Redmi Note 12 Series : ಭಾರತದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್‌ 12 ಸರಣಿ ಸ್ಮಾರ್ಟ್‌ಫೋನ್‌ಗಳು; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯ

ಶಿಯೋಮಿ (Xiaomi) ಕೈಗೆಟುಕುವ ಬೆಲೆಯ ಮೂರು ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ರಾಹಕರ ಅಗತ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಅದು ರೆಡ್ಮಿ ನೋಟ್‌ 12 ಸರಣಿಯ ಫೋನ್‌ಗಳನ್ನು ಬಿಡುಗಡೆಮಾಡಿದೆ (Redmi Note 12 Series). ರೆಡ್ಮಿ ನೋಟ್‌ 12, ರೆಡ್ಮಿ ನೋಟ್‌ 12 ಪ್ರೋ, ಮತ್ತು ರೆಡ್ಮಿ ನೋಟ್‌ 12 ಪ್ರೋ+ (Redmi Note 12, Redmi Note 12 Pro, Redmi Note 12 Pro+) ಇವು ಬಿಡುಗಡೆಯಾದ ನೋಟ್‌ 12 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳಾಗಿವೆ. ಹೊಸ ಮಧ್ಯಮ ಶ್ರೇಣಿಯ ಈ ಫೋನ್‌ಗಳು AMOLED ಡಿಸ್ಪ್ಲೇ, ದೊಡ್ಡ ಬ್ಯಾಟರಿ ಮತ್ತು ಹುಡ್ ಅಡಿಯಲ್ಲಿ ಸಾಕಷ್ಟು ವೇಗದ ಚಿಪ್ಸೆಟ್ ಅನ್ನು ಹೊಂದಿವೆ. ಎಲ್ಲಾ ಫೋನ್‌ಗಳು IP53 ರೇಟ್ ಮಾಡಲ್ಪಟ್ಟಿವೆ. 2023 ರ ಆರಂಭದಲ್ಲೇ ಬಿಡುಗಡೆಯಾದ ಹೊಸ 5G ಫೋನ್‌ಗಳು Mi.com ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ.

ರೆಡ್ಮಿ ನೋಟ್‌ 12 ಸರಣಿಯ ವೈಶಿಷ್ಟ್ಯಗಳು :
ರೆಡ್ಮಿ ನೋಟ್‌ 12 ಸರಣಿಯ ಸ್ಮಾರ್ಟ್‌ಫೋನ್‌ಗಳು 6.67-ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು DCI-P3 ಕಲರ್ ಗ್ಯಾಮಟ್‌ ಅನ್ನು ಹೊಂದಿದೆ. ಈ ಸರಣಿಯಲ್ಲಿನ ಫೋನ್‌ ಉನ್ನತ ಮಾದರಿಗಳು HDR10+ ಮತ್ತು ಡಾಲ್ಬಿ ವಿಷನ್‌ಗೆ ಬೆಂಬಲವನ್ನು ನೀಡುವ ಪರದೆಯನ್ನು ಹೊಂದಿವೆ. ಇದರ ಪ್ಯಾನಲ್‌ಗಳು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಣೆಯನ್ನು ಪಡೆದುಕೊಂಡಿವೆ. ನೋಟ್‌ 12 5G ಫೋನ್‌ಗಳು ಸ್ನಾಪ್‌ಡ್ರಾಗನ್ 4 Gen 1 ಚಿಪ್‌ಸೆಟ್ ನಿಂದ ಚಾಲಿತವಾಗುತ್ತದೆ. iQOO Z6 Lite ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ. ರೆಡ್ಮಿ ನೋಟ್‌ 12 ಪ್ರೋ ಮತ್ತು 12 ಪ್ರೋ+ ಮಾದರಿಗಳು ಮೀಡಿಯಾಟೆಕ್‌ ಡೈಮೆನ್ಸಿಟಿ 1080 ಚಿಪ್‌ಸೆಟ್ ಅನ್ನು ಒಳಗೊಂಡಿವೆ.

ಕ್ಯಾಮೆರಾ :
ಇನ್ನು ಕ್ಯಾಮೆರಾದ ವಿಷಯದಲ್ಲಿ, ರೆಡ್ಮಿ ನೋಟ್‌ 12 5G ಫೋನ್‌ 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ ಸಂಯೋಜಿತವಾಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ರೆಡ್ಮಿ ನೋಟ್‌ 12 ಪ್ರೋ 5Gಯು ಹಿಂಭಾಗದಲ್ಲಿ ವಿಭಿನ್ನ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಒಳಗೊಂಡಿದೆ. ಈ ಸರಣಿಯ ಟಾಪ್-ಎಂಡ್ ಫೋನ್‌ ಆದ ರೆಡ್ಮಿ ನೋಟ್‌ 12 ಪ್ರೋ+ ಇತರ ಸಂವೇದಕಗಳ ಜೊತೆಗೆ ಹಿಂಭಾಗದಲ್ಲಿ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವುದು ವಿಶೇಷವಾಗಿದೆ.

ಬ್ಯಾಟರಿ ಕ್ಷಮತೆ :
ರೆಡ್ಮಿ ನೋಟ್‌ 12 5G ಫೋನ್‌ಗಳು 5,000mAh ಬ್ಯಾಟರಿಯನ್ನು ಹೊಂದಿದೆ. ಇದು 33W ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಮತ್ತುಈ ಸರಣಿಯ ನೋಟ್‌ 12 ಪ್ರೋ ಫೋನ್‌ಗಳು 67W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಆದರೆ ಪ್ರೋ+ ಫೋನ್‌ಗಳು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರೆಡ್ಮಿ ನೋಟ್ 12 ಸರಣಿ ಸ್ಮಾರ್ಟ್‌ಪೋನ್‌ಗಳ ಬೆಲೆಗಳು :
4GB RAM + 128GB ಸ್ಟೋರೇಜ್ ಹೊಂದಿರುವ ರೆಡ್ಮಿ ನೋಟ್‌ 12 ಸ್ಮಾರ್ಟ್‌ಫೋನ್‌ ನ ಬೆಲೆ 15,499 ರೂ.
ರೆಡ್ಮಿ ನೋಟ್‌ 12 ಪ್ರೋ ಆವೃತ್ತಿಯ ಸ್ಮಾರ್ಟ್‌ಫೋನ್‌ನ ಬೆಲೆ 20,999 ರೂ.
ಈ ಸರಣಿಯ ಟಾಪ್‌–ಎಂಡ್‌ ಫೋನ್‌ ರೆಡ್ಮಿ ನೋಟ್‌ 12 ಪ್ರೋ+ ಮಾದರಿಯು 25,999 ರೂಗಳ ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಮಾರಾಟವಾಗಲಿದೆ.

ಇದನ್ನೂ ಓದಿ : Twitter hacked : ಟ್ವಿಟರ್ ಹ್ಯಾಕ್, 200 ಮಿಲಿಯನ್ ಬಳಕೆದಾರರ ಇಮೇಲ್ ವಿಳಾಸ ಸೋರಿಕೆ

ಇದನ್ನೂ ಓದಿ : Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

(Redmi Note 12 Series, three smartphones launched in India. check prices and specifications)

Comments are closed.