India biggest car thief arrested: ಭಾರತದ ಅತೀ ದೊಡ್ಡ ಕಾರು ಕಳ್ಳನ ಬಂಧನ : 5000 ಕಾರು ಕಳ್ಳನಿಗೆ 3 ಪತ್ನಿಯರು

ನವದೆಹಲಿ : (India biggest car thief arrested ) ಈತ ಸಾಮಾನ್ಯ ಆಸಾಮಿಯಲ್ಲ. ಈತ ದೇಶದ ಅತೀ ದೊಡ್ಡ ಕಾರು ಕಳ್ಳ. ಈತ ಕದ್ದಿರೋ ಕಾರುಗಳ ಸಂಖ್ಯೆ ಕೇಳಿದ್ರೆ ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ. ಅಷ್ಟಕ್ಕೂ ಈತ ಕದ್ದಿರೋದು ಬರೋಬ್ಬರಿ 5000 ಕಾರು. ಈ ಕಾರ್ಯಕ್ಕೆ ಸಾಥ್‌ ಕೊಡ್ತಾ ಇದ್ದಿದ್ದು, ಈತನ ಮೂವರು ಪತ್ನಿಯರು.

ದೇಶದ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕದ್ದ ಆರೋಪದ ಹಿನ್ನೆಲೆಯಲ್ಲಿ ಅನಿಲ್ ಚೌಹಾಣ್ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸೆಂಟ್ರಲ್ ದೆಹಲಿ ಪೋಲೀಸ್‌ನ ವಿಶೇಷ ಸಿಬ್ಬಂದಿ ಆರೋಪಿಯನ್ನುದೇಶ್ ಬಂಧು ಗುಪ್ತಾ ರಸ್ತೆ ಪ್ರದೇಶದಲ್ಲಿ ಬಂಧಿಸಿದ್ದರು. ಆರೋಪಿಯು ಕಳೆದ 27 ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾನೆ. ಅಲ್ಲದೇ ಅನಿಲ್ ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದಾನೆ.

ಕೇವಲ ಕಾರು ಕಳ್ಳತನದ ಆರೋಪ ಮಾತ್ರವಲ್ಲ, ಈತ ಈಶಾನ್ಯ ರಾಜ್ಯಗಳಿಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣಿ ಮಾಡುವ ಕೃತ್ಯದಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ಈತ ಹಲವು ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ. ಬಂಧಿತ ಆರೋಪಿಯಿಂದ ಪೊಲೀಸರು ಆರು ಪಿಸ್ತೂಲ್‌ಗಳು ಮತ್ತು ಏಳು ಕಾಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನಿಲ್ ಬಂಧನವಾಗುತ್ತಿರುವುದು ಇದೇ ಮೊದಲಲ್ಲ. 2015 ರಲ್ಲಿ, ಒಮ್ಮೆ ಕಾಂಗ್ರೆಸ್ ಶಾಸಕರ ಜೊತೆ, ಅವರು ಐದು ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು 2020 ರಲ್ಲಿ ಬಿಡುಗಡೆಯಾಗಿದ್ದ.

ಅನಿಲ್ ದೆಹಲಿಯ ಖಾನ್ಪುರ್ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದು, ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದ್ರೆ 1995ರ ಸುಮಾರಿಗೆ ಕಾರುಗಳನ್ನು ಕದಿಯಲು ಆರಂಭಿಸಿದ್ದ ಅನಿಲ್‌ ಚೌಹಾಣ್‌, ದೇಶದ ವಿವಿಧ ಭಾಗಗಳಲ್ಲಿ ಕಾರುಗಳನ್ನು ಕಳವು ಮಾಡಿದ್ದಾನೆ. ನೇಪಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ.

ಕಳ್ಳತನದ ವೇಳೆಯಲ್ಲಿ ಅನಿಲ್ ಕೆಲವು ಟ್ಯಾಕ್ಸಿ ಚಾಲಕರನ್ನು ಸಹ ಕೊಲೆ ಮಾಡಿದ್ದಾನೆ. ಈತ ಸಂಪಾದಿಸಿದ್ದ ಅಕ್ರಮ ಸಂಪಾದನೆಯಿಂದ ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಸ್ತಿ ಸಂಪಾದಿಸಿದ್ದಾನೆ. ಇನ್ನ ಜಾರಿ ನಿರ್ದೇಶನಾಲಯ (ಇಡಿ) ಕೂಡ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಈತನ ವಿರುದ್ಧ ಇದುವರೆಗೆ ಒಟ್ಟು 180 ಪ್ರಕರಣಗಳು ದಾಖಲಾಗಿವೆ.

ಕಾರು ಕಳ್ಳತನದಿಂದ ಸಂಪಾದಿಸಿದ್ದ ಹಣದಲ್ಲಿ ಅನಿಲ್‌ ಐಶಾರಾಮಿ ಜೀವನವನ್ನು ಸಾಗಿಸುತ್ತಿದ್ದ. ಈತನಿಗೆ ಒಟ್ಟು ಮೂವರು ಪತ್ನಿಯರು ಹಾಗೂ ಏಳು ಮಂದಿ ಮಕ್ಕಳಿದ್ದಾರೆ. ಅಸ್ಸಾಂನಲ್ಲಿ ಸರಕಾರಿ ಗುತ್ತಿಗೆದಾರ ವ್ಯಕ್ತಿ ಹಾಗೂ ಸ್ಥಳೀಯ ಮುಖಂಡರ ಜೊತೆಗೂ ಈತ ಸಂಪರ್ಕವನ್ನು ಹೊಂದಿದ್ದ.

ಇದನ್ನೂ ಓದಿ : ಚಿರು ಸ್ನೇಹಿತರ ಹೊಸ ಸಾಹಸ‌ : ಒಂದೇ ಸಿನಿಮಾದಲ್ಲಿ ಪನ್ನಾಗಭರಣ, ಮೇಘನಾರಾಜ್‌ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್

ಇದನ್ನೂ ಓದಿ : close the liquor shop : ಮದ್ಯದಂಗಡಿ ಬಂದ್​ ಮಾಡಿಸಲು ಮದ್ಯ ಸೇವಿಸಿ ಪ್ರತಿಭಟನೆಗೆ ಕುಳಿತ ಭೂಪ

5000 cars property in Mumbai and Delhi, 3 wives India biggest car thief arrested

Comments are closed.