Corona Negative Report : ಬಿಬಿಎಂಪಿ ಕೊರೋನಾ ನೆಗೆಟಿವ್ ರಿಪೋರ್ಟ್ ಕೊಡಲ್ಲ, ಕಂಪನಿಗಳು ಬಿಡಲ್ಲ: ಸೋಂಕಿತರ ಪರದಾಟ ಕೇಳೋರಿಲ್ಲ

ಬೆಂಗಳೂರು : ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪೈಕಿ ಸಾವಿರಾರು ಜನರು ಹೋಂ ಐಷೋಲೇಶನ್ ನಲ್ಲಿದ್ದಾರೆ. ಆದರೆ ಕಾಡಿದ ಕೊರೋನಾದಿಂದ ಮುಕ್ತಿ ಹೊಂದಿದವರಿಗೆ ನೆಗೆಟಿವ್ ರಿಪೋರ್ಟ್ ( Corona Negative Report ) ಪಡೆಯೋದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಮ್ಮೆ ಕೊರೋನಾ ಟೆಸ್ಟ್ ಗೆ ಒಳಗಾಗಿ ಮುಕ್ತಿ ಹೊಂದಿದವರಿಗೆ ಮತ್ತೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲು ಬಿಬಿಎಂಪಿ ಸಿದ್ಧವಿಲ್ಲ. ಹೀಗಾಗಿ ಕೊರೋನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಕಂಪನಿಗಳಿಗೆ ಹಿಂತಿರುಗುವ ಉದ್ಯೋಗಿಗಳಿಗೆ ಕೊರೋನಾ ನೆಗೆಟಿವ್ ರಿಪೋರ್ಟ್ ದೊಡ್ಡ ಸಮಸ್ಯೆಯಾಗಿದೆ.

ನಗರದಲ್ಲಿ ಅಂದಾಜು 2.25 ಲಕ್ಷ ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವ್ ಆದ 7 ದಿನಕ್ಕೆ ಹೋಂ ಐಸೋಲೇಷನ್ ನಿಂದ ಅಟೋ ಎಕ್ಸಿಟ್ ಆಗ್ತಾರೆ.ಹೋಂ ಐಸೋಲೇಷನ್ ನಿಂದ‌ ಹೊರಬಂದವರು ಪುನಃ ಕೆಲಸಕ್ಕೆ ಹೋಗಲು ನೆಗೆಟಿವ್ ರಿಪೋರ್ಟ್ ಕೇಳ್ತಿದಾರೆ.ಆದರೆ ಪುನಃ ಆರ್ ಟಿಪಿಸಿಆರ್ ಟೆಸ್ಟ್ ಮಾಡಲು ಬಿಬಿಎಂಪಿ ಹಿಂದೇಟು ಹಾಕ್ತಿದೆ.

ಆರೋಗ್ಯ ಇಲಾಖೆ ನಿಯಮದಂತೆ ಒಮ್ಮೆ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡದವರಿಗೆ ಪುನಃ 7 ದಿನಗಳ ಬಳಿಕ ಟೆಸ್ಟ್ ಮಾಡಿ ನೋಡಬೇಕು. ಆದರೆ ಬಿಬಿಎಂಪಿ ಮತ್ತೊಮ್ಮೆ ಚೆಕ್ ಮಾಡಲು ಸಿದ್ಧ ವಿಲ್ಲ. ಹೀಗಾಗಿ ಸೋಂಕಿನ ಬಳಿಕ ಕಂಪನಿಗೆ ಹಿಂತಿರುಗುವು ಉದ್ಯೋಗಿಗಳು ನೆಗೆಟಿವ್ ರಿಪೋರ್ಟ್ ಗಾಗಿ ಒದ್ದಾಡುತ್ತಿದ್ದಾರೆ. ಖಾಸಗಿಯಾಗಿ ಟೆಸ್ಟ್ ಮಾಡಿಸಲು ಸಾವಿರಾರು ರೂಪಾಯಿ ತೆರಬೇಕು. ಹೀಗಾಗಿ ಜನರು ಬಿಬಿಎಂಪಿ ಮೊರೆ ಹೋಗುತ್ತಿದ್ದಾರೆ.

ಆದರೆ ಇದಕ್ಕೆ ಬಿಬಿಎಂಪಿ ಸಿದ್ಧವಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ, 7 ದಿನ ನಂತ್ರ ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಗುಣಮುಖರಾದ್ರೆ ಅವರಿಗೆ ಯಾವುದೇ ಟೆಸ್ಟ್ , ಪ್ರಮಾಣಪ್ರತ ಬೇಕಿಲ್ಲ ಕೆಲ ಕಚೇರಿ, ಕಂಪನಿ, ಕಾರ್ಖಾನೆಗಳಲ್ಲಿ ನೆಗೆಟಿವ್ ವರದಿ ಕೇಳುತ್ತಿರುವುದು ಗಮನಕ್ಕೆ ಬಂದಿಲ್ಲ, ಈ‌ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಬಿಬಿಎಂಪಿ ರೂಲ್ಸ್ ಹಾಗೂ ಕಂಪನಿಗಳ ರೂಲ್ಸ್ ನಡುವೆ ಉದ್ಯೋಗಿಗಳು ಪರದಾಡುತ್ತಿದ್ದಾರೆ. ಕಂಪನಿಗಳು ನೆಗೆಟಿವ್ ರಿಪೋರ್ಟ್ ಇಲ್ಲದೇ ಉದ್ಯೋಗಿಗಳನ್ನು ಬಿಟ್ಟುಕೊಳ್ಳುತ್ತಿಲ್ಲ.‌ ಬಿಬಿಎಂಪಿ ಒಂದು ಹಂತದ ಟೆಸ್ಟ್ ಬಳಿಕ ಎರಡನೇ ಹಂತದಲ್ಲಿ ಟೆಸ್ಟ್ ನಡೆಸಲು ಸಿದ್ಧವಿಲ್ಲ. ಈ ಸಮಸ್ಯೆ ಬಗ್ಗೆ ಬಿಬಿಎಂಪಿ ಸೂಕ್ತ ಆದೇಶ ಹೊರಡಿಸುವ ಮೂಲಕ ಜನರ ಪರದಾಟಕ್ಕೆ ಪರಿಹಾರ ನೀಡಬೇಕಿದೆ.

ಇದನ್ನೂ ಓದಿ : ದೇಶದಲ್ಲಿ ಒಂದೇ ದಿನ 3.06 ಲಕ್ಷ ಹೊಸ ಕೋವಿಡ್​ ಪ್ರಕರಣ ಧೃಡ

ಇದನ್ನೂ ಓದಿ : ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್​ 1

( BBMP Corona Negative Report Not Given, Companies Not Leaving, trouble in employees)

Comments are closed.