District incharge ministers : ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾವ ಸಚಿವರಿಗೆ ಯಾವ ಜಿಲ್ಲೆ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ( District incharge ministers ) ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಹಲವು ಸಚಿವರ ಜಿಲ್ಲೆಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಬೆಂಗಳೂರು ನಗರ ಉಸ್ತುವಾರಿಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರೇ ಉಳಿಸಿಕೊಂಡಿದ್ರೆ, ಉಡುಪಿಗೆ ಅಂಗಾರ, ದಕ್ಷಿಣ ಕನ್ನಡಕ್ಕೆ ಸುನಿಲ್‌ ಕುಮಾರ್‌, ಚಿಕ್ಕಮಗಳೂರಿಗೆ ಈಶ್ವರಪ್ಪ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಮುಖ್ಯಮಂತ್ರಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

ಬಸವರಾಜ ಬೊಮ್ಮಾಯಿ : ಬೆಂಗಳೂರು ನಗರ
ಗೋವಿಂದ ಎಂ ಕಾರಜೋಳ : ಬೆಳಗಾವಿ
ಕೆ ಎಸ್ ಈಶ್ವರಪ್ಪ: ಚಿಕ್ಕಮಗಳೂರು
ಬಿ ಶ್ರೀರಾಮುಲು : ಬಳ್ಳಾರಿ
ವಿ.ಸೋಮಣ್ಣ : ಚಾಮರಾಜನಗರ
ಉಮೇಶ್ ಕತ್ತಿ : ವಿಜಯಪುರ
ಎಸ್ ಅಂಗಾರ : ಉಡುಪಿ
ಅರಗ ಜ್ಞಾನೇಂದ್ರ : ತುಮಕೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ : ರಾಮನಗರ
ಸಿ.ಸಿ.ಪಾಟೀಲ್ : ಬಾಗಲಕೋಟೆ
ಆನಂದ್ ಸಿಂಗ್ : ಕೊಪ್ಪಳ
ಕೋಟಾ ಶ್ರೀನಿವಾಸಪೂಜಾರಿ : ಉತ್ತರ ಕನ್ನಡ
ಪ್ರಭು ಚೌವ್ಹಾಣ್ : ಯಾದಗಿರಿ
ಮುರುಗೇಶ್ ನಿರಾಣಿ : ಕಲಬುರ್ಗಿ
ಶಿವರಾಂ ಹೆಬ್ಬಾರ್ : ಹಾವೇರಿ
ಎಸ್ ಟಿ ಸೋಮಶೇಖರ್ : ಮೈಸೂರು
ಬಿ.ಸಿ.ಪಾಟೀಲ್ : ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ್ : ದಾವಣಗೆರೆ
ಡಾ.ಕೆ.ಸುಧಾಕರ್ : ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ : ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ : ವಿಜಯನಗರ
ಎಂಟಿಬಿ ನಾಗಾರಾಜ್ : ಚಿಕ್ಕಬಳ್ಳಾಪುರ
ಕೆ ಸಿ ನಾರಾಯಣಗೌಡ : ಶಿವಮೊಗ್ಗ
ಬಿ.ಸಿ.ನಾಗೇಶ್ : ಕೊಡಗು
ವಿ.ಸುನೀಲ್ ಕುಮಾರ್ : ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ : ಧಾರವಾಡ
ಶಂಕರ್ ಬಿ ಪಾಟೀಲ್ ಮುನೇನಕೊಪ್ಪ : ರಾಯಚೂರು ಮತ್ತು ಬೀದರ್
ಮುನಿರತ್ನ: ಕೋಲಾರ

ಇದನ್ನೂ ಓದಿ : ಸದ್ಯಕ್ಕೆ ವಿಸ್ತರಣೆಯಾಗಲ್ಲ ಸಂಪುಟ : ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್

ಇದನ್ನೂ ಓದಿ : ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ಗೆ ಕೊರೊನಾ ಸೋಂಕು ಧೃಡ

ಇದನ್ನೂ ಓದಿ : Sister in Law kidnapped : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

(Karnataka Chief Minister Basavaraj Bommai Appointed District incharge ministers)

Comments are closed.