Redmi A1 and Redmi 11 Prime : ಶಿಯೋಮಿಯ ಬಹುನೀರಿಕ್ಷಿತ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಅನಾವರಣ

ಶಿಯೋಮಿ (Xiaomi) ಅತ್ಯಂತ ಜನಪ್ರಿಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಒಂದಾಗಿದೆ. ಶಿಯೋಮಿ ಬಹುನಿರೀಕ್ಷಿತ ಹೊಸ ಸ್ಮಾರ್ಟ್‌ಫೋನ್‌ಗಳಾದ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್‌ 5G (Redmi A1 and Redmi 11 Prime) ಸೆಪ್ಟೆಂಬರ್‌ 6 ರಂದು ಪರಿಚಯಿಸಲಿದೆ ಎಂದು ಕಳೆದ ವಾರ ತಿಳಿಸಿತ್ತು. ಈ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಶಿಯೋಮಿ ಮತ್ತೆ ಭಾರತದಲ್ಲಿ ಬಜೆಟ್‌ ಫ್ರೆಂಡ್ಲಿ ಮೊಬೈಲ್‌ ನೀಡಲು ಮುಂದಾಗಿದೆ. ಈ ಎರಡೂ ಫೋನ್‌ಗಳ ಲೈವ್‌ ಲಿಂಕ್‌ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿದೆ.

ರೆಡ್‌ಮಿ A1 (Redmi A1) ವೈಶಿಷ್ಟ್ಯತೆಗಳು :
ರೆಡ್‌ಮಿ A1 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಸುರಕ್ಷಿತ ಸಾಫ್ಟ್‌ವೇರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹೀಲಿಯೊ A22 ಚಿಪ್‌ಸೆಟ್‌ ಹೊಂದಿದ್ದು, ಮೀಡಿಯಾ ಟೆಕ್‌ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಇದು ಶಕ್ತಿಶಾಲಿ 5000 mAh ಬ್ಯಾಟರಿ ಬ್ಯಾಕಪ್‌ ಹೊಂದಿದೆ. ಡ್ಯುಯಲ್‌ ಕ್ಯಾಮೆರಾ ಸೆಟ್‌–ಅಪ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ವಾಟರ್‌ ಡ್ರಾಪ್‌ ನಾಚ್‌ ಅನ್ನು ಪಡೆದುಕೊಂಡಿದೆ. ಫೋನ್‌ ಕವರ್‌ ಗಟ್ಟಿಯಾದ ಲೆದರ್‌ ಸ್ಟೈಲ್‌ನ ಪ್ಲಾಸ್ಟಿಕ್‌ ಹೊದಿಕೆಯನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ. ಇದು ಮೂರು ಬಣ್ಣ ಗಳ ಮಾದರಿಯಲ್ಲಿ ಲಭ್ಯವಾಗಲಿದೆ. ಇದರ ಬೆಲೆಯು 10,000ಕ್ಕಿಂತ ಕಡಿಮೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Samsung Smartphone Launch :ಸ್ಯಾಮ್ ಸಂಗ್ ನಿಂದ ಮತ್ತೆರಡು ಸ್ಮಾರ್ಟ್ ಫೋನ್ ಬಿಡುಗಡೆ

ರೆಡ್‌ಮಿ 11 ಪ್ರೈಮ್‌ (Redmi 11 Prime 5G) ವೈಶಿಷ್ಟ್ಯತೆಗಳು :
ರೆಡ್‌ಮಿ 11 ಪ್ರೈಮ್‌ ಇದು ಶಿಯೋಮಿ ಪರಿಚಯಿಸುತ್ತಿರವ 5G ಫೋನ್‌ ಆಗಿದೆ. ರೆಡ್‌ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಹಿಂಬದಿಯ ಟ್ರಿಪಲ್‌ ಕ್ಯಾಮೆರಾ ಹೊಂದಿದೆ ಮತ್ತು 50 ಮೆಗಾಪಿಕ್ಸೆಲ್‌ ಸಾಮರ್ಥ್ಯ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 700 ಚಿಪ್‌ಸೆಟ್‌ ಪಡೆದುಕೊಂಡಿದೆ. ರೆಡ್‌ಮಿ 11 ಪ್ರೈಮ್‌ ಶಕ್ತಿಶಾಲಿ 5000 mAh ಬ್ಯಾಟರಿ ಪಡೆದುಕೊಂಡಿದೆ. ಇದರ 4 G ಆವೃತ್ತಿಯ ಸ್ಮಾರ್ಟ್‌ಫೋನ್‌ ಹೀಲಿಯೊ G99 ಚಿಪ್‌ಸೆಟ್‌ನಿಂದ ಚಾಲನೆಗೊಳ್ಳುತ್ತಿತ್ತು. ಹೊಸ ಸ್ಮಾರ್ಟ್‌ಫೋನ್‌ ರೆಡ್‌ಮಿ 11 ಪ್ರೈಮ್‌ ಮೊದಲ ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಎರಡೂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಪೂರ್ಣವಾಗಿ HD ಪಡೆದಕೊಂಡಿದೆ. ಇದು 6.8 ಇಂಚಿನ IPS LCD ಯನ್ನು ಡಿಸ್ಪ್ಲೇ ಹೊಂದಿದೆ. ಇದು 3 ಬಗೆಯ ಆಕ್ವಾ ಗ್ರೀನ್‌, ಪರ್ಪಲ್‌ ಮತ್ತು ಬ್ಲ್ಯಾಕ್‌ ಬಣ್ಣಗಳ ಲಭ್ಯವಾಗಲಿದೆ. ಅಮೆಜಾನ್‌ ಮೂಲಕ ಈ ಫೋನ್‌ ಮಾರಾಟವಾಲಿದ್ದು ಖರೀದಿದಾರರು ಇದನ್ನು ಖರೀದಿಸುವ ಮೊದಲು ಸ್ಪರ್ಶಿಸಲು ಸಾಧ್ಯವಿಲ್ಲ.

ಇದನ್ನೂ ಓದಿ : Vivo V25 Pro : ಭಾರತದಲ್ಲಿ ಬಿಡುಗಡೆಯಾದ ವಿವೊ V25 ಪ್ರೋ : ಬಣ್ಣ ಬದಲಾಯಿಸುವ ಗ್ಲಾಸ್‌ ಇದರ ವೈಶಿಷ್ಟ್ಯ

(Redmi A1 and Redmi 11 Prime, Xiaomi’s launch the most awaited smartphone on September 6)

Comments are closed.