Pregnant women set fire: ಪತಿಯನ್ನು ಹೆದರಿಸಲು ಬೆಂಕಿ ಹಚ್ಚಿಕೊಂಡ 7 ತಿಂಗಳ ಗರ್ಭಿಣಿ: ಸತ್ತಿದ್ದು ಮಾತ್ರ ಹೊಟ್ಟೆಯೊಳಗಿದ್ದ ಮಗು

ತಿರುವನಂತಪುರಂ: (Pregnant women set fire) ಗರ್ಭಿಣಿಯೊಬ್ಬಳು ತನ್ನ ಗಂಡನನ್ನು ಹೆದರಿಸಲು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ಪರಿಣಾಮ ಹೊಟ್ಟೆಯೊಳಗಿದ್ದ ಏಳು ತಿಂಗಳ ಮಗು ಸಾವನ್ನಪ್ಪಿದೆ. ತಿರುವನಂತಪುರಂನಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು 27 ವರ್ಷ ಪ್ರಾಯದ ಅರುಣಿಮಾ ಎಂದು ಗುರುತಿಸಲಾಗಿದೆ.

ಅರುಣಿಮಾ ಪತಿ ಅಜಯ್‌ ಪ್ರಕಾಶ್‌ ಯೋಧನಾಗಿದ್ದು, ರಜೆಯಿದ್ದ ಕಾರಣ ಇಬ್ಬರು ಊರಿಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಪರಸ್ಸಲಾ ನಿವಾಸಿಗಳಾಗಿದ್ದ, ಅಜಯ್‌ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ವಾಸಿಸುತ್ತಿದ್ದರು. ಇತ್ತೀಚೆಗೆ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಯಾವುದೋ ಒಂದು ವಿಚಾರಕ್ಕಾಗಿ ಗಂಡನನ್ನು ಹೆದರಿಸಲು ಸೀಮೆ ಎಣ್ಣೆ ಸುರಿದುಕೊಂಡು ಆಕೆ ಬೆಂಕಿ ಹಚ್ಚಿಕೊಂಡಿದ್ದಾಳೆ.

ಆದರೆ ಇವರಿಬ್ಬರ ಮಧ್ಯೆ ಯಾವುದೇ ರೀತಿಯ ಕೌಟುಂಬಿಕ ಕಲಹಗಳು ಇಲ್ಲವೆಂಬುದು ತಿಳಿದು ಬಂದಿದೆ. ಆದರೆ ಯಾವ ಕಾರಣಕ್ಕಾಗಿ ಆಕೆ ಈ ರೀತಿಯ ಕೃತ್ಯವೆಸಗಿಕೊಂಡಿದ್ದಾಳೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ಅರುಣಿಮಾಗೆ ತೀವ್ರ ಗಾಯಗಳಾಗಿದ್ದರೆ, ಇತ್ತ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ.

ಮೊದಲಿಗೆ ಅರುಣಿಮಾಳನ್ನು ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೊಟ್ಟೆಯಲ್ಲೇ ಮೃತಪಟ್ಟ ಮಗುವನ್ನು ಹೊರ ತೆಗೆದು ಮಹಿಳೆಯನ್ನು ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗೆ ತಿರುವನಂತಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಹಿಳೆಯ ಹುಚ್ಚಾಟಕ್ಕೆ ಬಲಿಯಾಗಿದ್ದು ಮಾತ್ರ ಪ್ರಪಂಚವನ್ನೇ ಕಾಣದ ಏನು ಅರಿಯದ ಹೊಟ್ಟೆಯೊಳಗಿದ್ದ ಏಳು ತಿಂಗಳ ಮಗು.

ಇದನ್ನೂ ಓದಿ : Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

ಇದನ್ನೂ ಓದಿ : Mandya KSRTC Bus accident: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್

ಇದನ್ನೂ ಓದಿ : US crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7 ಮಂದಿಗೆ ಗುಂಡಿಕ್ಕಿ ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

7 months pregnant woman set fire to scare her husband: only the baby in her stomach died

Comments are closed.