಳೊಂದಿಗೆ ಬರುತ್ತಿರುವ ಸಮಯದಲ್ಲಿ, ಈ ಫೋನ್ 2ಎಂಪಿ ಕ್ಯಾಮೆರಾವನ್ನು ನೀಡುತ್ತಿರುವುದು ನಿರಾಶಾದಾಯಕವಾಗಿದೆ.

ಬ್ಯಾಟರಿ
ರಿಯಲ್ ಮಿ 9ಐ 5000 ಎಂಎ ಎಚ್ ಬ್ಯಾಟರಿ ಹೊಂದಿದ್ದು, 33 ವ್ಯಾಟ್ ಚಾರ್ಜಿಂಗ್ ಹೊಂದಿದೆ. ಇದು 2 ದಿನಗಳ ಬ್ಯಾಟರಿ ಬ್ಯಾಕ್ ಅಪ್ ನೀಡುತ್ತದೆ.

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

ಇದನ್ನೂ ಓದಿ: FD on Google Pay: ಗೂಗಲ್‌ ಪೇಯಲ್ಲೇ ಎಫ್‌ಡಿ ಅಕೌಂಟ್ ತೆರೆಯಬಹುದು!

(Realme 9i Review best phone for low price)

Comments are closed.